ಬೆಳ್ತಂಗಡಿಯಲ್ಲಿ ಕೃಷಿಗೆ ನೀರು ಒದಗಿಸುವ ಕಿಂಡಿ ಅಣೆಕಟ್ಟುಗಳಿಗೆ ತ್ಯಾಜ್ಯ ಸಮಸ್ಯೆ

50

ಬೆಳ್ತಂಗಡಿ : ಬೆಳ್ತಂಗಡಿಯಲ್ಲಿ ಕೃಷಿಗೆ ನೀರು ಒದಗಿಸುವ ಕಿಂಡಿ ಅಣೆಕಟ್ಟುಗಳಿಗೆ ತ್ಯಾಜ್ಯ ಸಮಸ್ಯೆ ನದಿಯಲ್ಲಿ ತುಂಬಿರುವ ತ್ಯಾಜ್ಯ ಸರಿಯಾಗಿ ವಿಲೇವಾರಿಯಾಗದೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ ತಾಜ್ಯ ಹೂಳು ತುಂಬಿದ್ದು,ಅಣೆಕಟ್ಟುಗಳಲ್ಲಿ ನೀರು ಸಂಗ್ರಹಕ್ಕೆ ಅಡಚಣೆ

ಬೇಸಿಗೆ ಆಗಮಿಸುತ್ತಿದ್ದು, ಕೃಷಿಗೆ ನೀರು ಒದಗಿಸುವ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಹಾಕಿ ನೀರು ಸಂಗ್ರಹಿಸುವ ಸಮಯವಾಗಿದೆ. ನೀರು ಸಂಗ್ರಹಕ್ಕೆ ಮೊದಲು ನದಿಗಳಲ್ಲಿ ಸಂಗ್ರಹಗೊಂಡಿರುವ ತ್ಯಾಜ್ಯ ವಿಲೇವಾರಿ ಅತ್ಯಗತ್ಯವಾಗಿದೆ.

Collapse Ad AI Summary ಕೃಷಿಗೆ ನೀರು ಒದಗಿಸುವ ಕಿಂಡಿ ಅಣೆಕಟ್ಟುಗಳಲ್ಲಿ ತ್ಯಾಜ್ಯ ವಿಲೇವಾರಿ ಸವಾಲು View Discussion AI Summary ನದಿ ನೀರು ಮಲಿನಗೊಂಡು ಸಾಂಕ್ರಾಮಿಕ ರೋಗ ಹರಡುವ ಭೀತಿ View Discussion AI Summary ಹೂಳು, ಮರಳು ಸಮಸ್ಯೆಯಿಂದ ನೀರು ಸಂಗ್ರಹಕ್ಕೆ ಅಡ್ಡಿ View Discussion Poll LIVE null votes ನೀರು ಮಾಲಿನ್ಯ ನಿಯಂತ್ರಣವೇ ಕೃಷಿ ಬೆಳವಣಿಗೆಯ ಪ್ರಮುಖ ಅಡಚಣೆಯೇ?

ಜಿಲ್ಲೆಯಲ್ಲಿ ಹರಿಯುವ ನದಿ, ಹೊಳೆ, ಹಳ್ಳಗಳಿಗೆ ನೂರಾರು ಕಿಂಡಿ ಅಣೆಕಟ್ಟುಗಳಿವೆ. ಪ್ರಸ್ತುತ ನದಿಗಳಲ್ಲಿ ಸಾಮಾನ್ಯ ಸ್ಥಿತಿಯಲ್ಲಿ ನೀರು ಹರಿಯುತ್ತಿದೆ. ನೀರು ಕಡಿಮೆ ಇರುವ ಕಾರಣ ನದಿಗಳ ಪರಿಸರದಲ್ಲಿ ಪ್ಲಾಸ್ಟಿಕ್‌ ಚೀಲಗಳು, ಬಾಟಲಿ ಸಹಿತ ಇತರ ತ್ಯಾಜ್ಯ ಎಲ್ಲೆಂದರಲ್ಲಿ ಕಂಡು ಬರತೊಡಗಿದೆ.

ಮಳೆಗಾಲದಲ್ಲಿ ನದಿ ನೀರಿನ ಜತೆ ಹರಿದು ಬಂದ ತ್ಯಾಜ್ಯ, ಜನರು ತಂದು ಎಸೆಯುವ ತ್ಯಾಜ್ಯ ಸೇರಿಕೊಂಡು ನದಿ ಪ್ರದೇಶಗಳು ತ್ಯಾಜ್ಯದ ಕೊಂಪೆಯಾಗಿ ಮಾರ್ಪಟ್ಟಿವೆ. ಈ ತ್ಯಾಜ್ಯವನ್ನು ವಿಲೇವಾರಿ ಮಾಡದೆ ನೀರು ಸಂಗ್ರಹಿಸಿದರೆ ತೋಟಗಳಿಗೆ ಕಸ ಬಂದು ಬೀಳುವ ಸಾಧ್ಯತೆ ಇದೆ. ಜತೆಗೆ ಕಿಂಡಿ ಅಣೆಕಟ್ಟುಗಳಲ್ಲಿ ಸಂಗ್ರಹಗೊಳ್ಳುವ ನೀರು ಮಲಿನಗೊಂಡು ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಲಿದೆ.

ಇದೇ ನೀರನ್ನು ಕುಡಿಯುವ ಪ್ರಾಣಿ, ಪಕ್ಷಿಗಳಿಗೂ ಮಾರಕವಾಗಲಿದೆ. ಎಲ್ಲೆಲ್ಲೂ ತ್ಯಾಜ್ಯ ಪ್ಲಾಸ್ಟಿಕ್‌ ಬಾಟಲಿ, ಚೀಲಗಳು ನದಿ ನೀರನ್ನು ಸೇರುತ್ತಿವೆ. ಇದಲ್ಲದೆ ಕೆಲವೆಡೆ ಜನರು ತ್ಯಾಜ್ಯವನ್ನು ನೇರವಾಗಿ ನದಿಗಳಿಗೆ ಎಸೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಕಾರ್ಯಕ್ರಮಗಳು ನಡೆದ ಬಳಿಕ ಉಳಿಯುವ ಆಹಾರ ತ್ಯಾಜ್ಯವನ್ನು ನದಿಗಳಿಗೆ ಎಸೆಯುತ್ತಿದ್ದಾರೆ.

ಪ್ರಾಣಿಗಳ ಕಳೇಬರಗಳು ಕೂಡ ನೀರಿನಲ್ಲಿ ತೇಲುತ್ತಿವೆ. ಕಾಡಿನ ಪ್ರದೇಶದಲ್ಲಿ ಸಂಗ್ರಹವಾಗುವ ತ್ಯಾಜ್ಯ ಕೂಡ ಮಳೆಗಾಲದಲ್ಲಿ ನೀರಿನೊಂದಿಗೆ ಹರಿದು ನದಿಗೆ ಸೇರಿವೆ. ಪಂಚಾಯಿತಿಗಳಲ್ಲಿ ತ್ಯಾಜ್ಯ ಘಟಕಗಳ ಕೊರತೆ, ಸರಿಯಾದ ಕಸ ವಿಲೇವಾರಿ ನಡೆಸದಿರುವುದು ಕೂಡ ತ್ಯಾಜ್ಯ ರಾಶಿಗೆ ಕಾರಣವಾಗಿದೆ. ಹೂಳಿನ ಸಮಸ್ಯೆ ಕಿಂಡಿ ಅಣೆಕಟ್ಟುಗಳ ಪರಿಸರದಲ್ಲಿ ಭಾರಿ ಪ್ರಮಾಣದ ಹೂಳು, ಮರಳು ಸಂಗ್ರಹಗೊಂಡಿದ್ದು, ನೀರು ಸಂಗ್ರಹಿಸಲು ಸಮಸ್ಯೆ ನೀಡಿದೆ.

ಈ ಹೂಳನ್ನು ತೆರವುಗೊಳಿಸಲು ಮರಳು ನೀತಿ ಅಡ್ಡಿಯಾಗಿದೆ. ಕಿಂಡಿ ಅಣೆಕಟ್ಟುಗಳ ನೀರು ಸಂಗ್ರಹಕ್ಕಾಗಿ ಮರಳು ತೆಗೆಯಲು ಮುಂದಾದರೆ ಓಡಿ ಬರುವ ಹಲವು ಇಲಾಖೆಗಳು, ಇದನ್ನು ತೆರವುಗೊಳಿಸುವ ಮಾರ್ಗೋಪಾಯಗಳ ಬಗ್ಗೆ ಯೋಚಿಸದಿರುವುದು ವಿಪರ್ಯಾಸ. ಮರಳು ತುಂಬಿರುವ ಪ್ರದೇಶದಲ್ಲಿ ನೀರು ಸಂಗ್ರಹಿಸಿದರೆ ಅದರ ಉಪಯೋಗ ಸಿಗುವುದು ಕೆಲವು ದಿನಗಳಿಗೆ ಮಾತ್ರ. ಇಂತಹ ಜಾಗದಲ್ಲಿ ಸಂಗ್ರಹವಾಗುವ ನೀರು ಅಂತರ್ಜಲ ಮಟ್ಟದ ಮೇಲು ಯಾವುದೇ ಪರಿಣಾಮವನ್ನು ಬೀರುವುದಿಲ್ಲ.

ಮನೆ ಮುಂದೆ ಲೋಡ್ ಕಸ ಸುರಿತಾರೆ ಹುಷಾರ್! ನಮ್ಮ ಕಿಂಡಿ ಅಣೆಕಟ್ಟಿನ ಪರಿಸರದಲ್ಲಿ ತುಂಬಿರುವ ಹೂಳು, ಮರಳು ತೆರವುಗೊಳಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಕಳೆದ ಎರಡು -ಮೂರು ವರ್ಷಗಳಿಂದ ಮನವಿ ಮಾಡಲಾಗಿದ್ದರು, ಯಾವುದೇ ಪ್ರಯೋಜನವಾಗಿಲ್ಲ.

ವರ್ಷದಿಂದ ವರ್ಷಕ್ಕೆ ಮರಳಿನ ಪ್ರಮಾಣ ಅಧಿಕಗೊಳ್ಳುತ್ತಿದೆ. ಇದರಿಂದ ಕಿಂಡಿ ಅಣೆಕಟ್ಟಿಗೆ ಹಾನಿಯಾಗಿದ್ದು, ನೀರು ಸಂಗ್ರಹ ಕಾಮಗಾರಿ ಸವಾಲಾಗಿ ಪರಿಣಮಿಸಿದೆ. – ಶಶಿಧರ, ಫಲಾನುಭವಿ, ಕಾಪು ಕಿಂಡಿ ಅಣೆಕಟ್ಟು, ಮುಂಡಾಜೆ. ನದಿ ಪ್ರದೇಶಗಳಲ್ಲಿ ಕಂಡು ಬರುವ ತ್ಯಾಜ್ಯವನ್ನು ತಕ್ಷಣ ವಿಲೇವಾರಿ ಮಾಡಲು ಆ ಪರಿಸರದ ಪಂಚಾಯಿತಿಗಳಿಗೆ ಸೂಚನೆ ನೀಡಲಾಗುವುದು. ”

Leave a comment

Leave a Reply

Your email address will not be published. Required fields are marked *

Related Articles

ಕೊಡಗು, ಬೀದರ್, ಬಳ್ಳಾರಿ, ಚಿತ್ರದುರ್ಗ ಮತ್ತು ಮೈಸೂರು ಸೇರಿದಂತೆ ರಾಜ್ಯದ ಎಂಟು ಕಡೆಗಳಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಭ್ರಷ್ಟ ಅಧಿಕಾರಿಗೆ...

ತಮ್ಮ ತಮ್ಮ ಕ್ಷೇತ್ರಗಳ ಸಮಸ್ಯೆ ಯ ಚಿಂತೆ ಬಿಟ್ಟು ಐಪಿಎಲ್ ಪಂದ್ಯಾಟದ ಉಚಿತ ಟಿಕೆಟ್ ಗೆ ಮುಗಿಬಿದ್ದ ರಾಜ್ಯದ 221 ಶಾಸಕರು

ಬೆಂಗಳೂರು: ಇಂಡಿಯನ್ ಪ್ರಿಮಿಯರ್ ಲೀಗ್  ಟೂರ್ನಿಯ 11ನೇ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ...

ದಾವಣಗೆರೆ ಉಪ ಚುನಾವಣೆ ಯಾರಿಗೆ ಟಿಕೆಟ್ ಕೊಟ್ಟರೂ ನಾಯಕರಿಂದ ಒಟ್ಟಾಗಿ ಕೆಲಸ ಮಾಡುವ ಭರವಸೆ:: ಡಿಕೆ ಶಿವಕುಮಾರ್

ಬೆಂಗಳೂರು: ಉಪಚುನಾವಣೆಯಲ್ಲಿ ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಒಮ್ಮತದಿಂದ ಕೆಲಸ ಮಾಡುವುದಾಗಿ ಸಚಿವ ಎಸ್ ಎಸ್...

ಮದುವೆಯಾಗಬೇಕಿದ್ದ ಬಾಲಕಿಯ ಎದೆ ಭಾಗ ಕತ್ತರಿಸಿ ಗುಪ್ತಾಂಗಕ್ಕೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಭಾವಿ ಪತಿ ಸೈಯದ್

ಬೆಂಗಳೂರು: ತನ್ನನ್ನು  ಮದುವೆಯಾಗಬೇಕಿದ್ದ ಬಾಲಕಿಯ ಎದೆ ಭಾಗ ಕತ್ತರಿಸಿ, ಗುಪ್ತಾಂಗಕ್ಕೆ ಚಾಕುವಿನಿಂದ ಇರಿದು ಭಾವಿ ಪತಿಯೇ ಬರ್ಬರವಾಗಿ...