ರಾಜ್ಯದಲ್ಲಿ ನವಜಾತ ಶಿಶುಗಳ ಆರೈಕೆಗಾಗಿ 9 ವಿಶೇಷ ನವಜಾತ ಶಿಶು ಆರೋಗ್ಯ ಕೇಂದ್ರಗಳು ಸಿದ್ದ

33

ಮಂಗಳೂರು: ರಾಜ್ಯದಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣದಲ್ಲಿ ಭಾರಿ ಇಳಿಕೆ ಕಂಡು ಬಂದಿದೆ ವೈದ್ಯಕೀಯ ಸೇವೆಗಳ ಸುಧಾರಣೆಯಿಂದಾಗಿ ಗ್ರಾಮೀಣ ಭಾಗದಲ್ಲೂ ಉತ್ತಮ ಸ್ಥಿತಿಯಿದ್ದು, ನವಜಾತ ಶಿಶುಗಳ ಮರಣ ಪ್ರಮಾಣವನ್ನು ಗಣನೀಯ ಕುಗ್ಗಿಸಿದೆ ರಾಜ್ಯದಲ್ಲಿ ನವಜಾತ ಶಿಶುಗಳ ಆರೈಕೆಗಾಗಿ ಸಿದ್ದವಾಗಿದೆ 9 ವಿಶೇಷ ನವಜಾತ ಶಿಶು ಆರೋಗ್ಯ ಕೇಂದ್ರಗಳು

ರಾಜ್ಯದಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ ಇಳಿಕೆಯಾಗಿರುವುದು ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆ.ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆಯಾಗಿದ್ದು, ರಾಜ್ಯದಲ್ಲಿ 1 ಸಾವಿರ ಮಂದಿಯಲ್ಲಿ 12 ನವಜಾತ ಶಿಶುಗಳು ಸಾವನ್ನಪ್ಪಿದ್ದು ಈ ಹಿಂದೆ ಇದರ ಪ್ರಮಾಣ 16ಕ್ಕೂ ಹೆಚ್ಚಿತ್ತು.

ಕಳೆದ 3 ವರ್ಷಗಳ ಲೆಕ್ಕಾಚಾರ ಗಮನಿಸಿದರೆ ಈ ಬಾರಿಯ ಬೆಳವಣಿಗೆ ಆಶಾದಾಯಕವಾಗಿದೆ. ಮುಖ್ಯವಾಗಿ ಅವಧಿಪೂರ್ಣ ಮಗುವಿನ ಜನನ, ಶಿಶುವಿನ ಕಡಿಮೆ ತೂಕದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು, ಜನನ ಸಮಯದಲ್ಲಿ ಉಸಿರುಗಟ್ಟುವಿಕೆಯಿಂದಾಗಿ, ನ್ಯುಮೋನಿಯ ಹಾಗೂ ಸೆಪ್ಸಿಸ್‌ ಕಾಯಿಲೆಗಳು, ಜನ್ಮದಾತ ಹೃದಯ ಸಂಬಂಧಿಸಿದ ಕಾಯಿಲೆಗಳು, ನರವ್ಯೂಹಕ್ಕೆ ಸಂಬಂಧಿಸಿದ ದೋಷಗಳಿಂದ ಹೆಚ್ಚಾಗಿ ನವಜಾತ ಶಿಶುಗಳು ಪ್ರಾಣ ಕಳೆದುಕೊಳ್ಳುತ್ತಿದೆ.

ನವಜಾತ ಶಿಶುಗಳಿಗೆ ಸಂಬಂಧಿಸಿದಂತೆ ವೈದ್ಯಕೀಯ ಸೇವೆಗಳಲ್ಲಿ ಬಹು ಹಂತದ ಸೌಲಭ್ಯ ಆಧರಿತ ನವಜಾತ ಶಿಶುಗಳ ಆರೋಗ್ಯ ಸೇವೆಗಳು, ಸಮುದಾಯ ಆಧರಿತ ಸೇವೆಗಳು, ಆರೋಗ್ಯ ಸಿಬ್ಬಂದಿ ಸಾಮರ್ಥ್ಯ ವರ್ಧನೆಯೇ ಈ ನವಜಾತ ಶಿಶುಗಳ ಮರಣ ಪ್ರಮಾಣವನ್ನು ಗಣನೀಯ ಕುಗ್ಗಿಸಿದೆ.

ನವಜಾತ ಶಿಶು ಆರೈಕೆ ಕೇಂದ್ರಗಳ ಸ್ಥಾಪನೆ ರಾಜ್ಯದಲ್ಲಿರುವ 9 ತಾಲೂಕು ಆಸ್ಪತ್ರೆಗಳಲ್ಲಿ ವಿಶೇಷ ನವಜಾತ ಶಿಶು ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಉಳಿದ ಆಸ್ಪತ್ರೆಗಳಲ್ಲಿ ನವಜಾತ ಶಿಶುಸ್ಥಿರೀಕರಣ ಘಟಕಗಳನ್ನು ಸ್ಥಾಪನೆ ಮಾಡಿದ್ದರ ಪರಿಣಾಮ ನವಜಾತ ಶಿಶುಗಳ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಲಾಗುತ್ತಿದೆ.

ಜತೆಗೆ ಕೇಂದ್ರ ಸರಕಾರದ ಮಾರ್ಗಸೂಚಿಯನ್ವಯ 3000 ವಾರ್ಷಿಕ ಹೆರಿಗೆಗಳು ಸಂಭವಿಸುವ ಆಸ್ಪತ್ರೆಗಳಲ್ಲಿ ವಿಶೇಷ ನವಜಾತ ಶಿಶು ಆರೈಕೆ ಕೇಂದ್ರಗಳನ್ನು ಸ್ಥಾಪಿಸುವುದು ಅಗತ್ಯವಿದ್ದು, ಇದರ ಪರಿಣಾಮ ಈ ಕೇಂದ್ರಗಳು ಈಗ ಕಾರ್ಯಾಚರಣೆ ಮಾಡುತ್ತಿದೆ.

ಈ ವರ್ಷದಲ್ಲಿ ತುಸು ಏರಿಕೆ ರಾಜ್ಯದಲ್ಲಿ ಕಳೆದ 3 ವರ್ಷಗಳ ಲೆಕ್ಕಾಚಾರದ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ತುಸು ಹೆಚ್ಚು ಎನ್ನಬಹುದು. ಮುಖ್ಯವಾಗಿ 2022-23ರಲ್ಲಿ 793 ಮಂದಿ ಗ್ರಾಮೀಣ ಭಾಗದಲ್ಲಿ ಹಾಗೂ 6,678 ನಗರ ಭಾಗದಲ್ಲಿ ಒಟ್ಟು 7,471 ನವಜಾ ತ ಶಿಶುಗಳು ಪ್ರಾಣ ಕಳೆದುಕೊಂಡಿದೆ. 2023-24ರಲ್ಲಿ ಗ್ರಾಮೀಣ ಭಾಗದಲ್ಲಿ 501 ಹಾಗೂ ನಗರ ಭಾಗದಲ್ಲಿ 5,133 ಮಂದಿ ಒಟ್ಟು 5,634 ಮಂದಿಯ ಸಾವು ಸಂಭವಿಸಿದೆ.

2024-25ರಲ್ಲಿ ಗ್ರಾಮೀಣ ಭಾಗದಲ್ಲಿ 572 ಹಾಗೂ ನಗರ ಭಾಗದಲ್ಲಿ 5,254 ಮಂದಿ ಒಟ್ಟು 5,826 ನವಜಾತ ಶಿಶುಗಳು ಪ್ರಾಣ ಕಳೆದುಕೊಂಡಿದೆ ಎಂದು ಆರೋಗ್ಯ ಇಲಾಖೆಯ ಆರ್‌ಸಿಎಚ್‌ ಯೋಜನಾ ನಿರ್ದೇಶಕರು ಮಾಹಿತಿ ನೀಡುತ್ತಾರೆ.

ದ.ಕದಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣದಲ್ಲಿ ಇಳಿಕೆ ಕಳೆದ ಮೂರು ವರ್ಷಗಳಿಂದಲೂ ನವಜಾತ ಶಿಶುಗಳ ಮರಣ ಪ್ರಮಾಣದ ಟ್ರೆಂಡ್‌ ಗಮನಿಸಿದರೆ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದ ಉಳಿದ ಜಿಲ್ಲೆಗಳಿಗಿಂತ ಕಡಿಮೆ ಪ್ರಮಾಣ ಹೊಂದಿದೆ.

2022-23ರಲ್ಲಿ 347 ಮಂದಿ ಮೃತಪಟ್ಟರೆ 2023-24ರಲ್ಲಿ 234 ಹಾಗೂ 2024-25ರಲ್ಲಿ 264 ನವಜಾತ ಶಿಶುಗಳು ಪ್ರಾಣ ಕಳೆದುಕೊಂಡಿವೆ. ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಸಾವುಗಳ ಪ್ರಮಾಣ ಕಡಿಮೆಯಿದ್ದು, ನಗರ ಭಾಗದಲ್ಲಿ ಕೊಂಚ ಹೆಚ್ಚಿದೆ. ಕಳೆದ ಮೂರು ವರ್ಷಗಳಲ್ಲಿ ಗ್ರಾಮೀಣ ಭಾಗದಲ್ಲಿ 19 ನವಜಾತ ಶಿಶುಗಳು ಸಾವು ಕಂಡರೆ ನಗರ ಭಾಗದಲ್ಲಿ 826 ನವಜಾತ ಶಿಶುಗಳು ಮೃತಪಟ್ಟಿದೆ.

ರಾಜ್ಯದಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣದಲ್ಲಿ ಬಹಳಷ್ಟು ಇಳಿಕೆಯಾಗಿದೆ. ಮುಖ್ಯವಾಗಿ ಆರೋಗ್ಯ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಸುಧಾರಣೆಗಳು ಇದಕ್ಕೆ ಕಾರಣವಾಗಿದ್ದು, ಇನ್ನಷ್ಟು ಇಳಿಕೆ ಮಾಡಲು ಪ್ರಯತ್ನ ನಡೆಯುತ್ತಿದೆ.”

Leave a comment

Leave a Reply

Your email address will not be published. Required fields are marked *

Related Articles

ಸನ್ನಡತೆಯ ಆಧಾರದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ರಾಜ್ಯದ ಕಾರಾಗೃಹಗಳಲ್ಲಿರುವ 30 ಕೈದಿಗಳ ಬಿಡುಗಡೆ ಆದೇಶ

“ಜೀವಾವಧಿ ಶಿಕ್ಷೆಗೆ ಗುರಿಯಾಗಿ ರಾಜ್ಯದ ಬೇರೆಬೇರೆ ಕಾರಾಗೃಹಗಳಲ್ಲಿರುವ 30 ಕೈದಿಗಳನ್ನು ಸನ್ನಡತೆಯ ಆಧಾರದಲ್ಲಿ ಬಿಡುಗಡೆಗೊಳಿಸಿ ರಾಜ್ಯ...

ಬಳ್ಳಾರಿ ಬ್ಯಾನರ್ ಗಲಾಟೆ ನಿನ್ನೆ ಅಧಿಕಾರ ಸ್ವೀಕರಿಸಿದ್ದ ಬಳ್ಳಾರಿ ಎಸ್ಪಿ ಪವನ್ ನೆಜ್ಜೂರ್ ಅಮಾನತು

ಬೆಂಗಳೂರು: ಬ್ಯಾನರ್ ಕಟ್ಟುವ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಕಾಂಗ್ರೆಸ್ ಕಾರ್ಯಕರ್ತ ಗುಂಡೇಟಿಗೆ ಬಲಿಯಾದ...

2025 ರಲ್ಲಿ ರಾಜ್ಯದಲ್ಲಿ ನಿರ್ಲಕ್ಷದ ಚಾಲನೆಗಾಗಿ 5947 ವಾಹನ ಚಾಲನಾ ಪರವಾನಿಗೆ ರದ್ದು

ಬೆಂಗಳೂರು: ಕರ್ನಾಟಕದ ಸಾರಿಗೆ ಇಲಾಖೆಯು 2025 ರಲ್ಲಿ ಕರ್ನಾಟಕದಾದ್ಯಂತ 5,947 ಚಾಲನಾ ಪರವಾನಗಿಗಳನ್ನು (DL) ಅಮಾನತುಗೊಳಿಸಿದೆ....

ಬೆಂಗಳೂರಿನಲ್ಲಿ 2.50 ಕೋಟಿ ರೂ. ಮೌಲ್ಯದ ಡ್ರಗ್ಸ್, ನಗದು ಜಪ್ತಿ ವಿದೇಶಿ ಪ್ರಜೆ ಬಂಧನ

ಬೆಂಗಳೂರು: ಹೊಸ ವರ್ಷಾಚರಣೆಗೂ ಮುನ್ನ, ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು...