ಕೇರಳ ಮೂಲದ ಟಿಪ್ಪರ್ ಚಾಲಕರ ಅತಿರೇಕದ ಗೂಂಡಾ ವರ್ತನೆಗೆ ಸಂಬಂಧ ಪಟ್ಟ ಇಲಾಖೆಯಿಂದ ಕಡಿವಾಣ ಅಗತ್ಯ:: ಅನ್ಸಾರ್ ಅಹಮದ್

13

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಬೆಳ್ಮಣ್ ನಲ್ಲಿ ಕಾರ್ಯಾಚರಿಸುತ್ತಿರುವ ಜಲ್ಲಿ ಕ್ರಷರ್ ಗಳಿಗೆ ಬರುತ್ತಿರುವ ಕೇರಳ ಮೂಲದ ಟಿಪ್ಪರ್ ವಾಹನ ಚಾಲಕರ ಗೂಂಡಾ ವರ್ತನೆ ಮಿತಿ ಮೀರುತ್ತಿದೆ. ಸ್ಥಳೀಯ ಟಿಪ್ಪರ್ ಗಳಿಗಿಂತ ಕೇರಳ ನೋಂದಣಿಯ ಟಿಪ್ಪರ್ ಗಳದ್ದೇ ಕಾರುಬಾರು ಹೆಚ್ಚಾಗಿದೆ. ಇಲ್ಲಿನ ರಸ್ತೆಯಲ್ಲಿ ಕೇರಳ ಮೂಲದ ಬೃಹದಾಕಾರದ ಲಾರಿಗಳು ಜಲ್ಲಿ ಹಾಗೂ ಎಂ. ಸ್ಯಾಂಡ್ ತುಂಬಲು ಬರುತ್ತಿದ್ದು ಸಣ್ಣ ವಾಹನದವರು ರಸ್ತೆಯಲ್ಲಿ ಸಂಚರಿಸುವುದೇ ಕಷ್ಟದಾಯಕವಾಗಿದೆ

ಅಲ್ಲದೆ ಸಾರ್ವಜನಿಕರ ಮೇಲೆ ಇವರುಗಳು ಹಲ್ಲೆ ನಡೆಸುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ಹೀಗೆ ಮುಂದುವರಿದರೆ ಕಾನೊನು ಸುವ್ಯವಸ್ಥೆ ಹದೆಗೆಡುವುದರಲ್ಲಿ ಯಾವುದೇ ಸಂಶಯವಿಲ್ಲ.
ಈ ಲಾರಿಗಳಲ್ಲಿ ತುಂಬುವ ಜಲ್ಲಿ ಮತ್ತು ಎಂ ಸ್ಯಾಂಡ್ ನ ರಾಜಧನದಲ್ಲೂ ಸರಕಾರಕ್ಕೆ ವಂಚಿಸಲಾಗುತ್ತಿದೆ. ತುಂಬುವ ಸರಕಿನ ಅರ್ಧಕ್ಕಿಂತಲೂ ಕಡಿಮೆ ರಾಜಧನ ಪಾವತಿಸಿ ಉಳಿದ ಹಣವನ್ನು ಸರಕಾರಕ್ಕೆ ಮೋಸ ಮಾಡಲಾಗುತ್ತಿದೆ.

ಸಂಬಂಧಪಟ್ಟ ಇಲಾಖೆ ಸ್ಥಳೀಯ ಲಾರಿಗಳ ಮೇಲೆ ನಿಗಾ ವಹಿಸುತ್ತಿದ್ದು ಕೇರಳ ಮೂಲದ ಲಾರಿಗಳ ಮೇಲೆ ಅಷ್ಟು ನಿಗಾ ವಹಿಸುವಂತೆ ಕಾಣುತ್ತಿಲ್ಲ ಎಂದು ಜನರು ಆಡಿಕೊಳ್ಳುತ್ತಿದ್ದು , ಇಲಾಖೆ ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಎಂಬಂತೆ ವರ್ತಿಸುತ್ತಿದೆ.

ಸಂಬಂಧಪಟ್ಟ ಇಲಾಖೆ ಈ ಕ್ಷಣದಿಂದಲೇ ಕೇರಳ ಮೂಲದ ವಾಹನಗಳು ತುಂಬುವ ಸರಕು ಹಾಗೂ ಅವರು ಪಾವತಿಸುವ ರಾಜಧನ ವನ್ನು ಕೂಲಂಕುಶವಾಗಿ ಪರಿಶೀಲಿಸಿ ಸರಕಾರಕ್ಕೆ ಆಗುತ್ತಿರುವ ನಷ್ಟವನ್ನು ತಡೆಯಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಉಡುಪಿ ಜಿಲ್ಲಾ ಗೌರವಾಧ್ಯಕ್ಷ ರಾದ ಅನ್ಸಾರ್ ಅಹಮದ್ ರವರು ಆಗ್ರಹಿಸಿರುತ್ತಾರೆ.

Leave a comment

Leave a Reply

Your email address will not be published. Required fields are marked *

Related Articles

ಪೆರ್ಡೂರ್ ಸರಕಾರಿ ಜಮೀನು ಒತ್ತುವರಿ, ಮನೆ ನಿರ್ಮಾಣ, ದೂರು ನೀಡಿದರು ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸಾಮಾಜಿಕ ಕಾರ್ಯಕರ್ತ ನವೀನ್ ಪೆರ್ಡೂರ್ ಆಕ್ರೋಶ

ಬಡವರಿಗೊಂದು ನ್ಯಾಯ ಶ್ರೀಮಂತರಿಗೊಂದು ನ್ಯಾಯ ಎನ್ನುವ ಮಾತು ಪೆರ್ಡೂರ್ ಗ್ರಾಮ ಪಂಚಾಯತ್ ನಲ್ಲಿ ಈಗ ನಿಜವಾಗಿದೆ...

ಮಂಗಳೂರು–ಸುಬ್ರಹ್ಮಣ್ಯ ಮಾರ್ಗ ದುರಸ್ಥಿ ಕಾರ್ಯ ರೈಲು ಸಂಚಾರ 35 ದಿನ ರದ್ದು ಹೊಸ ರೈಲುಗಳ ವೇಳಾಪಟ್ಟಿ ಬಿಡುಗಡೆ

ಕರ್ನಾಟಕದಲ್ಲಿ ರೈಲು ಸೇವೆಗಳು ದಕ್ಷಿಣ ಪಶ್ಚಿಮ ರೈಲ್ವೆ ವಲಯದಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಮತ್ತು ನಿರ್ವಹಣಾ ಕಾಮಗಾರಿಗಳ...

ಲೈಂಗಿಕ ದೌರ್ಜನ್ಯ ಆರೋಪ ಮೂಡಬಿದ್ರೆ ಪೊಲೀಸ್ ಇನ್ಸ್ ಪೆಕ್ಟರ್ ಸಂದೇಶ್ ಬಿಜಿ ಅಮಾನತು

ಮಂಗಳೂರು: ಮೂಡುಬಿದಿರೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸಂದೇಶ್ ಬಿ.ಜಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಲಾಗಿದ್ದು,...

ಮಹಿಳಾ ದಿನಾಚರಣೆ ಪ್ರಯುಕ್ತ ಪ್ರಸಿದ್ಧ ರಂಗೋಲಿ ಕಲಾವಿದೆ ಶ್ರೀಮತಿ ವಿಶಾಲ ಮಹೇಶ್ ರವರಿಗೆ ಸನ್ಮಾನ

ಬ್ರಹ್ಮಾವರ : ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಶ್ರೀ ಮಾಸ್ತಿ ಅಮ್ಮನವರ ದೇವಸ್ಥಾನದಲ್ಲಿ ಜರಗಿದ ಸರಳ...