ಸನಾತನ ಧರ್ಮದ ಬಗ್ಗೆ ಅಪಪ್ರಚಾರ ಮಥುರಾದಲ್ಲಿ ಸನ್ನಿ ಲಿಯೋನ್ ಕಾರ್ಯಕ್ರಮ ರದ್ದು  ::ಶ್ರೀ ಕೃಷ್ಣ ಜನ್ಮಭೂಮಿ ಸಂಘರ್ಷ ನ್ಯಾಸ್‌ನ ದಿನೇಶ್ ಫಲಹರಿ

20

ಮಥುರಾ: ಹೊಸ ವರ್ಷಾಚರಣೆ ಪ್ರಯುಕ್ತ ಉತ್ತರ ಪ್ರದೇಶದ ಮಥುರಾದಲ್ಲಿ ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಅವರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೆ, ಸ್ಥಳೀಯ ಮಠಾಧೀಶರ ಆಕ್ಷೇಪಣೆ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ನಾವು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಪತ್ರ ಬರೆದಿದ್ದೇವೆ. ಇದು ಶ್ರೀಕೃಷ್ಣನ ಜನ್ಮಸ್ಥಳವಾಗಿದೆ. ಇಲ್ಲಿ ಶ್ರೀಕೃಷ್ಣ ಲೀಲೆ ಪ್ರದರ್ಶನ ನಡೆಯುತ್ತದೆ. ಜತೆಗೆ, ಪ್ರಾರ್ಥನೆ ಸಲ್ಲಿಸಲು ಧರ್ಮಗುರುಗಳು ಇಲ್ಲಿಗೆ ಬರುತ್ತಾರೆ. ಇಂತಹ ಸ್ಥಳದಲ್ಲಿ ಸನ್ನಿ ಲಿಯೋನ್ ಅವರನ್ನು ಕರೆಸಿ ಡಿಜೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಸನ್ನಿ ಲಿಯೋನ್ ಅವರನ್ನು ಮಥುರಾಕ್ಕೆ ಆಹ್ವಾನಿಸುವ ಮೂಲಕ ಕೆಲವರು ಸನಾತನ ಧರ್ಮದ ಬಗ್ಗೆ ಅಪಪ್ರಚಾರ ಮಾಡಲು ಬಯಸುತ್ತಿದ್ದಾರೆ ಎಂದು ಶ್ರೀ ಕೃಷ್ಣ ಜನ್ಮಭೂಮಿ ಸಂಘರ್ಷ ನ್ಯಾಸ್‌ನ ದಿನೇಶ್ ಫಲಹರಿ ತಿಳಿಸಿದ್ದಾರೆ. ಸನ್ನಿ ಲಿಯೋನ್ ಅವರು ಅಶ್ಲೀಲತೆಯನ್ನು ಪ್ರಚಾರ ಮಾಡುತ್ತಾರೆ. ಅಂತವರನ್ನು ಬ್ರಿಜ್ ಭೂಮಿಯಿಂದ ದೂರವಿಡಬೇಕು ಎಂದೂ ದಿನೇಶ್ ಹೇಳಿದ್ದಾರೆ.

ಜನವರಿ 1ರಂದು ನಡೆಯಲಿದ್ದ ಲೈವ್ ಡಿಜೆ ಪ್ರದರ್ಶನದಲ್ಲಿ ಸನ್ನಿ ಲಿಯೋನ್‌ ಭಾಗವಹಿಸಬೇಕಿತ್ತು. ಆದರೆ, ಮಠಾಧೀಶರು ಮತ್ತು ಭಕ್ತಾದಿಗಳ ಭಾವನೆಗಳನ್ನು ಪರಿಗಣಿಸಿ ಕಾರ್ಯಕ್ರಮವನ್ನು ರದ್ದುಗೊಳಿಸಲು ನಿರ್ಧರಿಸಿದ್ದು, ಟಿಕೆಟ್‌ ದರ ಮರುಪಾವತಿ ಮಾಡುತ್ತಿದ್ದೇವೆ ಎಂದು ಆಯೋಜಕರಲ್ಲಿ ಒಬ್ಬರಾದ ಮಿಥುಲ್ ಪಾಠಕ್ ಹೇಳಿದ್ದಾ

Leave a comment

Leave a Reply

Your email address will not be published. Required fields are marked *

Related Articles

ಮೆಗಾ ರಫೆಲ್ ಜೆಟ್ ಯೋಜನೆಗೆ ‘ಕೇಂದ್ರ’ ಅನುಮೋದನೆ, 114 ಜೆಟ್‌ ಖರೀದಿ, ಬಹುತೇಕ ಭಾರತದಲ್ಲೇ ನಿರ್ಮಾಣ

ನವದೆಹಲಿ: ಪಹಲ್ಗಾಮ್ ಉಗ್ರ ದಾಳಿ ಬಳಿಕ ಪಾಕಿಸ್ತಾನದ ಮೇಲೆ ಭಾರತೀಯ ಸೇನೆ ನಡೆಸಿದ್ದ ಆಪರೇಷನ್ ಸಿಂದೂರ್...

ಮುಂಬೈ ನೂತನ ಮೇಯರ್‌ ರೀತು ತಾವಡೆ ಅವಿರೋಧ ಆಯ್ಕೆ: 40ವರ್ಷ್ ಗಳ ನಂತರ ಬಿಜೆಪಿಗೆ ಒಲಿದ ಪಟ್ಟ

ಮುಂಬೈ: ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ನ ನೂತನ ಮೇಯರ್ ಆಗಿ ಬಿಜೆಪಿ ಕಾರ್ಪೊರೇಟರ್ ರೀತು ತಾವ್ಡೆ...

ಸ್ವಪಕ್ಷ ಸರಕಾರದ ಸಚಿವರನ್ನು ಜಾಡಿಸಿದ ಬಿಜೆಪಿ ಶಾಸಕಿ ಮೈಥಿಲಿ ಠಾಕೂರ್ ಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ

ಪಾಟ್ನಾ: ನೇರವಾಗಿ ಪ್ರಶ್ನೆ ಕೇಳುವುದರಲ್ಲಿ ಹೆಸರಾದ ಬಿಹಾರದ ಬಿಜೆಪಿಯ ಅತ್ಯಂತ ಕಿರಿಯ ಶಾಸಕಿ ಮೈಥಿಲಿ ಠಾಕೂರ್...

ಬಿಜೆಪಿಯಿಂದ ನಮಗೆ ಅಚ್ಚೆದಿನ್ ಬಂದಿಲ್ಲ ಬೆಂಬಲಿಸಿದ ಎಲ್ಲರಿಗೂ ರಾಮ ಮಂದಿರ ನಿರ್ಮಾಣವಾಗಿ ಲಾಭವಾಗಿದೆ :: ಮೋಹನ್ ಭಾಗವತ್

“ನವದೆಹಲಿ: ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಏಕರೂಪ ನಾಗರಿಕ ಸಂಹಿತೆಯನ್ನು (UCC) ರೂಪಿಸಬೇಕು ಮತ್ತು ಅದು ವಿಭಜನೆಗೆ...