ಕರ್ನಾಟಕ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ 68 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮತ್ತು ಮುಂಬಡ್ತಿಗೆ ಆದೇಶ

54

ಬೆಂಗಳೂರು: 2026 ಹೊಸ ವರ್ಷ ಆರಂಭವಾಗಿದ್ದು, ಈ ನಡುವಲ್ಲೇ ರಾಜ್ಯ ಸರ್ಕಾರ ಕರ್ನಾಟಕ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದೆ. ಒಟ್ಟು 68 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮತ್ತು ಮುಂಬಡ್ತಿಗೆ ಆದೇಶಿಸಿದೆ. ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ.ರಶ್ಮಿ ಮಹೇಶ್, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಾಟೇರಿಯಾ, ವಾಣಿಜ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ದೀಪಕ್ ಜೈನ್, ಆರ್ಥಿಕ ಇಲಾಖೆಯ ಜಂಟಿ ಕಾರ್ಯದರ್ಶಿ ಡಾ. ಏಕ್‍ರೂಪ್ ಕೌರ್, ಬಿಎಂಆರ್‍ಸಿಎಲ್‍ನ ವ್ಯವಸ್ಥಾಪಕ ನಿರ್ದೇಶಕ ರವಿಶಂಕರ್ ಜೆ. ಸೇರಿದಂತೆ 68 ಮಂದಿ ಅಧಿಕಾರಿಗಳಿಗೆ ಮುಂಭಡ್ತಿ ನೀಡಲಾಗಿದೆ
. ಐವರು ಪೊಲೀಸ್ ಉಪ ಆಯುಕ್ತರಾದ (ಡಿಸಿಪಿಗಳು) ಎನ್ ಯತೀಶ್ (ಪಶ್ಚಿಮ), ವಿಕ್ರಮ್ ಅಮಟೆ (ಪೂರ್ವ), ಸೈದುಲು ಅದಾವತ್ (ವೈಟ್‌ಫೀಲ್ಡ್), ಮೊಹಮ್ಮದ್ ಸುಜೀತಾ (ಆಗ್ನೇಯ) ಮತ್ತು ಮಿಥುನ್ ಕುಮಾರ್ (ಈಶಾನ್ಯ) ಅವರು ಬೆಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ.

ಎಸ್ಪಿಗಳ ವರ್ಗಾವಣೆ ಎಂವಿ ಚಂದ್ರಕಾಂತ್ (ಎಸ್‌ಪಿ, ಬೆಂಗಳೂರು ಗ್ರಾಮಾಂತರ), ಮಲ್ಲಿಕಾರ್ಜುನ ಬಾಲದಂಡಿ (ಎಸ್‌ಪಿ, ಮೈಸೂರು), ಕೆ ರಾಮರಾಜನ್ (ಎಸ್‌ಪಿ, ಬೆಳಗಾವಿ), ಬಿ ನಿಖಿಲ್ (ಎಸ್‌ಪಿ, ಶಿವಮೊಗ್ಗ), ಅರುಣಾಂಶು ಗಿರಿ (ಎಸ್‌ಪಿ, ರಾಯಚೂರು), ಶುಭನ್ವಿತಾ (ಎಸ್‌ಪಿ, ಹಾಸನ), ಜಿತೇಂದ್ರ ಕುಮಾರ್ ದಯಂ (ಎಸ್‌ಪಿ, ಚಿಕ್ಕಮಗಳೂರು ಎಸ್‌ಪಿ), ಕನ್ನಿಕಾ ಸುಕ್ರಿವಾಲ್ (ಎಸ್‌ಪಿ, ಕೋಲಾರ), ಬಿಂದುಮಣಿ (ಎಸ್‌ಪಿ, ಕೊಡಗು), ಶೋಭಾರಾಣಿ (ಎಸ್‌ಪಿ, ಮಂಡ್ಯ), ಸಾರಾ ಫಾತಿಮಾ (ಎಸ್‌ಪಿ, ರೈಲ್ವೆ), ಎಂ.ಮುತ್ತುರಾಜ್ (ಎಸ್‌ಪಿ, ಚಾಮರಾಜನಗರ), ಡಾ.ಬಿ.ಟಿ.ಕವಿತಾ (ಸಿಐಡಿ), ವಿ.ಜೆ.ಸಜಿತ್ (ಎಸ್‌ಪಿ, ಐಎಸ್‌ಡಿ) ಮತ್ತು ಪವನ್ ನೆಜ್ಜೂರು (ಎಸ್‌ಪಿ, ಬಳ್ಳಾರಿ) ವರ್ಗಾವಣೆಯಾಗಿದ್ದಾರೆ.

ಐಜಿಪಿಯಾಗಿ ಮುಂಬಡ್ತಿ ಡಾ.ಎಂ.ಬಿ.ಬೋರಲಿಂಗಯ್ಯ (ದಕ್ಷಿಣ ವಲಯ), ರಾಮ್‌ನಿವಾಸ್ ಸೆಪಟ್‌ (ಹೈದರಾಬಾದ್, ರಾಷ್ಟ್ರೀಯ ಪೊಲೀಸ್ ತರಬೇತಿ ಶಾಲೆ), ಅನುಪಮಾ ಅಗರ್‌ವಾಲ್‌(ಸಿಆರ್‌ಪಿಎಫ್‌), ಅಜಯ್‌ ಹಿಲೋರಿ (ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ, ಬೆಂಗಳೂರು), ಡಾ.ರೋಹಿಣಿ ಕಟೋಚ್‌ ಸಪೆಟ್‌ (ಹೈದರಾಬಾದ್, ರಾಷ್ಟ್ರೀಯ ಪೊಲೀಸ್ ತರಬೇತಿ ಶಾಲೆ). ಡಿಐಜಿಯಾಗಿ ಮುಂಬಡ್ತಿ ಡಾ.ಭೀಮಾಶಂಕರ್ ಎಸ್‌.ಗುಳೇದ್ (ಸಿಐಡಿ, ಆರ್ಥಿಕ ಅಪರಾಧ ವಿಭಾಗ), ನಿಕಂ ಪ್ರಕಾಶ್‌ ಅಮ್ರಿತ್ (ಕೇಂದ್ರ ಸೇವೆ), ಜಿ.ರಾಧಿಕಾ(ಹೈದರಾಬಾದ್, ರಾಷ್ಟ್ರೀಯ ಪೊಲೀಸ್ ತರಬೇತಿ ಶಾಲೆ),
ರಾಹುಲ್‌ ಕುಮಾರ್ ಶಹಪುರ್‌ವಾದ್ (ಎನ್‌ಐಎ, ದೆಹಲಿ), ಧರ್ಮೇಂದ್ರ ಕುಮಾರ್‌ ಮೀನಾ (ಕೇಂದ್ರ ಸೇವೆ), ಇಲಾಕಿಯಾ ಕರುಣಾಕರನ್‌ (ನಿಸ್ತಂತು ವಿಭಾಗ), ಡಾ.ಸಿ.ಬಿ.ವೇದಮೂರ್ತಿ (ಗುಪ್ತಚರ ವಿಭಾಗ), ಕೆ.ಎಂ.ಶಾಂತರಾಜು (ಐಎಸ್‌ಡಿ, ಬೆಂಗಳೂರು), ಹನುಮಂತರಾಯ (ಮಾನವ ಹಕ್ಕುಗಳ ಆಯೋಗ), ಡಿ.ದೇವರಾಜ್‌ (ಪೊಲೀಸ್ ತರಬೇತಿ), ಡಾ.ಡಿ.ಆರ್‌.ಸಿರಿಗೌರಿ (ಕರ್ನಾಟಕ ಲೋಕಾಯುಕ್ತ), ಡಾ.ಕೆ.ಧರಣಿದೇವಿ (ಗುಪ್ತಚರ ವಿಭಾಗ), ಎಸ್‌.ಸವಿತಾ (ಹೋಮ್‌ ಗಾರ್ಡ್‌), ಸಿ.ಕೆ.ಬಾಬಾ (ಕೆಎಸ್‌ಆರ್‌ಪಿ), ಅಬ್ದುಲ್‌ ಅಹದ್‌ (ಬಿಎಂಟಿಸಿ, ವಿಚಕ್ಷಣ ದಳ), ಎಸ್‌.ಗಿರೀಶ್‌ (ಮಾದಕ ವಸ್ತು ನಿಗ್ರಹ ಪಡೆ), ಎಂ.ಪುಟ್ಟಮಾದಯ್ಯ (ಪ್ರಾಂಶುಪಾಲರು, ಪೊಲೀಸ್ ತರಬೇತಿ ಶಾಲೆ, ಕಲಬುರಗಿ), ಟಿ.ಶ್ರೀಧರ್‌ (ಪೊಲೀಸ್ ಪ್ರಧಾನ ಕಚೇರಿ), ಎಂ.ಅಶ್ವಿನಿ (ಯುಎನ್ಎಂಐಎಸ್‌ಎಸ್‌),

ಎ.ಎನ್‌.ಪ್ರಕಾಶ್‌ ಗೌಡ (ವಿಶೇಷ ಕಾರ್ಯಪಡೆ). ಜಿನೇಂದ್ರ ಖನಗಾವಿ (ಕಾರಾಗೃಹ), ಜಿ.ಕೆ.ರಶ್ಮಿ (ರೈಲ್ವೆ ಪೊಲೀಸ್), ಟಿ.ಪಿ.ಶಿವಕುಮಾರ್‌ (ಎಸ್‌ಸಿಆರ್‌ಬಿ), ಎನ್.ವಿಷ್ಣುವರ್ಧನ (ಪೊಲೀಸ್ ಅಕಾಡೆಮಿ, ಮೈಸೂರು), ಡಾ.ಸಜೀವ್ ಎಂ.ಪಾಟೀಲ್ (ಪೊಲೀಸ್ ಪ್ರಧಾನ ಕಚೇರಿ), ಕೆ.ಪರಶುರಾಮ್‌ (ಸಂಚಾರ ಮತ್ತು ಸುರಕ್ಷತೆ), ಹೆಚ್‌.ಡಿ.ಆನಂದ್‌ ಕುಮಾರ್ (ಸೈಬರ್ ಕಮಾಂಡ್‌), ಕಲಾ ಕೃಷ್ಣಮೂರ್ತಿ (ಅಪರಾಧ ವಿಭಾಗ, ಪೊಲೀಸ್ ಪ್ರಧಾನ ಕಚೇರಿ). ಮುಂಬಡ್ತಿ ಡಾ.ಅನೂಪ್ ಶೆಟ್ಟಿ, ಹರೀಶ್‌ ಪಾಂಡೆ, ಸುಮನಾ ಡಿ.ಪನ್ನೇಕರ್‌, ದಿವ್ಯಾ ಸಾರಾ ಥಾಮಸ್‌, ಡಿಕಾ ಕಿಶೋರ್‌ ಬಾಬು, ಸಿ.ಬಿ.ರಿಷ್ಯಂತ್, ನಿಶಾ ಜೇಮ್ಸ್, ಮಧುರ ವೀಣಾ, ಎಂ.ವಿ.ಚಂದ್ರಕಾಂತ್ (ಎಸ್ಪಿ ಬೆಂ.ಗ್ರಾಮಾಂತರ)

Leave a comment

Leave a Reply

Your email address will not be published. Required fields are marked *

Related Articles

ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಣೆ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ನಾಳೆ ನಡೆಯುವ ಸಾಧ್ಯತೆ

ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆ ಸಂಬಂಧ ಸಿಎಂ ಜೊತೆ ಸಿದ್ದರಾಮಯ್ಯ,...

ರಾಜ್ಯಾದ್ಯಂತ ಹೋಮ್ ಸ್ಟೇ ನೋಂದಣಿ ಪ್ರಕ್ರಿಯೆಗೆ ಉತ್ತಮ ಪ್ರತಿಕ್ರಿಯೆ; 500 ಹೋಮ್‌ಸ್ಟೇ ಮಾಲೀಕರಿಂದ ಅರ್ಜಿ ಸಲ್ಲಿಕೆ

ಬೆಂಗಳೂರು: ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೋಮ್‌ಸ್ಟೇಗಳ ನೋಂದಣಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇಲ್ಲಿಯವರೆಗೆ 500ಕ್ಕೂ ಹೆಚ್ಚು ಹೋಮ್‌ಸ್ಟೇ...

ಬಿಡದಿ ಟೌನ್‌ಶಿಪ್‌ : ಅನಿತಾ ಕುಮಾರಸ್ವಾಮಿ, ನಿಖಿಲ್‌ಗೆ ಸೇರಿದ ಭೂಮಿಗೂ ಅಧಿಸೂಚನೆ ಹೊರಡಿಸಿದ ರಾಜ್ಯ ಸರಕಾರ

ಬೆಂಗಳೂರು: ಬಿಡದಿ ಟೌನ್ ಶಿಪ್ ಜಟಾಪಟಿ ಮತ್ತಷ್ಟು ತೀವ್ರಗೊಂಡಿದ್ದು, ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ತೀವ್ರ...

ಹೊಸಮುಖಗಳಿಗೆ ಆದ್ಯತೆ ನೂತನ ಸಚಿವರ ಪರಿಷ್ಕೃತ ಪಟ್ಟಿ ಹೈಕಮಾಂಡ್ ಬಳಿ; ಸಿಎಂ-ಮಾಜಿ ಸಿಎಂ ಬೆಂಗಳೂರಿಗೆ ವಾಪಸ್

ದೆಹಲಿದಲ್ಲಿ ಕಾಂಗ್ರೆಸ್ ಹೈಕಮಾಂಡ್‌ನೊಂದಿಗೆ ಮಹತ್ವದ ಸಭೆಗಳನ್ನು ನಡೆಸಿದ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ...