ಇರಾನ್ ಮೇಲೆ ಕ್ಷಿಪಣಿ ದಾಳಿ ಆರಂಭಿಸಿದ ಇಸ್ರೇಲ್ ಇರಾನ್ -ಇಸ್ರೇಲ್ ಯುದ್ಧ ಆರಂಭ

27

“ಕೊನೆಗೂ ನಿರೀಕ್ಷೆಯತೆಯೇ ಇರಾನ್ ಮೇಲೆ ಇಸ್ರೇಲ್ ದಾಳಿ ಮಾಡಿದ್ದು, ರಾಜಧಾನಿ ಟೆಹ್ರಾನ್ ಮೇಲೆ ಶನಿವಾರ ಭೀಕರ ಕ್ಷಿಪಣಿ ದಾಳಿ ಆರಂಭಿಸಿದೆ. ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ಆರಂಭವಾಗಿದ್ದು, ಅಮೆರಿಕ ಎಚ್ಚರಿಕೆ ಬೆನ್ನಲ್ಲೇ ಇಸ್ರೇಲ್ ಇರಾನ್ ಮೇಲೆ ಕ್ಷಿಪಣಿ ದಾಳಿ ಮಾಡಿದೆ.
ಇರಾನ್ ರಾಜಧಾನಿ ಟೆಹರಾನ್ ನಗರದ ಮೇಲೆ ಇಸ್ರೇಲ್ ಸೇನೆ ಕ್ಷಿಪಣಿ ದಾಳಿ ನಡೆಸಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಹಾಗೂ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಭವನ ಗುರಿಯಾಗಿಸಿ ಈ ಅಟ್ಯಾಕ್ ನಡೆದಿದ್ದು, ಟೆಹರಾನ್ನ ಹಲವೆಡೆ ಭಾರಿ ಸದ್ದಿನೊಂದಿಗೆ ಸರಣಿ ಸ್ಫೋಟ ಸಂಭವಿಸಿವೆ. ಕ್ಷಿಪಣಿ ದಾಳಿ, ಸರಣಿ ಸ್ಫೋಟದಿಂದ ಇರಾನ್ ಜನತೆ ತತ್ತರಿಸಿದ್ದಾರೆ. ಇರಾನ್ ಸೇನೆ ದಾಳಿ ನಡೆಸುವ ಸಾಧ್ಯತೆ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಇರಾನ್ ಮೇಲೆ ದಾಳಿ ನಡೆಸಿದ್ದೇವೆ ಎಂದು ಇಸ್ರೇಲ್ ಸ್ಪಷ್ಟನೆ ನೀಡಿದೆಸಂಭಾವ್ಯ ದಾಳಿ ತಡೆಗೆ ಈ ದಾಳಿ ಇರಾನ್ ಸಂಭಾವ್ಯ ದಾಳಿಗೆ ಪ್ರತಿಕ್ರಿಯೆಯಾಗಿ ಈ ಕ್ರಮ ಕೈಗೊಂಡಿರುವುದಾಗಿ ಇಸ್ರೇಲ್ ಸ್ಪಷ್ಟಪಡಿಸಿದೆ. ಅಮೆರಿಕ ಸಹಯೋಗದಲ್ಲಿ ಹಲವು ತಿಂಗಳುಗಳ ಯೋಜನೆಯಂತೆ ನಡೆದ ಈ ದಾಳಿಯಿಂದ ಅಮೆರಿಕ-ಇರಾನ್ ರಾಜತಾಂತ್ರಿಕ ಮಾತುಕತೆಗಳು ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ದಟ್ಟವಾಗಿದ್ದು, ಶನಿವಾರ ಮುಂಜಾನೆ ಇಸ್ರೇಲ್ ರಕ್ಷಣಾ ಪಡೆಗಳು ಇರಾನ್ ವಿರುದ್ಧ “ಮುನ್ನೆಚ್ಚರಿಕಾ ದಾಳಿ” ನಡೆಸಿವೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅಧಿಕೃತವಾಗಿ ಘೋಷಿಸಿದ್ದಾರೆ.
ಇರಾನ್ ತನ್ನ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದೆ ಎಂಬ ಗುಪ್ತಚರ ಮಾಹಿತಿ ಆಧರಿಸಿ, ಇಸ್ರೇಲ್ ಈ ಕ್ಷಿಪಣಿ ದಾಳಿ ನಡೆಸಿದೆ. ಇರಾನ್‌ನ ಪ್ರಮುಖ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಈ ಕಾರ್ಯಾಚರಣೆ ನಡೆದಿದೆ ಎನ್ನಲಾಗಿದೆ. ಸದ್ಯ ಇಸ್ರೇಲ್ ಸರ್ಕಾರವು ದೇಶಾದ್ಯಂತ ‘ಸ್ಟೇಟ್ ಆಫ್ ಎಮರ್ಜೆನ್ಸಿ’ (ತುರ್ತು ಪರಿಸ್ಥಿತಿ) ಘೋಷಿಸಿದ್ದು, ಇರಾನ್ ಯಾವುದೇ ಕ್ಷಣದಲ್ಲಿ ಇಸ್ರೇಲ್ ಮೇಲೆ ಡ್ರೋನ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮೂಲಕ ತಿರುಗೇಟು ನೀಡಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.
ಇಸ್ರೇಲ್ ಸಕಲ ಸಿದ್ಧತೆ ಅಂತೆಯೇ ಇರಾನ್‌ನ ಸಂಭವನೀಯ ಪ್ರತಿದಾಳಿಯನ್ನು ಎದುರಿಸಲು ಇಸ್ರೇಲ್‌ನ ‘ಐರನ್ ಡೋಮ್’ ಸೇರಿದಂತೆ ಎಲ್ಲ ವಾಯು ರಕ್ಷಣಾ ವ್ಯವಸ್ಥೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ನಾಗರಿಕರಿಗೆ ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಸೂಚನೆ ನೀಡಲಾಗಿದೆ. ಈ ಬೆಳವಣಿಗೆಯಿಂದಾಗಿ ಮಧ್ಯಪ್ರಾಚ್ಯದಲ್ಲಿ ಪೂರ್ಣ ಪ್ರಮಾಣದ ಯುದ್ಧ ಆರಂಭವಾಗುವ ಲಕ್ಷಣಗಳು ಕಾಣಿಸುತ್ತಿದ್ದು, ಅಮೆರಿಕ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ. ತುರ್ತು ಪರಿಸ್ಥಿತಿ ಘೋಷಣೆ ಇರಾನ್ ಮೇಲಿನ ದಾಳಿ ಬೆನ್ನಲ್ಲೇ ಇಸ್ರೇಲ್ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದ್ದು, ತುರ್ತುಸೇವೆ ಹೊರತುಪಡಿಸಿ ಉಳಿದ ಸೇವೆಗಳಿಗೆ ನಿರ್ಬಂಧ ವಿಧಿಸಲಾಗಿದೆ.
ತನ್ನ ವಾಯುಪ್ರದೇಶದಲ್ಲಿ ವಿಮಾನ ಹಾರಾಟವನ್ನೂ ಇಸ್ರೇಲ್ ನಿರ್ಬಂಧಿಸಿದೆ. ಇನ್ನು ಇಸ್ರೇಲ್ ನಡೆಸಿದ ದಾಳಿ ವೇಳೆ ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ತೇಹ್ರಾನ್‌ನಲ್ಲಿ ಇಲ್ಲ ಎಂದು ವರದಿಯಾಗಿದೆ. ಅಮೆರಿಕಾ ಅಧಿಕಾರಿಗಳು ನ್ಯೂಯಾರ್ಕ್ ಟೈಮ್ಸ್ ಮತ್ತು ರಾಯಟರ್ಸ್ಗೆ ನೀಡಿರುವ ಮಾಹಿತಿಯ ಪ್ರಕಾರ, ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಆಪರೇಷನ್ ಶೀಲ್ಡ್ ಆಫ್ ಜುದಾ ಪ್ರಾಥಮಿಕವಾಗಿ ಇರಾನ್ ಮೇಲಿನ ದಾಳಿ ಇಸ್ರೇಲ್ ನಡೆಸಿದೆಯಾದರೂ ಇದು ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿಯಾಗಿದೆ ಎಂದು ಹೇಳಲಾಗಿದೆ. ಶನಿವಾರ ಇರಾನ್ ಮೇಲೆ ಅಮೆರಿಕ, ಇಸ್ರೇಲ್ ಜಂಟಿಯಾಗಿ ಆಪರೇಷನ್ ಶೀಲ್ಡ್ ಆಫ್ ಜುದಾ ಹೆಸರಿನಲ್ಲಿ ವೈಮಾನಿಕ ದಾಳಿ ಮಾಡಿವೆ. ದಾಳಿ ಆರಂಭದ ಬಳಿಕ ಇರಾನ್ ಮತ್ತು ಇರಾಕ್ ತಮ್ಮ ವಾಯುಪ್ರದೇಶವನ್ನು ಮುಚ್ಚಿ ನಾಗರಿಕ ವಿಮಾನಗಳನ್ನು ನಿರ್ಬಂಧಿಸಿವೆ.

Leave a comment

Leave a Reply

Your email address will not be published. Required fields are marked *

Related Articles

ದಿಗ್ಬಂಧನ ನಡುವೆ ಹಾರ್ಮುಜ್ ಜಲಸಂಧಿ ಮೂಲಕ ಭಾರತೀಯ ಹಡಗು ಸಾಗಲು ಇರಾನ್ ಭರವಸೆ

ಟೆಹರಾನ್: ಅಮೆರಿಕ ಇರಾನ್ ಬಂದರುಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು, ಈ ಪ್ರದೇಶದಲ್ಲಿ ಮತ್ತೆ ಉದ್ವಿಗ್ನತೆ...

ಹೊರ್ಮುಜ್ ಜಲಸಂಧಿ ಕದನ ವಿರಾಮದ ತಪ್ಪು ತಿಳುವಳಿಕೆಯಿಂದ ಅನುಮತಿ ಇಲ್ಲದೆ ಬಂದರೆ ನಿಮ್ಮ ಸರಕು ಸಾಗಾಣಿಕ ಹಡಗುಗಳನ್ನು ಹೊಡೆದುರುಳಿಸ್ತೀವಿ:: ಇರಾನ್ ಎಚ್ಚರಿಕೆ

ಟೆಹ್ರಾನ್: ಕದನ ವಿರಾಮ ಘೋಷಣೆಯಾಗಿದೆ ಎಂದು ಇಡೀ ಜಗತ್ತು ಖುಷಿ ಪಡ್ತಿದ್ರೆ… ಅದ್ಯಾಕೋ ಇರಾನ್ ಯುದ್ಧ...

 ಬ್ರಿಟನ್ ಆಹ್ವಾನದ ಮೇರೆಗೆ    ಹಾರ್ಮುಜ್ ಜಲಸಂಧಿಯ  ಅಂತರರಾಷ್ಟ್ರೀಯ ಮಾತುಕತೆಯಲ್ಲಿ ಭಾರತ ಭಾಗಿ

ನವದೆಹಲಿ: ಯುನೈಟೆಡ್ ಕಿಂಗ್‌ಡಮ್‌(ಬ್ರಿಟನ್)ನ ಆಹ್ವಾನದ ಮೇರೆಗೆ ಭಾರತವು ಹಾರ್ಮುಜ್ ಜಲಸಂಧಿಯ ಕುರಿತು ಅಂತರರಾಷ್ಟ್ರೀಯ ಮಾತುಕತೆಯಲ್ಲಿ ಭಾಗವಹಿಸುತ್ತಿದೆ...

ಯುಎಇ ಮೇಲೆ ಇರಾನ್ ಕ್ಷಿಪಣಿ ಮತ್ತು  ಡ್ರೋನ್ ದಾಳಿ ಐವರು ಐವರು ಭಾರತೀಯರಿಗೆ ಗಾಯ

“ಇರಾನ್‌ ನಡೆಸಿದ ಕ್ಷಿಪಣಿ ಮತ್ತು ಡ್ರೋನ್ ದಾಳಿಯಿಂದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಕೈಗಾರಿಕಾ ವಲಯದಲ್ಲಿ ಭಾರೀ...