ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ರಿಂದ ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆ

12

“ನವದೆಹಲಿ: 2025-26ರ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1 ರಂದು ಭಾನುವಾರ ಸಂಸತ್ತಿನಲ್ಲಿ ಮಂಡಿಸಲಾಗುವುದು. ಜನವರಿ 29 ರಂದು ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್ ಅವರು ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಶುಕ್ರವಾರ ಮಾಹಿತಿ ಹಂಚಿಕೊಂಡಿದ್ದಾರೆ. ಸಂಸತ್ತಿನ ಬಜೆಟ್ ಅಧಿವೇಶನ ಜನವರಿ 28 ರಂದು ಆರಂಭವಾಗಲಿದ್ದು, ಏಪ್ರಿಲ್ 2 ರವರೆಗೆ ಮುಂದುವರಿಯುತ್ತದೆ ಎಂದು ಅವರು ತಿಳಿಸಿದ್ದಾರೆ.
ವಾಡಿಕೆಯಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 28 ರಂದು ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರ ಜಂಟಿ ಅಧಿವೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಭಾರತ ಸರ್ಕಾರದ ಶಿಫಾರಸಿನ ಮೇರೆಗೆ ಮುರ್ಮು ಅವರು ಬಜೆಟ್ ಅಧಿವೇಶನಕ್ಕಾಗಿ ಸಂಸತ್ತಿನ ಎರಡೂ ಸದನಗಳನ್ನು ಕರೆಯಲು ಅನುಮೋದನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಅಧಿವೇಶನದ ಮೊದಲ ಹಂತವು ಜನವರಿ 28 ರಿಂದ ಫೆಬ್ರವರಿ 13ರವರಗೆ, ಎರಡನೇ ಹಂತ ಮಾರ್ಚ್ 9 ರಿಂದ ಏಪ್ರಿಲ್ 2ರವರೆಗೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.


Leave a comment

Leave a Reply

Your email address will not be published. Required fields are marked *

Related Articles

 ಟಿಎಂಸಿವಿ ಲಿಮಿಟೆಡ್‌ನ ಷೇರುಗಳು ಭರ್ಜರಿ ಆರಂಭ : ಷೇರು ಮಾರುಕಟ್ಟೆಯಲ್ಲಿ ಶೇ. 28ರ ಪ್ರೀಮಿಯಂ ದರದಲ್ಲಿ ಪದಾರ್ಪಣೆ

ಷೇರು ಮಾರುಕಟ್ಟೆಯಲ್ಲಿ ಶೇ. 28.5ರ ಪ್ರೀಮಿಯಂ ದರದಲ್ಲಿ ಟಿಎಂಸಿವಿ ಷೇರುಗಳ ಲಿಸ್ಟಿಂಗ್ ಎನ್‌ಎಸ್‌ಇಯಲ್ಲಿ ಷೇರಿನ ಆರಂಭಿಕ...

ಬ್ಯಾಂಕ್ ಸಿಬ್ಬಂದಿಗಳಿಗೆ ಸ್ಥಳೀಯ ಭಾಷೆ ಚೆನ್ನಾಗಿ ತಿಳಿದಿರಬೇಕು : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಮುಂಬಯಿ: ಇದರಿಂದ ಗ್ರಾಹಕರೊಂದಿಗೆ ಉತ್ತಮ ಸಂವಹನ ಸಾಧ್ಯವಾಗುತ್ತದೆ ಎಂದು ಪ್ರತಿಪಾದಿಸಿದ ಹಣಕಾಸು ಸಚಿವರು ದೇಶದ ಬ್ಯಾಂಕಿಂಗ್...

ಅದಾನಿ ಗ್ರೀನ್ ಎನರ್ಜಿ ಷೇರುಗಳ ಮೌಲ್ಯ ಶೇ. 14ರಷ್ಟು ಏರಿಕೆ

ಅದಾನಿ ಸಮೂಹದ ನವೀಕರಿಸಬಹುದಾದ ಇಂಧನ ವಿಭಾಗವಾದ ಅದಾನಿ ಗ್ರೀನ್ ಎನರ್ಜಿ, ತನ್ನ ಸೆಪ್ಟೆಂಬರ್ ತ್ರೈಮಾಸಿಕದ ಫಲಿತಾಂಶವನ್ನು...

ಅಮೆಜಾನ್‌ನಿಂದ 5 ಲಕ್ಷಕ್ಕೂ ಹೆಚ್ಚು ಉದ್ಯೋಗಗಳ ಬದಲಿಗೆ ರೋಬೋಟ್‌ಗಳ ಬಳಕೆ ಸಾಧ್ಯತೆ

ವೇರ್‌ಹೌಸ್‌ಗಳಲ್ಲಿ ಶೇ. 75ರಷ್ಟು ಕಾರ್ಯಾಚರಣೆಯನ್ನು ಸ್ವಯಂಚಾಲಿತಗೊಳಿಸುವ ಗುರಿ ತಂತ್ರಜ್ಞಾನ ಬಳಕೆಯಿಂದ ಪ್ರತಿ ವಸ್ತುವಿನ ಮೇಲೆ ಸುಮಾರು...