ಮಂಗಳೂರು : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ 40%ಕ್ಕೂ ಅಧಿಕ ಅಕ್ರಮ ಹೋರ್ಡಿಂಗ್ಸ್‌ಗಳ ಕಡಿವಾಣಕ್ಕೆ ಹೊಸ ಸಾಫ್ಟವೇರ್‌

21

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಳವಡಿಸಲಾದ ಹೋರ್ಡಿಂಗ್ಸ್‌ಗಳ ಸರ್ವೇಗೆ ಎಎಚ್‌ಎಂಎಸ್‌ ಹೊಸ ಸಾಫ್ಟ್‌ವೇರ್‌ ತಯಾರಾಗಿದೆ. ಇದಕ್ಕೆ ಈಗಾಗಲೇ ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು, ವಾರದೊಳಗೆ ಕಾಮಗಾರಿ ಅನುಜ್ಞಾ ಪತ್ರ ನೀಡುವ ಸಾಧ್ಯತೆಯಿದೆ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ 40%ಕ್ಕೂ ಅಧಿಕ ಅಕ್ರಮ ಹೋರ್ಡಿಂಗ್ಸ್‌ಗಳ ಕಡಿವಾಣಕ್ಕೆ ಹೊಸ ಸಾಫ್ಟವೇರ್‌ ನಗರದಲ್ಲಿದೆ ಶೇ.40% ಕ್ಕೂ ಹೆಚ್ಚು ಅಕ್ರಮ ಹೋರ್ಡಿಂಗ್ಸ್‌ ಹೊಸ ಸಾಫ್ಟ್ ವೇರ್‌ ನಿಂದ ಮಹಾನಗರ ಪಾಲಿಕೆಗೆ ದುಪ್ಪಟ್ಟು ತೆರಿಗೆ ಬರುವ ನಿರೀಕ್ಷೆ

ಮಂಗಳೂರು ನಗರ ವ್ಯಾಪ್ತಿಯಲ್ಲಿ ಶೇ.40ಕ್ಕೂ ಅಧಿಕ ಅಕ್ರಮ ಹೋರ್ಡಿಂಗ್ಸ್‌ಗಳಿದ್ದು, ಇದರಿಂದ ಪಾಲಿಕೆಗೆ ಲಕ್ಷಾಂತರ ರೂ. ತೆರಿಗೆ ನಷ್ಟವಾಗುತ್ತಿದೆ. ಅಕ್ರಮ ಹೋರ್ಡಿಂಗ್ಸ್‌ಗಳು ಹಾಗೂ ಇದರಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಈಗಾಗಲೇ ಪಾಲಿಕೆ ಸಭೆಯಲ್ಲಿ ದೂರುಗಳು ಕೇಳಿ ಬರುತ್ತಿವೆ.

ಈ ಬಗ್ಗೆ ಸರ್ವೇ ನಡೆಸಿ ಕಾರ್ಯಾಚರಣೆ ನಡೆಸಲು ಪಾಲಿಕೆಯಲ್ಲಿ ಸಿಬ್ಬಂದಿ ಕೊರತೆಯೂ ಇದೆ. ಈ ಕಾರಣದಿಂದ ಎಎಚ್‌ಎಂಎಸ್‌ ಸಾಫ್ಟ್‌ವೇರ್‌ ಮೂಲಕ ಸರ್ವೇ ನಡೆಸಿ ಕ್ರಮ ಕೈಗೊಳ್ಳಲು ಪಾಲಿಕೆ ನಿರ್ಧರಿಸಿದೆ.

ಎಎಚ್‌ಎಂಎಸ್‌ ಸಾಫ್ಟ್‌ವೇರ್‌ ವಿಶೇಷತೆ ಎಎಚ್‌ಎಂಎಸ್‌ (ಅಡ್ವೆಟೈಸ್‌ಮೆಂಟ್‌ ಹೋರ್ಡಿಂಗ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ) ಸಾಫ್ಟ್‌ವೇರ್‌ ಇದಾಗಿದ್ದು, ಮೈಸೂರಿನ ವಿಜಿಲೈಟ್‌ ಸಂಸ್ಥೆ ಟೆಂಡರ್‌ ವಹಿಸಿಕೊಂಡಿದೆ. ಹೊಸ ಸಾಫ್ಟ್‌ವೇರ್‌ ಮೂಲಕ ಪ್ರಾರಂಭಿಕ ಹಂತದಲ್ಲಿ ಆರ್‌ಐ (ರೆವಿನ್ಯೂ ನಿರೀಕ್ಷಕರು)ಗಳೇ ಸರ್ವೇ ನಡೆಸಲಿದ್ದಾರೆ. ಈ ಸಾಫ್ಟ್‌ವೇರ್‌ನಲ್ಲಿ ಜಿಯೋ ಟ್ಯಾಗ್‌ ಮಾಡಲಾಗಿದ್ದು, ಜಿಪಿಎಸ್‌ ಲೋಕೇಷನ್‌ ಸೆರೆಹಿಡಿಲಾಗುತ್ತದೆ.

ಹೊಸ ಹೋರ್ಡಿಂಗ್‌ಗೆ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಬೇಕು. ಹೋರ್ಡಿಂಗ್‌ನ ಗಾತ್ರ, ತೆರಿಗೆ ಮೊತ್ತ ಸೇರಿದಂತೆ ಎಲ್ಲವೂ ಸಾಫ್ಟ್‌ವೇರ್‌ನಲ್ಲಿ ಲಭ್ಯವಿದ್ದು, ಆನ್‌ಲೈನ್‌ನಲ್ಲೇ ಪೇಮೆಂಟ್‌ ಮಾಡಬೇಕಾಗಿದೆ.

ಖಾಸಗಿ ಸ್ಥಳಗಳಲ್ಲಿ ಎಷ್ಟು? ಸಾರ್ವಜನಿಕ ಸ್ಥಳದಲ್ಲಿ ಎಷ್ಟು? ಅಧಿಕೃತ ಮತ್ತು ಅನಧಿಕೃತ ಎಷ್ಟು? ಯಾವ ಹೋರ್ಡಿಂಗ್‌ಗೆ ಎಷ್ಟು ತೆರಿಗೆ ಪಡೆಯಲಾಗಿದೆ ಎಂಬ ಸಮಗ್ರ ವಿವರ ಲಭ್ಯವಾಗಲಿದೆ. ಅಕ್ರಮಗಳು ಬಯಲಾಗಲಿದೆ ನೂತನ ಸಾಫ್ಟ್‌ವೇರ್‌ ಮೂಲಕ ಈ ಹಿಂದೆ ಹೋರ್ಡಿಂಗ್‌ ಅಳವಡಿಕೆ ಮಾಡುವಾಗ ತಪ್ಪಾಗಿ ಮಾಹಿತಿ ನೀಡಿದ್ದರೆ ಅದೂ ಕೂಡ ಬಹಿರಂಗವಾಗುತ್ತದೆ.

ಇದಕ್ಕೆ ದಂಡ ರೂಪದ ತೆರಿಗೆ ಸೇರಿದಂತೆ ಮುಂದೆ ಅದನ್ನು ಸಾಫ್ಟ್‌ ವೇರ್‌ನಲ್ಲಿ ನಮೂದಿಸಿ ಅಧಿಕೃತಗೊಳಿಸಬೇಕಾಗುತ್ತದೆ. ಮನಪಾಕ್ಕೆ ದುಪ್ಪಟ್ಟು ತೆರಿಗೆ ನಿರೀಕ್ಷೆ ಪಾಲಿಕೆಗೆ ಪ್ರಸ್ತುತ ಹೋರ್ಡಿಂಗ್ಸ್‌ಗೆ 2.50 ಕೋಟಿ ರೂ. ವಾರ್ಷಿಕ ತೆರಿಗೆ ಬರುತ್ತಿದೆ. ಹೊಸ ಸಾಫ್ಟ್‌ವೇರ್‌ ಅನುಷ್ಠಾನವಾದ ಬಳಿಕ ಅಧಿಕೃತ, ಅನಧಿಕೃತ ಹೋರ್ಡಿಂಗ್ಸ್‌ಗಳು ಈ ಸಾಫ್ಟ್‌ವೇರ್‌ ಅಪ್ಲೋಡ್‌ ಮಾಡಿ ಅಧಿಕೃತಗೊಳಿಸಬೇಕಾದ ಕಾರಣ ಪಾಲಿಕೆಗೆ ವಾರ್ಷಿಕ ತೆರಿಗೆಯಲ್ಲೂ ದುಪ್ಪಟ್ಟು ಆದಾಯ ನಿರೀಕ್ಷಿಸಲಾಗಿದೆ.

ನಮ್ಮ ಮೆಟ್ರೋದಲ್ಲಿ ಕ್ರಾಂತಿ, ರೆಡಿಯಾಗ್ತಿದೆ ಅತಿ ಉದ್ದದ ಮಾರ್ಗ, ಎಲ್ಲಿಂದ ಎಲ್ಲಿಗೆ?, ಇಲ್ಲಿದೆ ವಿವರ! ಕೋಟ್ಯಂತರ ತೆರಿಗೆ ವಂಚನೆ ನಂತೂರು, ಕೊಟ್ಟಾರ, ಮಂಗಳಾದೇವಿ, ಎಂ.ಜಿ. ರಸ್ತೆ, ಮಣ್ಣಗುಡ್ಡ, ಚಿಲಿಂಬಿ, ಉರ್ವ, ಕೊಟ್ಟಾರ, ಕುಲಶೇಖರ, ಪಂಪ್‌ವೆಲ್‌, ಕಂಕನಾಡಿ, ಫಳ್ನೀರ್‌, ಸ್ಟೇಟ್‌ಬ್ಯಾಂಕ್‌ ಪಾಂಡೇಶ್ವರ, ಹಂಪನಕಟ್ಟೆ ವ್ಯಾಪ್ತಿಯಲ್ಲಿ ಅನಧಿಕೃತ ಹೋರ್ಡಿಂಗ್ಸ್‌ಗಳಿದ್ದು, ಇದರಿಂದ ಪಾಲಿಕೆಗೆ ಕೋಟ್ಯಂತರ ರೂ. ತೆರಿಗೆ ನಷ್ಟವಾಗುತ್ತಿದೆ.

ಹೋರ್ಡಿಂಗ್ಸ್‌ಗೆ ಕರ್ನಾಟಕ ಮುನ್ಸಿಪಲ್‌ ಕಾರ್ಪೊರೇಷನ್‌ ಆ್ಯಕ್ಟ್, 1976 (ಕೆಎಂಸಿ ವಿಧೇಯಕ) ಮತ್ತು ಎಂಎಂಸಿ ಜಾಹೀರಾತು ಉಪ ನಿಯಮಗಳನ್ನು ಅವಲಂಬಿಸಿದೆ. ಯಾವುದೇ ಹೋರ್ಡಿಂಗ್‌ ಅಥವಾ ಜಾಹೀರಾತು ಫಲಕ ಹಾಕುವ ಮೊದಲು ಸ್ಥಳೀಯ ಪ್ರಾಧಿಕಾರದಿಂದ ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ಶೇ.30ರಷ್ಟು ಮಂದಿ ಪರವಾನಗಿ ಪಡೆಯದೆ ಹೋರ್ಡಿಂಗ್ಸ್‌ ಅಳವಡಿಕೆ ಮಾಡಿದ ಬಗ್ಗೆ ದೂರುಗಳಿವೆ.”

Leave a comment

Leave a Reply

Your email address will not be published. Required fields are marked *

Related Articles

ಮಂಗಳೂರು–ಸುಬ್ರಹ್ಮಣ್ಯ ಮಾರ್ಗ ದುರಸ್ಥಿ ಕಾರ್ಯ ರೈಲು ಸಂಚಾರ 35 ದಿನ ರದ್ದು ಹೊಸ ರೈಲುಗಳ ವೇಳಾಪಟ್ಟಿ ಬಿಡುಗಡೆ

ಕರ್ನಾಟಕದಲ್ಲಿ ರೈಲು ಸೇವೆಗಳು ದಕ್ಷಿಣ ಪಶ್ಚಿಮ ರೈಲ್ವೆ ವಲಯದಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಮತ್ತು ನಿರ್ವಹಣಾ ಕಾಮಗಾರಿಗಳ...

ಲೈಂಗಿಕ ದೌರ್ಜನ್ಯ ಆರೋಪ ಮೂಡಬಿದ್ರೆ ಪೊಲೀಸ್ ಇನ್ಸ್ ಪೆಕ್ಟರ್ ಸಂದೇಶ್ ಬಿಜಿ ಅಮಾನತು

ಮಂಗಳೂರು: ಮೂಡುಬಿದಿರೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸಂದೇಶ್ ಬಿ.ಜಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಲಾಗಿದ್ದು,...

ಮಹಿಳಾ ದಿನಾಚರಣೆ ಪ್ರಯುಕ್ತ ಪ್ರಸಿದ್ಧ ರಂಗೋಲಿ ಕಲಾವಿದೆ ಶ್ರೀಮತಿ ವಿಶಾಲ ಮಹೇಶ್ ರವರಿಗೆ ಸನ್ಮಾನ

ಬ್ರಹ್ಮಾವರ : ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಶ್ರೀ ಮಾಸ್ತಿ ಅಮ್ಮನವರ ದೇವಸ್ಥಾನದಲ್ಲಿ ಜರಗಿದ ಸರಳ...

ಪೂರ್ಣಿಮಾ ಶೆಟ್ಟಿಗೆ ‘ಮಾನವ ಹಕ್ಕುಗಳ ಸಬಲೀಕರಣ ಮಾನವೀಯ ಶ್ರೇಷ್ಠತೆ’ ಪ್ರಶಸ್ತಿ ಗೌರವ

ಸಾಮಾಜಿಕ ಸೇವಾ ಕಾರ್ಯಕರ್ತೆ ಹಾಗೂ ‘ವಸುದೈವ ಕುಟುಂಬಕಂ’ ಎನ್‌ಜಿಒ ಸಂಸ್ಥೆಯ ಸಂಸ್ಥಾಪಕಿ ಪೂರ್ಣಿಮಾ ಶೆಟ್ಟಿ ಅವರಿಗೆ...