ಮಂಗಳೂರು:  ಡಿಸೆಂಬರ್ 20 ರಿಂದ ಜನವರಿ 4 ರ ತನಕ ನಡೆಯಲಿದೆ ಕರಾವಳಿ ಉತ್ಸವ

31

ಮಂಗಳೂರು:  ದಕ್ಷಿಣ ಕನ್ನಡ ಜಿಲ್ಲಾಡಳಿತ , ಜಿಲ್ಲಾ ಪಂಚಾಯಿತಿ ಮತ್ತು ಸ್ಥಳೀಯ ಸಂಘ- ಸಂಸ್ಥೆಗಳ ಸಹಯೋಗದೊಂದಿಗೆ ಸಾಂಸ್ಕೃತಿಕ, ಕ್ರೀಡಾ ಮತ್ತು ಮನೋರಂಜನಾ ಚಟುವಟಿಕೆಗಳ ಸಮಾಗಮವಾಗಿ ಕರಾವಳಿ ಉತ್ಸವ ಡಿ.20ರಿಂದ ಜ.4ರ ವರೆಗೆ ನಡೆಯಲಿದೆ.

ಕರಾವಳಿ ಉತ್ಸವ ಸ್ಯಾಂಡಲ್‌ವುಡ್‌ ಹಾಗೂ ಬಾಲಿವುಡ್‌ ತಾರೆಯರಿಂದ ಮ್ಯೂಸಿಕಲ್‌ ನೈಟ್‌ ಕಾರ್ಯಕ್ರಮ ಬೀಚ್ ಉತ್ಸವ, ಸಾಹಿತ್ಯ ಉತ್ಸವ ಮತ್ತು ಚಿತ್ರ ಶಿಲ್ಪ ನೃತ್ಯ ಮೇಳ ಸೇರಿದಂತೆ ಅನೇಕ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ

ಡಿ.20ರಂದು ಕರಾವಳಿ ಉತ್ಸವ ಮೈದಾನದಲ್ಲಿ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕರಾವಳಿ ಉತ್ಸವಕ್ಕೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ. ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

ಉತ್ಸವದ ಅವಧಿಯಾದ್ಯಂತ ಕರಾವಳಿ ಉತ್ಸವ ಮೈದಾನದಲ್ಲಿ ನಾನಾ ಮಳಿಗೆಗಳು, ಪ್ರದರ್ಶನಗಳು ಮತ್ತು ಅಮ್ಯೂಸ್‌ಮೆಂಟ್‌ ಪಾರ್ಕ್ ಸಾರ್ವಜನಿಕರಿಗಾಗಿ ಲಭ್ಯವಿರಲಿದೆ. ಪ್ರತೀ ಶನಿವಾರ ಮತ್ತು ಭಾನುವಾರ ಕರಾವಳಿಯ ಕಲೆ ಮತ್ತು ಸಾಂಸ್ಕೃತಿಕ ಪ್ರದರ್ಶನ ಆಯೋಜಿಸಲಾಗಿದೆ ಎಂದರು.

ಸಂಗೀತ ಸಂಭ್ರಮ ಜ.3 ಮತ್ತು 4ರಂದು ಪಣಂಬೂರು/ ತಣ್ಣೀರುಬಾವಿ/ ಸಸಿ ಹಿತ್ಲುಕಡಲ ತೀರಗಳಲ್ಲಿ ಸ್ಯಾಂಡಲ್‌ವುಡ್‌ ಹಾಗೂ ಬಾಲಿವುಡ್‌ ಕಲಾವಿದರಿಂದ ‘ಮ್ಯೂಸಿಕಲ್‌ ನೈಟ್‌’ ಕಾರ್ಯಕ್ರಮ ನಡೆಯಲಿದೆ. ಉತ್ಸವದ ಮುಂದುವರಿದ ಭಾಗವಾಗಿ ಜನವರಿ ಮತ್ತು ಫೆಬ್ರವರಿಯಲ್ಲಿ ವಿಶೇಷ ಕಾರ್ಯಕ್ರಮ ನಡೆಯಲಿವೆ ಎಂದರು.

ಬೀಚ್‌ ಉತ್ಸವ ಡಿ.20ರಿಂದ ಪ್ರತೀ ಶನಿವಾರ ಮತ್ತು ಭಾನುವಾರ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ಹೆಲಿ ರೈಡ್‌, ಜ.9ರಿಂದ 11ರ ತನಕ ಕದ್ರಿ ಪಾರ್ಕ್ ರಸ್ತೆಯಲ್ಲಿ ಚಿತ್ರ ಶಿಲ್ಪ ನೃತ್ಯ ಮೇಳ- ಕಲಾ ಪರ್ಬ, ಜ.26ರಂದು ಕದ್ರಿ ಪಾರ್ಕ್ನಲ್ಲಿ ಫಲಪುಷ್ಪ ಪ್ರದರ್ಶನ, ತಣ್ಣೀರುಬಾವಿ ಬೀಚ್‌ನಲ್ಲಿ 9ರಿಂದ 11ರ ತನಕ ಟ್ರಯಾತ್ಲಾನ್‌, 17, 18ರಂದು ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ, 23ರಿಂದ 25ರ ತನಕ ಪ್ರಮುಖ ಬೀಚ್‌ಗಳಲ್ಲಿ ಬೀಚ್‌ ಉತ್ಸವ ನಡೆಯಲಿದೆ ಎಂದರು.

ಒಟ್ಟು ಸುಮಾರು 2.5 ಕೋಟಿ ರೂ. ಮೊತ್ತದಲ್ಲಿ ಕರಾವಳಿ ಉತ್ಸವ ನಡೆಸಲು ಉದ್ದೇಶಿಸಿದ್ದು, ಸ್ಟಾಲ್‌ಗಳಿಂದ 30 ಲಕ್ಷ ರೂ. ಆದಾಯ ನಿರೀಕ್ಷಿಸಿ ಟೆಂಡರ್‌ ಕರೆಯಲಾಗಿದೆ.

ಸರಕಾರದಿಂದ 1.5 ಕೋಟಿ ರೂ. ಅನುದಾನ ಕೇಳಿದ್ದು, ಸ್ಥಳೀಯ ಕಂಪನಿಗಳಿಂದ ಒಂದು ಕೋಟಿ ರೂ. ಜಾಹೀರಾತು ರೂಪದಲ್ಲಿ ದೇಣಿಗೆ ಸಂಗ್ರಹಿಸಲಾಗುವುದು ಎಂದರು. ಜಿಲ್ಲಾ ಪಂಚಾಯಿತಿ ಸಿಇಒ ಕಾರ್ಭಾರಿ ವಿನಾಯಕ ನರ್ವಾಡೆ , ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ರಾಜು , ಡಿಸಿಪಿ ಮಿಥುನ್‌ ಎಚ್‌.ಎನ್‌. , ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ದಿಲೀಪ್‌ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವೈನ್‌ ಚೀಝ್‌ ಕೇಕ್‌ ಫೆಸ್ಟ್‌ ಡಿಸೆಂಬರ್‌ ಕೊನೆಯ ವಾರ ಪಣಂಬೂರು ಬೀಚ್‌ನಲ್ಲಿ ವೈನ್‌ ಚೀಝ್‌ ಕೇಕ್‌ ಫೆಸ್ಟ್‌, ಜ.30,31ರಂದು ಕದ್ರಿ ಪಾರ್ಕ್ ರಸ್ತೆ ಮತ್ತು ಯಾವುದಾದರೂ ಬೀಚ್‌ನಲ್ಲಿ ಫುಡ್‌ ಸ್ಟ್ರೀಟ್‌ ಆಯೋಜಿಸಲಾಗಿದೆ. ಜನವರಿ ಕೊನೆಯ ವಾರ ನಗರ ಕೇಂದ್ರ ಗ್ರಂಥಾಲಯ ಅಥವಾ ತೆರೆದ ಜಾಗದಲ್ಲಿ ಬುಕ್‌ ಫೆಸ್ಟ್‌, ಫೆಬ್ರವರಿ ಕೊನೆಯ ವಾರ ಬಿಗ್‌ ಸಿನಿಮಾಸ್‌ನಲ್ಲಿ ಫಿಲ್ಮ್‌ ಫೆಸ್ಟಿವಲ್‌, ಫೆ.14ರಂದು ಕದ್ರಿ ಪಾರ್ಕ್ನಲ್ಲಿ ಡಾಗ್‌ ಶೋ ಆಯೋಜಿಸಲಾಗಿದೆ ಎಂದು ಡಿಸಿ ಹೇಳಿದರು.”

Leave a comment

Leave a Reply

Your email address will not be published. Required fields are marked *

Related Articles

ಮಂಗಳೂರು–ಸುಬ್ರಹ್ಮಣ್ಯ ಮಾರ್ಗ ದುರಸ್ಥಿ ಕಾರ್ಯ ರೈಲು ಸಂಚಾರ 35 ದಿನ ರದ್ದು ಹೊಸ ರೈಲುಗಳ ವೇಳಾಪಟ್ಟಿ ಬಿಡುಗಡೆ

ಕರ್ನಾಟಕದಲ್ಲಿ ರೈಲು ಸೇವೆಗಳು ದಕ್ಷಿಣ ಪಶ್ಚಿಮ ರೈಲ್ವೆ ವಲಯದಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಮತ್ತು ನಿರ್ವಹಣಾ ಕಾಮಗಾರಿಗಳ...

ಲೈಂಗಿಕ ದೌರ್ಜನ್ಯ ಆರೋಪ ಮೂಡಬಿದ್ರೆ ಪೊಲೀಸ್ ಇನ್ಸ್ ಪೆಕ್ಟರ್ ಸಂದೇಶ್ ಬಿಜಿ ಅಮಾನತು

ಮಂಗಳೂರು: ಮೂಡುಬಿದಿರೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸಂದೇಶ್ ಬಿ.ಜಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಲಾಗಿದ್ದು,...

ಮಹಿಳಾ ದಿನಾಚರಣೆ ಪ್ರಯುಕ್ತ ಪ್ರಸಿದ್ಧ ರಂಗೋಲಿ ಕಲಾವಿದೆ ಶ್ರೀಮತಿ ವಿಶಾಲ ಮಹೇಶ್ ರವರಿಗೆ ಸನ್ಮಾನ

ಬ್ರಹ್ಮಾವರ : ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಶ್ರೀ ಮಾಸ್ತಿ ಅಮ್ಮನವರ ದೇವಸ್ಥಾನದಲ್ಲಿ ಜರಗಿದ ಸರಳ...

ಪೂರ್ಣಿಮಾ ಶೆಟ್ಟಿಗೆ ‘ಮಾನವ ಹಕ್ಕುಗಳ ಸಬಲೀಕರಣ ಮಾನವೀಯ ಶ್ರೇಷ್ಠತೆ’ ಪ್ರಶಸ್ತಿ ಗೌರವ

ಸಾಮಾಜಿಕ ಸೇವಾ ಕಾರ್ಯಕರ್ತೆ ಹಾಗೂ ‘ವಸುದೈವ ಕುಟುಂಬಕಂ’ ಎನ್‌ಜಿಒ ಸಂಸ್ಥೆಯ ಸಂಸ್ಥಾಪಕಿ ಪೂರ್ಣಿಮಾ ಶೆಟ್ಟಿ ಅವರಿಗೆ...