ಟಿಎಂಸಿವಿ ಲಿಮಿಟೆಡ್‌ನ ಷೇರುಗಳು ಭರ್ಜರಿ ಆರಂಭ : ಷೇರು ಮಾರುಕಟ್ಟೆಯಲ್ಲಿ ಶೇ. 28ರ ಪ್ರೀಮಿಯಂ ದರದಲ್ಲಿ ಪದಾರ್ಪಣೆ

61

ಷೇರು ಮಾರುಕಟ್ಟೆಯಲ್ಲಿ ಶೇ. 28.5ರ ಪ್ರೀಮಿಯಂ ದರದಲ್ಲಿ ಟಿಎಂಸಿವಿ ಷೇರುಗಳ ಲಿಸ್ಟಿಂಗ್ ಎನ್‌ಎಸ್‌ಇಯಲ್ಲಿ ಷೇರಿನ ಆರಂಭಿಕ ಬೆಲೆ 335 ರೂ., ಬಿಎಸ್‌ಇಯಲ್ಲಿ 330.25 ರೂ. ಟಾಟಾ ಮೋಟಾರ್ಸ್‌ನಿಂದ ಬೇರ್ಪಟ್ಟು ಸ್ವತಂತ್ರ ಕಂಪನಿಯಾಗಿ ಪಟ್ಟಿಯಾಗಿದ್ದರಿಂದ ಮೌಲ್ಯ ವೃದ್ಧಿ ಸರಕು ಸಾಗಣೆ, ಗಣಿಗಾರಿಕೆ, ಮೂಲಸೌಕರ್ಯ ಕ್ಷೇತ್ರದ ಬೆಳವಣಿಗೆಯಿಂದ ವಾಣಿಜ್ಯ ವಾಹನಗಳಿಗೆ ಬೇಡಿಕೆ ಹೆಚ್ಚಳ ಇಟಲಿಯ ಇವೆಕೊ ಗ್ರೂಪ್ ಸ್ವಾಧೀನದಿಂದ ಜಾಗತಿಕ ವಿಸ್ತರಣೆಗೆ ಕಂಪನಿಗೆ ಇದೆ ದೊಡ್ಡ ಅವಕಾಶ ಟಾಟಾ ಮೋಟಾರ್ಸ್‌ ಕಮರ್ಷಿಯಲ್‌ ವೆಹಿಕಲ್‌ ಷೇರುಗಳು ಪ್ರೀಮಿಯಂ ದರದಲ್ಲಿ ಲಿಸ್ಟ್‌ ಆಗಿವೆ.

ಭಾರತದ ಅತಿದೊಡ್ಡ ಟ್ರಕ್ ಮತ್ತು ಬಸ್ ತಯಾರಕ ಕಂಪನಿ ಟಾಟಾ ಮೋಟಾರ್ಸ್‌ನ ವಾಣಿಜ್ಯ ವಾಹನ ವಿಭಾಗವಾದ ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್ (ಟಿಎಂಸಿವಿ) ಲಿಮಿಟೆಡ್‌ನ ಷೇರುಗಳು ಷೇರು ಮಾರುಕಟ್ಟೆಯಲ್ಲಿ ಭರ್ಜರಿ ಆರಂಭ ಪಡೆದಿವೆ. ನಿರೀಕ್ಷಿತ ಮೌಲ್ಯಕ್ಕಿಂತ ಶೇ. 28ಕ್ಕೂ ಅಧಿಕ ಪ್ರೀಮಿಯಂ ದರದಲ್ಲಿ ಷೇರುಗಳು ಲಿಸ್ಟಿಂಗ್ ಆಗಿವೆ.

ಈ ಮೂಲಕ , ವಾಣಿಜ್ಯ ವಾಹನ ಕ್ಷೇತ್ರದ ಚೇತರಿಕೆಯ ಬಗ್ಗೆ ಹೂಡಿಕೆದಾರರು ಹೊಂದಿರುವ ಸಕಾರಾತ್ಮಕಕ್ಕೆ ಬಯಲಾಗಿದೆ. ರಾಷ್ಟ್ರೀಯ ಷೇರುಪೇಟೆಯಲ್ಲಿ (ಎನ್‌ಎಸ್‌ಇ) ಟಿಎಂಸಿವಿ ಷೇರುಗಳು 260.75 ರೂ.ಗಳ ಸೂಚಿತ ಮೌಲ್ಯಕ್ಕೆ ಪ್ರತಿಯಾಗಿ ಶೇ. 28.5ರ ಲಾಭದೊಂದಿಗೆ 335 ರೂ.ನಲ್ಲಿ ವಹಿವಾಟು ಆರಂಭಿಸಿದವು. ಅದೇ ರೀತಿ, ಬಾಂಬೆ ಷೇರುಪೇಟೆಯಲ್ಲಿ (ಬಿಎಸ್‌ಇ) ಶೇ. 26.6ರಷ್ಟು ಏರಿಕೆಯೊಂದಿಗೆ 330.25 ರೂ.ನಲ್ಲಿ ಪಟ್ಟಿಯಾದವು. ಲಿಸ್ಟಿಂಗ್ ನಂತರವೂ ಹೂಡಿಕೆದಾರರ ಉತ್ಸಾಹ ಮುಂದುವರಿದು, ಎನ್‌ಎಸ್‌ಇಯಲ್ಲಿ ಷೇರಿನ ಬೆಲೆ 345 ರೂ.ಗೆ ತಲುಪಿತ್ತು.

ವಿಭಜನೆಯಿಂದ ಮೌಲ್ಯವರ್ಧನೆ ಟಾಟಾ ಮೋಟಾರ್ಸ್‌ನಿಂದ ವಾಣಿಜ್ಯ ವಾಹನ (ಸಿವಿ) ವಿಭಾಗವನ್ನು ಪ್ರತ್ಯೇಕಿಸಿರುವುದು ಹೂಡಿಕೆದಾರರಿಗೆ ಪ್ರತಿ ವಿಭಾಗವನ್ನು ಅದರದ್ದೇ ಆದ ಸಾಮರ್ಥ್ಯದ ಮೇಲೆ ಮೌಲ್ಯಮಾಪನ ಮಾಡಲು ಅವಕಾಶ ನೀಡಿದೆ ಎಂದು ತಜ್ಞರು ಪ್ರತಿಪಾದಿಸಿದ್ದಾರೆ. ಅಕ್ಟೋಬರ್‌ 1 ರಂದು ಕಂಪನಿಗಳ ಇಬ್ಭಾಗ ನಿಗದಿಯಾಗಿತ್ತು. ಅಕ್ಟೋಬರ್‌ 14ನ್ನು ರೆಕಾರ್ಡ್‌ ದಿನಾಂಕವಾಗಿ ಘೋಷಿಸಲಾಗಿತ್ತು. ಅಂದು ಹೂಡಿಕೆದಾರರು ಹೊಂದಿದ್ದ ಟಾಟಾ ಮೋಟಾರ್ಸ್‌ನ ಪ್ರತಿ ಷೇರಿಗೆ ಟಿಎಂಸಿವಿಯ ಒಂದು ಷೇರನ್ನು ನೀಡಲಾಗಿದ್ದು, ಮಾಲೀಕತ್ವದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಭಾರತದ ಬೆಳವಣಿಗೆಯಲ್ಲಿ ವಾಣಿಜ್ಯ ವಾಹನ ವಿಭಾಗದ ಪಾತ್ರ ಪ್ರಮುಖವಾಗಿದ್ದು, ಸರಕು ಸಾಗಣೆ, ಗಣಿಗಾರಿಕೆ ಮತ್ತು ಮೂಲಸೌಕರ್ಯ ವಿಸ್ತರಣೆಗೆ ಇದು ಬೆನ್ನೆಲುಬಾಗಿದೆ. ಸರಕು ಸಾಗಣೆ ಚಟುವಟಿಕೆಗಳು ಸುಧಾರಿಸುತ್ತಿರುವುದು, ಕಚ್ಚಾ ವಸ್ತುಗಳ ಬೆಲೆ ಇಳಿಕೆ ಹಾಗೂ ಜಿಎಸ್‌ಟಿ ದರವನ್ನು ಶೇ. 28ರಿಂದ ಶೇ. 18ಕ್ಕೆ ಇಳಿಸಿರುವುದು ವಾಣಿಜ್ಯ ವಾಹನಗಳ ಬೇಡಿಕೆಯನ್ನು ತೀವ್ರವಾಗಿ ಹೆಚ್ಚಿಸುವ ನಿರೀಕ್ಷೆ ಇದೆ. ಹೇಗಿದೆ ಕಂಪನಿ ಸ್ಥಿತಿ? 2025ರ ಆರ್ಥಿಕ ವರ್ಷದಲ್ಲಿ ಟಿಎಂಸಿವಿ 75,055 ಕೋಟಿ ರೂ. ಆದಾಯ ಮತ್ತು 8,856 ಕೋಟಿ ರೂ. ತೆರಿಗೆ ಪೂರ್ವ ಲಾಭ ದಾಖಲಿಸಿತ್ತ.

ಇದು ಶೇ. 11.8ರ ಕಾರ್ಯಾಚರಣಾ ಲಾಭಾಂಶವನ್ನು ಸೂಚಿಸುತ್ತದೆ. ಈಗಾಗಲೇ ಟಾಟಾ ಮೋಟಾರ್ಸ್, ಇಟಲಿಯ ಇವೆಕೊ ಗ್ರೂಪ್‌ನ ವಾಣಿಜ್ಯ ವಾಹನ ಕಾರ್ಯಾಚರಣೆಗಳನ್ನು 3.8 ಬಿಲಿಯನ್‌ ಯೂರೋಗೆ ಸ್ವಾಧೀನಪಡಿಸಿಕೊಳ್ಳುವುದಾಗಿ ಹೇಳಿದೆ. ಈ ಒಪ್ಪಂದವು ಟಿಎಂಸಿವಿಯ ಜಾಗತಿಕ ವಿಸ್ತರಣೆಗೆ ಒಂದು ಮಹತ್ವದ ತಿರುವು ನೀಡಬಲ್ಲದು ಎಂದು ವಿಶ್ಲೇಷಕರು ಹೇಳಿದ್ದಾರೆ. ಈ ಸ್ವಾಧೀನವು ಕಂಪನಿಯ ತಾಂತ್ರಿಕ ಸಾಮರ್ಥ್ಯವನ್ನು ಹೆಚ್ಚಿಸಲಿದ್ದು, ಇದರ ಫಲಿತಾಂಶಗಳು ಆದಾಯದಲ್ಲಿ ಪ್ರತಿಫಲಿಸಬಹುದು ಎಂದೂ ಹೇಳಿದ್ದಾರೆ.”

Leave a comment

Leave a Reply

Your email address will not be published. Required fields are marked *

Related Articles

ಜೂನ್ 27 ರಂದು ಕೆಂಪೇಗೌಡ ಜಯಂತಿ ಅಂಗವಾಗಿ 15 ಲಕ್ಷ ಸಸಿ ನೆಡುವ ಕಾರ್ಯಕ್ರಮ :: ಮುಖ್ಯಮಂತ್ರಿ ಡಿಕೆ ಶಿವಕುಮಾರ್

“ಬೆಂಗಳೂರು: ಕೆಂಪೇಗೌಡ ಜಯಂತಿ ಅಂಗವಾಗಿ 15 ಲಕ್ಷ ಸಸಿ ನೆಡುವ ಕಾರ್ಯಕ್ರಮ ಜೂನ್ 27 ರಂದು...

ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕಾರ್ಯ ಪ್ರಾರಂಭಿಸಿದ ::ಮುಖ್ಯಮಂತ್ರಿ ಡಿ ಕೆ ಶಿವಕುಮಾರ್

ಬೆಂಗಳೂರು: ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮಾರನೇ ದಿನವೇ ಆಡಳಿತ ಯಂತ್ರಕ್ಕೆ ಚುರುಕು...

ಜಾತಿ, ಧರ್ಮ ಯಾವುದೇ ಪ್ರಭಾವಕ್ಕೂ ಮಣಿಯಬೇಡಿ: ಅಧಿಕಾರಿಗಳಿಗೆ ಸೂಚನೆ ನೀಡಿದ ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್

ಬೆಂಗಳೂರು: ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದಾರೆ. ಇಂದು ವಿಧಾನಸೌಧದಲ್ಲಿ...

ಸಂಪುಟ ರಚನೆಯ ಕಸರತ್ತು ದೆಹಲಿಗೆ ತೆರಳಿದ ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್

ನವದೆಹಲಿ: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇದೀಗ ಸಂಪುಟ ರಚನೆಯ ಕಸರತ್ತು ಆರಂಭಿಸಿದ್ದು, ಸೋಮವಾರ ದೆಹಲಿಗೆ ತೆರಳಿ...