ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರ ಲೆಟರ್ ಹೆಡ್ ಸೀಲು ಸಹಿ ದುರ್ಬಳಕೆ ದುರ್ಬಳಕೆ ಪ್ರಕರಣ ದಾಖಲು ಶ್ರೀಮತಿ ರಜನಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ತೆಂಕ ಗ್ರಾಮ ಪಂಚಾಯತ್, ಕಾಪು ತಾಲೂಕು ಇವರು ದಿನಾಂಕ 30/10/2025 ರಂದು ಪಿರ್ಯಾದಿದಾರರಿಗೆ ಸಾರ್ವಜನಿಕರು ತೆಂಕ ಗ್ರಾಮದ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರ ಸಹಿ ಇರುವ ದಾಖಲೆ ದುರುಪಯೋಗ ಆಗಿದೆ ಎಂಬುದಾಗಿ ಬಂದ ಮಾಹಿತಿ ಮೇರೆಗೆ ಸಂಶಯಗೊಂಡು ತೆಂಕ ಗ್ರಾಮ ಪಂಚಾಯತ್ ಕಛೇರಿಯಿಂದ ಮೂಲ್ಕಿ ಉಪ-ನೊಂದಣಾಧಿಕಾರಿಯವರ ಕಛೇರಿಗೆ ಕಳುಹಿಸಿದ ದಾಖಲೆಗಳ ಬಗ್ಗೆ ಮೂಲ್ಕಿ ಉಪ-ನೊಂದಣಾಧಿಕಾರಿಯವರ ಕಛೇರಿಯಲ್ಲಿ ದೂರುದಾರರು ಪರಿಶೀಲಿಸಲಾಗಿ 
ತೆಂ.ಗ್ರಾ.ಪಂ 003/2025-26 ನಂಬ್ರದ ದಿನಾಂಕ ನಮೂದು ಇಲ್ಲದ ತೆಂಕ ಗ್ರಾಮ ಪಂಚಾಯತ್‌ನ ಲೆಟರ್ ಹೆಡ್‌ನ ದೃಡಪತ್ರದ ಜೆರಾಕ್ಸ್ ಪ್ರತಿ ಇದ್ದು ಅದರಲ್ಲಿ “ ಉಡುಪಿ ಜಿಲ್ಲೆ ಕಾಪು ತಾಲೂಕು ತೆಂಕ ಗ್ರಾಮ ಪಂಚಾಯತ್ ವ್ಯಾಪ್ತಿಯ 7 ನೇ ವಾರ್ಡಿನ ಸರ್ವೇ ನಂಬ್ರ 56/2 ರಲ್ಲಿ ಗಿರಿಯಪ್ಪ ಕೋಟ್ಯಾನ್ ಇವರ ಹೆಸರಿನಲ್ಲಿ ಕಟ್ಟಡ ನಂಬ್ರ 7-5 (152600304100110964) ರಲ್ಲಿರುವ ವಾಸ್ತವ್ಯದ ಕಟ್ಟಡವು ಸುಮಾರು 800 ಚದರ ಅಡಿಯ ಹಂಚಿನ ಕಟ್ಟಡವಾಗಿದ್ದು,ಸದ್ರಿ ಕಟ್ಟಡದ ನೆಲಕ್ಕೆ ಟೈಲ್ಸ್ ಅಳವಡಿಸಲಾಗಿರುತ್ತದೆ ಎಂದು ಈ ಮೂಲಕ ದೃಡಪಡಿಸಲಾಗಿದೆ “ ಎಂಬುದಾಗಿ ನಮೂದು ಇದ್ದು, ಸದ್ರಿ ದೃಡಪತ್ರದಲ್ಲಿ ತೆಂಕ ಗ್ರಾಮ ಪಂಚಾಯತ್‌ನ ಲೆಟರ್ ಹೆಡ್‌ನಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರ ಸೀಲು ಹಾಗೂ ದೂರುದಾರರ ನಕಲಿ ಸಹಿ ಇರುವುದು ಕಂಡುಬಂದಿದ್ದು, ನಮೂನೆ 11 ಬಿ ಯು ಈ ವರ್ಷ ಜೂನ್ ತಿಂಗಳಿನಿಂದ ಬಂದ್ ಆಗಿ ಈ ವರ್ಷ ಡಿಸೆಂಬರ್ 1 ನೇ ತಾರೀಕಿನಂದು ಓಪನ್ ಆಗಿದ್ದು,
ಆ ಮಧ್ಯದಲ್ಲಿ ಯಾರೋ ಯಾವುದೋ ದುರುದ್ದೇಶದಿಂದ ತೆಂಕ ಗ್ರಾಮ ಪಂಚಾಯತ್ ಕಛೇರಿಯ ಲೆಟರ್ ಹೆಡ್, ಸೀಲನ್ನು ದುರ್ಬಳಕೆ ಮಾಡಿ, ಪಿರ್ಯಾದಿದಾರರ ನಕಲಿ ಸಹಿಯನ್ನು ಮಾಡಿ ಉಪ ನೊಂದಣಿ ಕಛೇರಿ ಮೂಲ್ಕಿ ಇಲ್ಲಿಗೆ ನಮೂನೆ 11 ಬಿ ರ ಬದಲಿಗೆ ದೃಡಪತ್ರ ನೀಡಿ ಪಿರ್ಯಾದಿದಾರರಿಗೆ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.”
Leave a comment