ಚೆನ್ನೈ ಮೆಟ್ರೋದಲ್ಲಿ ತಾಂತ್ರಿಕ ದೋಷ ಸುರಂಗ ಮಾರ್ಗದಲ್ಲಿ ವಿದ್ಯುತ್‌ ಸಂಪರ್ಕ ಕಡಿತ

47

ಚೆನ್ನೈ: ಚೆನ್ನೈ ಮೆಟ್ರೋದಲ್ಲಿ ತಾಂತ್ರಿಕ ದೋಷ ಸುರಂಗ ಮಾರ್ಗದಲ್ಲೇ ಕೆಟ್ಟು ನಿಂತ ರೈಲು ಕಚೇರಿ, ಕಾಲೇಜುಗಳಿಗೆ ತೆರಳುತ್ತಿದ್ದ ಪ್ರಯಾಣಿಕರಿಗೆ ಭಾರೀ ಸಮಸ್ಯೆ ಹತ್ತಿರದ ನಿಲ್ದಾಣ ಹೈಕೋರ್ಟ್ ಸ್ಟೇಷನ್‌ಗೆ ಕತ್ತಲಲ್ಲೇ ನಡೆದ ಪ್ರಯಾಣಿಕರು ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋಗಳು ವೈರಲ್‌ ಚೆನ್ನೈ ಮೆಟ್ರೋ ರೈಲಿನಲ್ಲಿ ತಾಂತ್ರಿಕ ದೋಷ, ಅರ್ಧಕ್ಕೆ ನಿಂತ ರೈಲು

ವಿಮ್ಕೋ ನಗರ ಮತ್ತು ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಸಂಚರಿಸುತ್ತಿದ್ದ ನೀಲಿ ಬಣ್ಣದ ಮೆಟ್ರೋ ಮಾರ್ಗದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆ, ಕಚೇರಿಗೆ ತಲುಪುವ ಅವಸರದಲ್ಲಿದ್ದ ಪ್ರಯಾಣಿಕರು ಸುರಂಗ ಮಾರ್ಗದಲ್ಲಿ ಮಾರ್ನಿಂಗ್‌ ವಾಕ್‌ ಮಾಡುವ ಪರಿಸ್ಥಿತಿ ಇಂದು(ಡಿ.2) ಎದುರಾಗಿತ್ತು.

ಏರ್ಪೋರ್ಟ್‌ ಮತ್ತು ವಿಮ್ಕೋ ನಗರ ಡಿಪೋ ನಡುವೆ ಸಂಚರಿಸುವ ನೀಲಿ ಮಾರ್ಗದ ಮೆಟ್ರೋ ಮಂಗಳವಾರ ಮುಂಜಾನೆ ಸುರಂಗ ಮಾರ್ಗದಲ್ಲಿ ಹಠಾತ್ತನೇ ನಿಂತಿತ್ತು. ಹೈಕೋರ್ಟ್ ನಿಲ್ದಾಣಕ್ಕೆ ಸಾಗುವ ಸುರಂಗ ಮಾರ್ಗದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಈ ಘಟನೆ ನಡೆದಿತ್ತು.

ಮೆಟ್ರೋ ನಿಲ್ಲುತ್ತಲೇ ಬೋಗಿಯ ಒಳಗೆ ವಿದ್ಯುತ್‌ ಸಂಪರ್ಕ ಕಡಿತಗೊಂಡಿತ್ತು. ಇದರಿಂದ ಪ್ರಯಾಣಿಕರು ಕತ್ತಲಲ್ಲಿಯೇ ನಿಲ್ಲುವಂತಹ ಪರಿಸ್ಥಿತಿ ಎದುರಾಯಿತು ಜೊತೆಗೆ ಆತಂಕಗೊಂಡಿದ್ದರು.

ವಿದ್ಯುತ್‌ ಸಂಪರ್ಕ ಕಡಿತ, ಆತಂಕ ಮೆಟ್ರೋದಲ್ಲಿದ್ದ ಪ್ರಯಾಣಿಕರೇ ಸೆರೆಹಿಡಿಯಲಾದ ವಿಡಿಯೋಗಳಲ್ಲಿ ಕಂಡು ಬಂದ ದೃಶ್ಯದ ಪ್ರಕಾರ, ಬೋಗಿಯಲ್ಲಿದ್ದ ಪ್ರಯಾಣಿಕರು ಏನಾಗುತ್ತಿದೆ ಎಂದು ತಿಳಿಯಲು ಕಿಟಕಿಗಳ ಮೂಲಕ ಇಣುಕಿ ನೋಡುವುದು ಮತ್ತು ಹ್ಯಾಂಡ್‌ರೈಲ್‌ಗಳನ್ನು ಹಿಡಿದುಕೊಂಡು ನಿಂತಿರುವುದು ಕಂಡುಬಂದವು. 10 ನಿಮಿಷಗಳ ನಂತರ ಮೆಟ್ರೋ ಸಿಬ್ಬಂದಿಯಿಂದ ಘೋಷಣೆಯೊಂದು ಕೇಳಿಬಂತು.

ರೈಲು ಮುಂದೆ ಚಲಿಸಲು ಸಾಧ್ಯವಾಗದ ಕಾರಣ, ಪ್ರಯಾಣಿಕರು ರೈಲಿನಿಂದ ಇಳಿದು ಹತ್ತಿರದ ನಿಲ್ದಾಣವಾದ ಹೈಕೋರ್ಟ್ ಸ್ಟೇಷನ್‌ಗೆ ನಡೆದುಕೊಂಡು ಹೋಗುವಂತೆ ಸೂಚಿಸಲಾಯಿತು.

ದೇಶದ ಮೊಟ್ಟ ಮೊದಲ ಚಾಲಕ ರಹಿತ ಮೆಟ್ರೋ ರೈಲನ್ನು ಉದ್ಘಾಟಿಸಿದ ಮೋದಿ! ಕಗ್ಗತ್ತಲಲ್ಲಿ ಮಾರ್ನಿಂಗ್‌ ವಾಕ್ ಹೈಕೋರ್ಟ್ ನಿಲ್ದಾಣವು ಅಲ್ಲಿಂದ ಸುಮಾರು 500 ಮೀಟರ್ ದೂರದಲ್ಲಿತ್ತು.

ಪ್ರಯಾಣಿಕರಿಗೆ ಬೇರೆ ಮಾರ್ಗವಿಲ್ಲದೆ, ನಿಗಮದ ಸೂಚನೆಯಂತೆ ಸರತಿ ಸಾಲಾಗಿ ಸಾಲಾಗಿ ಸುರಂಗ ಮಾರ್ಗದ ಹಳಿಗಳ ಮೇಲೆ ನಡೆದುಕೊಂಡು ಹೋಗುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.

ವಿದ್ಯುತ್ ಕಡಿತ ಅಥವಾ ತಾಂತ್ರಿಕ ದೋಷದಿಂದ ಈ ವ್ಯತ್ಯಯ ಉಂಟಾಗಿದೆ ಎಂದು ಚೆನ್ನೈನ ಖಾಸಗಿ ಮಾಧ್ಯಮಗಳು ವರದಿ ಮಾಡಿವೆ. ಇನ್ನು ಮೆಟ್ರೋ ನಿಂತು ಕೆಲ ಗಂಟೆಗಳ ನಂತರ ಪರಿಸ್ಥಿತಿ ತಹಬದಿಗೆ ಬಂದಿದೆ ಎಂದು ಚೆನ್ನೈ ಮೆಟ್ರೋ ರೈಲು ನಿಗಮ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದೆ.

ʻವಿಮಾನ ನಿಲ್ದಾಣ ಮತ್ತು ವಿಮ್ಕೊ ನಗರ ಡಿಪೋ ನಡುವಿನ ಬ್ಲೂ ಲೈನ್ ಮೆಟ್ರೋ ಸೇವೆಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಮುಂಜಾನೆ ಪ್ರಯಾಣಿಕರಿಗಾದ ಸಮಸ್ಯೆ ಬಗ್ಗೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ.

ಹಸಿರು ಮಾರ್ಗದ ಪುರಚ್ಚಿ ತಲೈವರ್ ಡಾ. ಎಂ.ಜಿ. ರಾಮಚಂದ್ರನ್ ಸೆಂಟ್ರಲ್ ಮೆಟ್ರೋದಿಂದ ಸೇಂಟ್ ಥಾಮಸ್ ಮೌಂಟ್ ವರೆಗಿನ ಮಾರ್ಗದಲ್ಲಿಯೂ ಎಂದಿನಂತೆ ಕಾರ್ಯಾಚರಣೆ ನಡೆಸುತ್ತಿದೆ ಎಂದು ಚೆನ್ನೈ ಮೆಟ್ರೋ ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.”

Leave a comment

Leave a Reply

Your email address will not be published. Required fields are marked *

Related Articles

ನಮ್ಮಿಂದ ಬಿಜೆಪಿ ಹಾಳಾಗಿಲ್ಲ: ನಮ್ಮಿಂದಾಗಿ ಮಂತ್ರಿಯಾಗಿ ಲಂಚ ಪಡೆದು ನೀವು ಒಬ್ಬ ವ್ಯಕ್ತಿ ಆತ್ಮಹತ್ಯೆಗೆ ನೀವು ಕಾರಣರಾದೀರಿ ಈಶ್ವರಪ್ಪಗೆ:: ಬಿ ಸಿ ಪಾಟೀಲ್ ತಿರುಗೇಟು

ಬೆಂಗಳೂರು: ಈ ಹಿಂದೆ ದುಡ್ಡು ಕೊಟ್ಟು ಕರೆತಂದ 17 ಕಾಂಗ್ರೆಸ್ ಶಾಸಕರಿಂದಲೇ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ...

ಪಿ ಎಚ್ ಡಿ ವಿದ್ಯಾರ್ಥಿನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವಿವಿ ಪ್ರಾಧ್ಯಾಪಕನ ಅಮಾನತು

“ಧಾರವಾಡ: ಪಿ ಎಚ್ ಡಿ  ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಆರೋಪ...

ಕೊಲ್ಲೂರು ದೇವಿಗೆ 1 ಕೆಜಿ 600 ಗ್ರಾಮದ ಬೆಳ್ಳಿ ಖಡ್ಗ, ರೇಷ್ಮೆ ಸೀರೆ, ಫಲ-ತಾಂಬೂಲ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದ ತಮಿಳುನಾಡು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್

“ಉಡುಪಿ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಶುಕ್ರವಾರ ಉಡುಪಿ ಜಿಲ್ಲೆಯ ಪ್ರಸಿದ್ಧ ಮೂಕಾಂಬಿಕೆ...

ಡಬಲ್ ಡೆಕ್ಕರ್ ಯೋಜನೆಗೆ ಅನುಮತಿ, ಮೆಟ್ರೋ ಮೂರನೇ ಹಂತ ಯೋಜನೆಗಾಗಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್

“ನವದೆಹಲಿ: ಸಿಎಂ ಡಿಕೆ ಶಿವಕುಮಾರ್ ಅವರು ಇಂದು ಕೇಂದ್ರ ಇಂಧನ, ವಸತಿ ಮತ್ತು ನಗರಾಭಿವೃದ್ಧಿ ಸಚಿವ...