ಬೆಂಗಳೂರಿನಲ್ಲಿ ವಾಯುಗುಣಮಟ್ಟ ಶೇ.180 ಕ್ಕೆ ಏರಿಕೆ

34

ಬೆಂಗಳೂರು : ಬೆಂಗಳೂರಿನಲ್ಲಿ ವಾಯುಗುಣಮಟ್ಟ ಶೇ.180 ಕ್ಕೆ ಏರಿಕೆ ಮುಂಜಾನೆ ವಾಕಿಂಗ್‌, ರಾತ್ರಿ ಓಡಾಟ ಕಡಿಮೆ ಮಾಡಿಕೊಳ್ಳಲು ಆರೋಗ್ಯ ತಜ್ಞರ ಸಲಹೆ ಬೆಂಗಳೂರು ವಾಯುಮಾಲಿನ್ಯಕ್ಕೆ ವಾಹನಗಳದ್ದೇ ಶೇ.64 ರಷ್ಟು ಪಾಲು ಕಲುಷಿತ ಗಾಳಿಯಿಂದಾಗಿ ಶ್ವಾಸಕೋಶ, ರಕ್ತ ಮತ್ತು ಮೆದುಳಿನ ಮೇಲೆ ಗಂಭೀರ ಪರಿಣಾಮ

ಸಿಲಿಕಾನ್‌ ಸಿಟಿಯಲ್ಲಿ ದಿನದಿಂದ ದಿನಕ್ಕೆ ವಾಯುಗುಣಮಟ್ಟ ಕುಸಿತ ಕಂಡುಬಂರುತ್ತಿದ್ದು, ಇದಕ್ಕೆ ವಾಯುಮಾಲಿನ್ಯವೇ ಕಾರಣ. ಇದೇ ರೀತಿ ಮುಂದುವರೆದರೆ ದೆಹಲಿಯ ವಾಯುಗುಣಮಟ್ಟ ಕಳಪೆಯಾದಂತೆ ಬೆಂಗಳೂರಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಡಿ.12ರಂದು ಬಿಡುಗಡೆಯಾದ ಗಾಳಿಯ ಗುಣಮಟ್ಟ ಸೂಚ್ಯಂಕ ಪ್ರಕಾರ, ಬೆಂಗಳೂರಿನ ಗಾಳಿ ಗುಣಮಟ್ಟ ಶೇ.180 ಕ್ಕೆ ತಲುಪಿದೆ. ಇದು ನಗರದ ನಿವಾಸಿಗಳ ಆರೋಗ್ಯದ ಮೇಲೆ, ವಿಶೇಷವಾಗಿ ಸೂಕ್ಷ್ಮ ವರ್ಗದವರ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.

ಮಾಲಿನ್ಯಕ್ಕೆ ಕಾರಣ ಏನು? ನಗರದಲ್ಲಿ ಈಗಾಗಲೇ ವಿಪರೀತ ಸಂಚಾರ ದಟ್ಟಣೆ, ಹೆಚ್ಚುವರಿ ವಾಹನ ಓಡಾಟ ಮತ್ತು ನಿರಂತರವಾಗಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಗಳು ಧೂಳಿನ ಪ್ರಮಾಣವನ್ನು ಹೆಚ್ಚಿಸಿವೆ. ಇದರ ಜೊತೆಗೆ ಚಳಿಗಾಲದ ಹವಾಮಾನವು ಮಾಲಿನ್ಯಕಾರಕಗಳನ್ನು ವಾತಾವರಣದ ಮೇಲ್ಮೈಗೆ ಹತ್ತಿರವಾಗಿ ಹಿಡಿದಿಟ್ಟುಕೊಳ್ಳುತ್ತಿರುವುದರಿಂದ ಗಾಳಿಯ ಗುಣಮಟ್ಟ ಮತ್ತಷ್ಟು ಹದಗೆಟ್ಟಿದೆ ಎನ್ನಲಾಗಿದೆ.

ಹಿರಿಯರು ಕಿರಿಯರ ಆರೋಗ್ಯದ ಮೇಲೆ ಪರಿಣಾಮ ವಾಯುಗುಣಮಟ್ಟ ಕುಸಿತಗೊಂಡಿರುವ ಕಾರಣ ಬೆಂಗಳೂರಿನ ನಿವಾಸಿಗಳಿಗೆ ಉಸಿರಾಟದ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಈಗಾಗಲೇ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರು, ಮಕ್ಕಳು, ಹಿರಿಯ ವಯಸ್ಸಿನವರು ಕಲುಷಿತ ಗಾಳಿಯಿಂದಾಗಿ ಮತ್ತಷ್ಟು ಸಮಸ್ಯೆ ಎದುರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ವೈದ್ಯರ ಸಲಹೆ ಏನು? ಆರೋಗ್ಯ ತಜ್ಞರು ಸದ್ಯ ನಗರ ನಿವಾಸಿಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಹಲವು ಸಲಹೆ ಪಾಲನೆ ಮಾಡಲು ಸೂಚನೆ ನೀಡಲಾಗಿದೆ.

ಅನಗತ್ಯವಾಗಿ ಹೊರಗಡೆ ಓಡಾಡುವುದನ್ನು ತಪ್ಪಿಸುವುದು, ವಿಶೇಷವಾಗಿ ಮುಂಜಾನೆ ಮತ್ತು ತಡರಾತ್ರಿ ಮಾಲಿನ್ಯವು ಒಂದೇ ಕಡೆ ನಿಂತಿರುವುದರಿಂದ ಈ ಸಮಯದಲ್ಲಿ ಹೊರಗೆ ಹೋಗುವುದನ್ನು ಕಡಿಮೆ ಮಾಡಿ.ಹೊರಗೆ ಹೋಗುವಾಗ ಧೂಳು ಮತ್ತು ಕಣಗಳಿಂದ ರಕ್ಷಣೆ ಪಡೆಯಲು ಕಡ್ಡಾಯವಾಗಿ ಮಾಸ್ಕ್ ಧರಿಸಿ ಓಡಾಡುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.

ತೀವ್ರ ಹದಗೆಟ್ಟ ದೆಹಲಿಯ ವಾಯುಗುಣಮಟ್ಟ! ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಕೆಲವು ವಾರಗಳಿಂದ ಕಂಟೆಂಟ್ ಕ್ರಿಯೇಟರ್ ‘ಅನ್‌ಬಾಕ್ಸಿಂಗ್ ಬೆಂಗಳೂರು’ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಿಂದ ವಿಡಿಯೋವೊಂದು ರಿಲೀಸ್‌ ಆಗಿದ್ದು, ಸಖತ್‌ ಸದ್ದು ಮಾಡುತ್ತಿದೆ. ಒಂದು ತಿಂಗಳಿನಿಂದ ಬೆಂಗಳೂರಿನ ಗಾಳಿಯನ್ನು ಅಧ್ಯಯನ ಮಾಡುತ್ತಿದ್ದೇನೆ ಮತ್ತು ನಾವು ಯೋಚಿಸುವುದಕ್ಕಿಂತ ಇದು ಹೆಚ್ಚು ಕಲುಷಿತವಾಗಿದೆ ಎಂದು ಹೇಳಿಕೊಂಡಿದ್ದಾರೆ.

ನಗರದ ಸರಾಸರಿ ಪರ್ಟಿಕ್ಯುಲೇಟ್‌ ಮ್ಯಾಟರ್‌(ಉಸಿರಾಡಬಹುದಾದ ಕಣಗಳು)PM2.5 ಮಟ್ಟಗಳು 40 ರ ಸುಮಾರಿಗೆ ಇರುತ್ತವೆ. ಇದನ್ನು ಅಧಿಕೃತವಾಗಿ ‘ಮಧ್ಯಮ’ ಎಂದು ವರ್ಗೀಕರಿಸಲಾಗದೆ. ಆದರೂ ಇದು ಆರೋಗ್ಯಕರ ವಾಯುಗುಣಮಟ್ಟಕ್ಕೆ ದೂರವಾದದ್ದು ಎಂದು ಹೇಳಿಕೊಂಡಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸಿನ ಪ್ರಕಾರ ಪರ್ಟಿಕ್ಯುಲೇಟ್‌ ಮ್ಯಾಟರ್‌ PM2.5 ಮಟ್ಟ 5 ಕ್ಕಿಂತ ಕಡಿಮೆ ಇರಬೇಕು.

ಭಾರತೀಯ ಸುರಕ್ಷತಾ ಮಿತಿಗಳು 40 ಕ್ಕಿಂತ ಕಡಿಮೆ ಇದ್ದರೆ ಸ್ವೀಕಾರಾರ್ಹ ಎಂದು ಹೇಳುತ್ತವೆ. ಆದರೆ, ಬೆಂಗಳೂರು ಈ ವರ್ಷ ಹಲವು ಬಾರಿ 200 ರ ಗಡಿಯನ್ನು ಮುಟ್ಟಿದೆ. ಯುರೋಪ್ ಅಥವಾ ಜಪಾನ್‌ನಲ್ಲಿ ಈ ಮಟ್ಟದ ಮಾಲಿನ್ಯ ಕಂಡುಬಂದರೆ ಅದನ್ನು ‘ಗಂಭೀರ ಆರೋಗ್ಯ ಅಪಾಯ’ ಎಂದು ಪರಿಗಣಿಸಿ, ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗುತ್ತದೆ ಎಂದು ಈ ವಿಡಿಯೋದಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ? ಉತ್ತಮ- 0-50ಕನಿಷ್ಠ ಪರಿಣಾಮ ಮಧ್ಯಮ – 50-100ಸಣ್ಣ ಪ್ರಮಾಣದ ಉಸಿರಾಟದ ತೊಂದರೆ. ಕಳಪೆ – 150-200ಸೂಕ್ಷ್ಮ ಗುಂಪಿನ ಜನರಿಗೆ ಅಸ್ವಸ್ಥತೆ (ಪ್ರಸ್ತುತ ಬೆಂಗಳೂರಿನ ಸ್ಥಿತಿ) ಗಂಭೀರ – 200 – 300 ಆರೋಗ್ಯ ಪರಿಣಾಮ. ಅಪಾಯಕಾರಿ – 300 -400+ಉಸಿರಾಟದ ಕಾಯಿಲೆಯ ಸಂಭವನೀಯತೆ ಹೆಚ್ಚಳ”

Leave a comment

Leave a Reply

Your email address will not be published. Required fields are marked *

Related Articles

ಸನ್ನಡತೆಯ ಆಧಾರದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ರಾಜ್ಯದ ಕಾರಾಗೃಹಗಳಲ್ಲಿರುವ 30 ಕೈದಿಗಳ ಬಿಡುಗಡೆ ಆದೇಶ

“ಜೀವಾವಧಿ ಶಿಕ್ಷೆಗೆ ಗುರಿಯಾಗಿ ರಾಜ್ಯದ ಬೇರೆಬೇರೆ ಕಾರಾಗೃಹಗಳಲ್ಲಿರುವ 30 ಕೈದಿಗಳನ್ನು ಸನ್ನಡತೆಯ ಆಧಾರದಲ್ಲಿ ಬಿಡುಗಡೆಗೊಳಿಸಿ ರಾಜ್ಯ...

ಬಳ್ಳಾರಿ ಬ್ಯಾನರ್ ಗಲಾಟೆ ನಿನ್ನೆ ಅಧಿಕಾರ ಸ್ವೀಕರಿಸಿದ್ದ ಬಳ್ಳಾರಿ ಎಸ್ಪಿ ಪವನ್ ನೆಜ್ಜೂರ್ ಅಮಾನತು

ಬೆಂಗಳೂರು: ಬ್ಯಾನರ್ ಕಟ್ಟುವ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಕಾಂಗ್ರೆಸ್ ಕಾರ್ಯಕರ್ತ ಗುಂಡೇಟಿಗೆ ಬಲಿಯಾದ...

2025 ರಲ್ಲಿ ರಾಜ್ಯದಲ್ಲಿ ನಿರ್ಲಕ್ಷದ ಚಾಲನೆಗಾಗಿ 5947 ವಾಹನ ಚಾಲನಾ ಪರವಾನಿಗೆ ರದ್ದು

ಬೆಂಗಳೂರು: ಕರ್ನಾಟಕದ ಸಾರಿಗೆ ಇಲಾಖೆಯು 2025 ರಲ್ಲಿ ಕರ್ನಾಟಕದಾದ್ಯಂತ 5,947 ಚಾಲನಾ ಪರವಾನಗಿಗಳನ್ನು (DL) ಅಮಾನತುಗೊಳಿಸಿದೆ....

ಬೆಂಗಳೂರಿನಲ್ಲಿ 2.50 ಕೋಟಿ ರೂ. ಮೌಲ್ಯದ ಡ್ರಗ್ಸ್, ನಗದು ಜಪ್ತಿ ವಿದೇಶಿ ಪ್ರಜೆ ಬಂಧನ

ಬೆಂಗಳೂರು: ಹೊಸ ವರ್ಷಾಚರಣೆಗೂ ಮುನ್ನ, ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು...