ಬೆಂಗಳೂರು : ನಮ್ಮ ಮೆಟ್ರೊ ಹಳದಿ ಮಾರ್ಗಕ್ಕೆ ಬಂತು 6ನೇ ರೈಲಿನ ಬೋಗಿ ತಿಂಗಳಾಂತ್ಯಕ್ಕೆ ವಾಣಿಜ್ಯ ಸಂಚಾರ ನಿರೀಕ್ಷೆ ಪ್ರತಿ 12 ನಿಮಿಷಕ್ಕೊಂದು ರೈಲು ಲಭ್ಯ ಮಾರ್ಚ್ 2026ರ ವೇಳೆಗೆ ಮೂರು ನಿಮಿಷಕ್ಕೆ ಕಾಯುವ ಅವಧಿ ಇಳಿಕೆಯಾಗುವ ಸಾಧ್ಯತೆ ಮೆಟ್ರೋ ಯೆಲ್ಲೋ ಮಾರ್ಗ.
ನಮ್ಮ ಮೆಟ್ರೊ ಹಳದಿ ಮಾರ್ಗಕ್ಕೆ 6ನೇ ರೈಲಿನ ಬೋಗಿಗಳು ಬೆಂಗಳೂರು ತಲುಪಿದ್ದು, ಈ ತಿಂಗಳಾಂತ್ಯಕ್ಕೆ ವಾಣಿಜ್ಯ ಸಂಚಾರ ಆರಂಭಿಸುವ ನಿರೀಕ್ಷೆ ಇದೆ.
2ದಿನದಲ್ಲಿ ಬರಲಿದೆ ಮತ್ತಷ್ಟು ರೈಲು ಕೋಲ್ಕತ್ತಾದಿಂದ ಟಿಟಾಗರ್ ಸಂಸ್ಥೆಯಿಂದ ಹೊರಟ ಆರು ರೈಲು ಬೋಗಿಗಳ ಪೈಕಿ ಮೂರು ಬೋಗಿಗಳು ಹೆಬ್ಬಗೋಡಿ ಡಿಪೋಗೆ ಬಂದು ತಲುಪಿವೆ. ಇನ್ನುಳಿದ ಬೋಗಿಗಳು ಇನ್ನೆರಡು ದಿನದಲ್ಲಿ ಬಂದು ಸೇರಲಿವೆ.

ಸದ್ಯ ಆರ್.ವಿ ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ(ಹಳದಿ ಮಾರ್ಗ) ಐದು ರೈಲುಗಳು ಸಂಚರಿಸುತ್ತಿವೆ. ಪ್ರತಿ 15 ನಿಮಿಷಕ್ಕೊಂದು ರೈಲು ಕಾರ್ಯಾಚರಣೆಗೊಳ್ಳುತ್ತಿದ್ದು, ಆರನೇ ರೈಲು ಕಾರ್ಯಾಚರಣೆ ನಂತರ ಪ್ರತಿ 12 ನಿಮಿಷಕ್ಕೊಂದು ರೈಲಿನ ಸೇವೆ ಪ್ರಯಾಣಿಕರಿಗೆ ಲಭ್ಯವಾಗಲಿದೆ.
ಬೆಂಗಳೂರು-ತುಮಕೂರು ಮೆಟ್ರೋ ಕನಸಿಗೆ ಜೀವ! ರಾಜ್ಯದ ಮೊದಲ ಇಂಟರ್‌ಸಿಟಿ ಯೋಜನೆಗೆ ಅಧಿಕೃತ ಹೆಜ್ಜೆ! ಡಿಪಿಆರ್‌ಗೆ ಟೆಂಡರ್ ಆಹ್ವಾನ! ಎಲ್ಲೆಲ್ಲಿ ನಿಲ್ದಾಣ? ಯಾವಾಗ ಶುರು?

ಮಾರ್ಚ್‌ನಿಂದ 15 ರೈಲು ಸಂಚಾರ ಈ ಮಾರ್ಗದಲ್ಲಿ 2026ರ ಮಾರ್ಚ್ ವೇಳೆಗೆ 15 ರೈಲುಗಳು ಸಂಚರಿಸಲಿದ್ದು, ಪ್ರತಿ ಮೂರು ನಿಮಿಷಕ್ಕೊಂದು ರೈಲು ಪ್ರಯಾಣಿಕರಿಗೆ ಲಭ್ಯವಾಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಯೆಲ್ಲೋ ಲೈನ್‌ನಲ್ಲಿ ಎಷ್ಟು ಜನ ಪ್ರಯಾಣ? ಸದ್ಯ ಈ ನಮ್ಮ ಮೆಟ್ರೊದಲ್ಲಿಸರಾಸರಿ 9 ಲಕ್ಷ ಜನರು ಪ್ರಯಾಣಿಸುತ್ತಿದ್ದು, ಹಳದಿ ಮಾರ್ಗವೊಂದಲ್ಲಿಯೇ 80 ರಿಂದ 90 ಸಾವಿರ ಮಂದಿ ಪ್ರಯಾಣ ಮಾಡುತ್ತಿದ್ದಾರೆ. ರೈಲುಗಳ ಸಂಖ್ಯೆ ಹೆಚ್ಚಳಕ್ಕೆ ಅನುಗುಣವಾಗಿ ಪ್ರಯಾಣಿಕರ ಸಂಖ್ಯೆ ಕೂಡ ಹೆಚ್ಚಾಗುವ ನಿರೀಕ್ಷೆ ಇದೆ.”

Leave a comment