
ಈ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿಯಿಂದಾಗಿ, ಆರೋಗ್ಯ ಇಲಾಖೆಯೇ ಐಸಿಯುನಲ್ಲಿದ್ದು, ಪರಿಸ್ಥಿತಿ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂದರೆ ವೈದ್ಯರು ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾಗಿದೆ ಎಂದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ತೀವ್ರ ಕೊರತೆ ಇದೆ. 108 ಆಂಬ್ಯುಲೆನ್ಸ್ ಸೇವೆಗಳು ತೀವ್ರ ಸಮಸ್ಯೆ ಎದುರಿಸುತ್ತಿವೆ. ವೈದ್ಯರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ಮಾತ್ರ ಸಾಧನೆಯ ಸಮಾವೇಶಗಳೊಂದಿಗೆ ಅಧಿಕಾರಕ್ಕೆ ಬಂದು 1,000 ದಿನಗಳನ್ನು ಆಚರಿಸುತ್ತಿದೆ” ಎಂದು ವಾಗ್ದಾಳಿ ನಡೆಸಿದರು.
ಮೊದಲಿಗೆ ಸರ್ಕಾರಿ ಆಸ್ಪತ್ರೆಗಳ ಪರಿಸ್ಥಿತಿ ಸರಿ ಇಲ್ಲ. ಔಷಧಿಗಳು ಸಿಗುತ್ತಿಲ್ಲ. ವೈದ್ಯರು ಪ್ರತಿಭಟನೆ ಮಾಡುತ್ತಿದ್ದಾರೆ. ಇವರ ಬೇಜಾಬ್ದಾರಿಯಿಂದ ಆರೋಗ್ಯ ಇಲಾಖೆ ನಷ್ಟದಲ್ಲಿದೆ. ಕೇಂದ್ರದ ಜನೌಷಧಿಯನ್ನು ಕೇಂದ್ರವನ್ನ ಮುಚ್ಚುವ ಕೆಲಸ ಮಾಡಿದರು. ಖಾಸಗಿ ಫಾರ್ಮಾಸಿಗಳಲ್ಲಿ ಔಷಧಿ ತೆಗೆದುಕೊಳ್ಳಿ ಎಂದು ಸರ್ಕಾರಿ ವೈದ್ಯರೇ ಹೇಳುತ್ತಿದ್ದಾರೆ. ಸಿಟಿ ಸ್ಕ್ಯಾನ್, ಎಂಆರ್‌ಐ ಸ್ಕ್ಯಾನ್ ಸೇವೆಗಳಿಗೆ ಬಾಕೀ ಹಣ ಉಳಿಸಿಕೊಂಡಿದ್ದಾರೆ. ಇದರಿಂದ ಬಡ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. 
ಸಾಧನ ಸಮಾವೇಶ ಮಾಡುತ್ತಿದ್ದಾರೆ. ಆದರೆ ಜನರು ಯಾವ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಸರ್ಕಾರಕ್ಕೆ ಗೊತ್ತಾ? ಎಂದು ಪ್ರಶ್ನೆ ಮಾಡಿದರು. ನನ್ನ ಪ್ರಕಾರ ಕಾಂಗ್ರೆಸ್ ನುಡಿದಂತೆ ನಡೆಯುತ್ತಿರುವ ಸರ್ಕಾರ ಅಲ್ಲ. ಜನರಿಗಾಗಿ ಇರುವ ಸರ್ಕಾರ ಅಲ್ಲ. ದಲ್ಲಾಳಿಗಳಿಗಾಗಿ ಇರುವ ಸರ್ಕಾರ
. ಔಷಧಿ ಕೊರತೆ ಉಂಟಾಗಲು ಸರ್ಕಾರ, ಸಚಿವರು ಕಾರಣ. ಪ್ರಭಾವಿಗಳ ಒತ್ತಡಕ್ಕೆ ಮಣಿದು ಔಷಧಿ ಖರೀದಿಯಲ್ಲಿ ಅವ್ಯಾವಾಹರ ನಡೆಯುತ್ತಿದೆ. ಟೆಂಡರ್ ಕರೆದರೂ ಯಾರು ಭಾಗಿಯಾಗ್ತಿಲ್ಲ. ನಾನು ನೇರವಾಗಿ ಆರೋಪ ಮಾಡ್ತಿದ್ದೀನಿ. ಶೇ. 15-20 ರಷ್ಟು ಕಮಿಷನ್ ಹಾವಳಿಯಿಂದ ಟೆಂಡರ್‌ನಲ್ಲಿ ಯಾರು ಭಾಗಿಯಾಗುತ್ತಿಲ್ಲ ಎಂದು ಆರೋಪಿಸಿದರು
Leave a comment