ನವ ಮಂಗಳೂರು ಬಂದರು : ಪ್ರಾಧಿಕಾರ ಸ್ವಯಂಚಾಲಿತ ಸ್ಕ್ಯಾ‌ನಿಂಗ್‌ ವ್ಯವಸ್ಥೆ ಅಳವಡಿಸಿದ ದೇಶದ ಪ್ರಥಮ ಬಂದರು

35

ಮಂಗಳೂರು : ನವಮಂಗಳೂರು ಬಂದರು ಪ್ರಾಧಿಕಾರದ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಸುರಕ್ಷತೆ ಮತ್ತು ದಕ್ಷತೆ ಬಲಪಡಿಸಲು ಅತ್ಯಾಧುನಿಕ, ಸಂಪೂರ್ಣ ಸ್ವಯಂಚಾಲಿತ ಕಣ್ಗಾವಲು ಮತ್ತು ಭದ್ರತಾ ವ್ಯವಸ್ಥೆಗಾಗಿ ಅಂಡರ್‌ ವೆಹಿಕಲ್‌ ಸ್ಕ್ಯಾ‌ನರ್‌ ಸಿಸ್ಟಮ್‌(ಯುವಿಎಸ್‌ಎಸ್‌) ಅಳವಡಿಸಿಕೊಂಡಿದೆ.

ಎನ್‌ಎಂಪಿಎ ಸುರಕ್ಷೆಗೆ ಅತ್ಯಾಧುನಿಕ ಸೌಲಭ್ಯ, ಅಕ್ರಮ ಪತ್ತೆಗೆ ಸಂಪೂರ್ಣ ನಿಗಾ ಕೇಂದ್ರ ಸರಕಾರದ ಮೆಸರ್ಸ್‌ ಸೆಂಟ್ರಲ್‌ ಎಲೆಕ್ಟ್ರಾನಿಕ್ಸ್‌ ಲಿ. 6.30 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ ಯುವಿಎಸ್‌ಎಸ್‌ ಅಳವಡಿಕೆ ಗೇಟ್‌ನಿಂದ ವಾಹನ ಶೀಘ್ರ ತೆರವುಗೊಳ್ಳಲಿದೆ. ಬಂದರಿನ ಸರಕು ನಿರ್ವಹಣೆ ಸಮಯ ಕಡಿಮೆಯಾಗಿದೆ. 

ಈ ಅತ್ಯಾಧುನಿಕ ಉಪಕ್ರಮದೊಂದಿಗೆ, ನವ ಮಂಗಳೂರು ಬಂದರು ಪ್ರಾಧಿಕಾರವು ಸ್ವಯಂಚಾಲಿತ ಸ್ಕ್ಯಾ‌ನಿಂಗ್‌ ವ್ಯವಸ್ಥೆ ಅಳವಡಿಸಿದ ದೇಶದ ಪ್ರಥಮ ಬಂದರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದು ಸ್ಮಾರ್ಟ್‌, ಸುರಕ್ಷಿತ ಮತ್ತು ಡಿಜಿಟಲ್‌ ಸಬಲೀಕರಣಗೊಂಡ ಕಡಲ ಕಾರ್ಯಾಚರಣೆಯ ಬದ್ಧತೆಯನ್ನು ಬಲಪಡಿಸುವಂತಿದೆ.”

Leave a comment

Leave a Reply

Your email address will not be published. Required fields are marked *

Related Articles

ರಾಜ್ಯ ಕಂಬಳ ಅಸೋಸಿಯೇಷನ್ ವತಿಯಿಂದ ಯುವಜನ ಕ್ರೀಡಾ ಸಬಲೀಕರಣ ಇಲಾಖೆ ಪ್ರಧಾನ ಕಾರ್ಯದರ್ಶಿ ಭೇಟಿ

ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಅವರ ನೇತೃತ್ವದಲ್ಲಿ, ರಾಜ್ಯ ಯುವಜನ...

ಬೈಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಶಿಶಿರ್ ಶೆಟ್ಟಿ ಆಯ್ಕೆ

“ಬೈಲೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿ ಬೈಲೂರು ಇಲ್ಲಿಯ ಹಳೆ ವಿದ್ಯಾರ್ಥಿ ಸಂಘವು ಪುನರ್...

ಪೆರ್ಡೂರ್ ಸರಕಾರಿ ಜಮೀನು ಒತ್ತುವರಿ, ಮನೆ ನಿರ್ಮಾಣ, ದೂರು ನೀಡಿದರು ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸಾಮಾಜಿಕ ಕಾರ್ಯಕರ್ತ ನವೀನ್ ಪೆರ್ಡೂರ್ ಆಕ್ರೋಶ

ಬಡವರಿಗೊಂದು ನ್ಯಾಯ ಶ್ರೀಮಂತರಿಗೊಂದು ನ್ಯಾಯ ಎನ್ನುವ ಮಾತು ಪೆರ್ಡೂರ್ ಗ್ರಾಮ ಪಂಚಾಯತ್ ನಲ್ಲಿ ಈಗ ನಿಜವಾಗಿದೆ...

ಮಂಗಳೂರು–ಸುಬ್ರಹ್ಮಣ್ಯ ಮಾರ್ಗ ದುರಸ್ಥಿ ಕಾರ್ಯ ರೈಲು ಸಂಚಾರ 35 ದಿನ ರದ್ದು ಹೊಸ ರೈಲುಗಳ ವೇಳಾಪಟ್ಟಿ ಬಿಡುಗಡೆ

ಕರ್ನಾಟಕದಲ್ಲಿ ರೈಲು ಸೇವೆಗಳು ದಕ್ಷಿಣ ಪಶ್ಚಿಮ ರೈಲ್ವೆ ವಲಯದಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಮತ್ತು ನಿರ್ವಹಣಾ ಕಾಮಗಾರಿಗಳ...