ಅಪಘಾತ ಪರಿಹಾರ ಲೆಕ್ಕಾಚಾರ ಸಂಬಂಧ ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್

42

ಹೊಸದಿಲ್ಲಿ: ಮೋಟಾರು ಅಪಘಾತದಲ್ಲಿ ಸಾವಿಗೀಡಾದಾಗ ಪರಿಹಾರ ಲೆಕ್ಕಾಚಾರಕ್ಕೆ ಐಟಿ ರಿಟರ್ನ್ಸ್‌ನಲ್ಲಿ ಘೋಷಿಸಿದ ಆದಾಯವನ್ನು ಪರಿಗಣಿಸಬೇಕು ಅಪಘಾತ ಪರಿಹಾರ ಲೆಕ್ಕಾಚಾರ ಸಂಬಂಧ ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸಂಜಯ್‌ ಕರೋಲ್‌ ಮತ್ತು ಎನ್‌ ಕೋಟೀಶ್ವರ್‌ ಸಿಂಗ್‌ ಅವರನ್ನೊಳಗೊಂಡ ಪೀಠದಿಂದ ಆದೇಶ ಮೃತರ ಆದಾಯವನ್ನು ಮರು ಮೌಲ್ಯಮಾಪನ ಮಾಡಿ ಪರಿಹಾರ ಮೊತ್ತವನ್ನು ಹೆಚ್ಚಿಸಿದ ನ್ಯಾಯಾಲಯ ಅಪಘಾತ ಪರಿಹಾರ ಸಂಬಂಧ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಅಪಘಾತ ಇಲ್ಲವೇ ಮೋಟಾರು ಅಪಘಾತದಲ್ಲಿ ಸಾವಿಗೀಡಾದ ವೇಳೆ ಪರಿಹಾರ ಲೆಕ್ಕಾಚಾರಕ್ಕೆ ಸಲ್ಲಿಕೆ ಮಾಡಲಾದ ಆದಾಯ ತೆರಿಗೆ ರಿಟರ್ನ್ಸ್‌ನ ಆದಾಯವನ್ನು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಈ ಮೂಲಕ ಅಪಘಾತ ಪರಿಹಾರ ಸಂಬಂಧ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ಸಂಜಯ್‌ ಕರೋಲ್‌ ಮತ್ತು ಎನ್‌.ಕೋಟೀಶ್ವರ್‌ ಸಿಂಗ್‌ ಅವರನ್ನೊಳಗೊಂಡ ನ್ಯಾಯಪೀಠ ಈ ಆದೇಶ ನೀಡಿದೆ. ಮೃತರ ಸಂಬಂಧಿಗಳಿಗೆ ನ್ಯಾಯಯುತವಾಗಿ ಗಳಿಸಬಹುದಾದ ಹಣಕಾಸಿನ ಲಾಭಕ್ಕೆ, ನ್ಯಾಯಯುತ ಹಾಗೂ ಸಮಂಜಸ ಮೌಲ್ಯಮಾಪನ ಮಾಡಿ ಪರಿಹಾರ ಲೆಕ್ಕಾಚಾರ ಹಾಕಬೇಕು ಎಂದು ತಿಳಿಸಿತು.

ಜೂನ್‌ 27, 2006ರಂದು 32 ವರ್ಷದ ರಾಜೇಂದ್ರ ಸಿಂಗ್‌ ಗೇನಾ ತಮ್ಮ ಸಹೋದರನೊಂದಿಗೆ ಜೈಪುರದಿಂದ ಅಜ್ಮೇರ್‌ಗೆ ಪ್ರಯಾಣಿಸುತ್ತಿದ್ದರು. ಇದ್ದಕ್ಕಿದ್ದಂತೆ ಟ್ರಕ್‌ವೊಂದು ಇವರ ವಾಹನಕ್ಕೆ ಅಪ್ಪಳಿಸಿತು. ತೀವ್ರವಾಗಿ ಗಾಯಗೊಂಡಿದ್ದ ರಾಜೇಂದ್ರ ಸಿಂಗ್‌ ಗೇನಾ ಸ್ಥಳದಲ್ಲೇ ಮೃತಪಟ್ಟರು.

ಇವರ ಪರ ವಾದಿಸಿದ ವಕೀಲರು ಗೇನಾ, 2004-05ರ ಹಣಕಾಸು ವರ್ಷದಲ್ಲಿ ವಾರ್ಷಿಕ 84,000 ರೂ., 2005-06ರ ಆರ್ಥಿಕ ವರ್ಷದಲ್ಲಿ ವಾರ್ಷಿಕ 1,26,000 ರೂ.ಗಳನ್ನು ಗಳಿಸಿದ್ದರು. ಇವರ ಸಾರಿಗೆ ವ್ಯವಹಾರ ಮತ್ತು ಕೃಷಿ ಕೆಲಸ ಮಾಡುತ್ತಿದ್ದರು. ಇದರಿಂದ ಬರುವ ಆದಾಯವಿದು ಎಂದು ದೃಢಪಡಿಸಿದ್ದರು.

ಇದರ ಆಧಾರದ ಮೇಲೆ ನ್ಯಾಯಾಧಿಕರಣವು ಹಕ್ಕುದಾರರಿಗೆ ವಾರ್ಷಿಕವಾಗಿ ಶೇ. 7.5 ಬಡ್ಡಿಯೊಂದಿಗೆ 9,74,000 ರೂ. ಪರಿಹಾರ ನೀಡಲು ಆದೇಶಿಸಿತು. ದಾಖಲೆಯಲ್ಲಿರುವ ಸಾಕ್ಷ್ಯಗಳನ್ನು ಪರಿಗಣಿಸಿ ಮೃತರ ವಾರ್ಷಿಕ ಆದಾಯ 84,000 ರೂ. ಎಂದು ನಿರ್ಧರಿಸಿತ್ತು.

ಆದರೆ ಪರಿಹಾರದ ಹಕ್ಕುದಾರರು, ಮೃತರ ಆದಾಯವನ್ನು ತಪ್ಪಾಗಿ ಅಂದಾಜು ಮಾಡಲಾಗಿದೆ. ಪರಿಹಾರ ಹೆಚ್ಚಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇದನ್ನು ಹೈಕೋರ್ಟ್‌ ಭಾಗಶಃ ಅನುಮೋದಿಸಿ ಪರಿಹಾರದ ಮೊತ್ತವನ್ನು 16,01,200 ರೂ.ಗೆ ಹೆಚ್ಚಿಸಿತು.

ಆದರೆ, ಈ ಪ್ರಕರಣ ನಂತರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಇದೀಗ ಸರ್ವೋಚ್ಚ ನ್ಯಾಯಾಲಯವು ಮೃತನ ಆದಾಯವನ್ನು ಲೆಕ್ಕಾಚಾರ ಹಾಕಿ ವಾರ್ಷಿಕ ಆದಾಯವನ್ನು 1,00,000 ರೂ.ಗಳಿಗೆ ಮರು ಮೌಲ್ಯಮಾಪನ ಮಾಡಿ ಮತ್ತು ಒಟ್ಟು ಪರಿಹಾರವನ್ನು 19,09,900 ರೂ.ಗೆ ಹೆಚ್ಚಿಸಿ ತೀರ್ಪು ನೀಡಿದೆ.

ಅಲ್ಲದೆ ಅಪಘಾತದಲ್ಲಿ ಸಾವಿಗೀಡಾದ ವೇಳೆ ಪರಿಹಾರ ಲೆಕ್ಕಾಚಾರಕ್ಕೆ ಸಲ್ಲಿಕೆ ಮಾಡಲಾದ ಆದಾಯ ತೆರಿಗೆ ರಿಟರ್ನ್ಸ್‌ನ ಆದಾಯವನ್ನು ಪರಿಗಣಿಸಬೇಕು ಎಂದು ಮಹತ್ವದ ತೀರ್ಪನ್ನೂ ಸುಪ್ರೀಂ ಕೋರ್ಟ್‌ ನೀಡಿದೆ.”

Leave a comment

Leave a Reply

Your email address will not be published. Required fields are marked *

Related Articles

ಕೊಡಗು, ಬೀದರ್, ಬಳ್ಳಾರಿ, ಚಿತ್ರದುರ್ಗ ಮತ್ತು ಮೈಸೂರು ಸೇರಿದಂತೆ ರಾಜ್ಯದ ಎಂಟು ಕಡೆಗಳಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಭ್ರಷ್ಟ ಅಧಿಕಾರಿಗೆ...

ತಮ್ಮ ತಮ್ಮ ಕ್ಷೇತ್ರಗಳ ಸಮಸ್ಯೆ ಯ ಚಿಂತೆ ಬಿಟ್ಟು ಐಪಿಎಲ್ ಪಂದ್ಯಾಟದ ಉಚಿತ ಟಿಕೆಟ್ ಗೆ ಮುಗಿಬಿದ್ದ ರಾಜ್ಯದ 221 ಶಾಸಕರು

ಬೆಂಗಳೂರು: ಇಂಡಿಯನ್ ಪ್ರಿಮಿಯರ್ ಲೀಗ್  ಟೂರ್ನಿಯ 11ನೇ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ...

ದಾವಣಗೆರೆ ಉಪ ಚುನಾವಣೆ ಯಾರಿಗೆ ಟಿಕೆಟ್ ಕೊಟ್ಟರೂ ನಾಯಕರಿಂದ ಒಟ್ಟಾಗಿ ಕೆಲಸ ಮಾಡುವ ಭರವಸೆ:: ಡಿಕೆ ಶಿವಕುಮಾರ್

ಬೆಂಗಳೂರು: ಉಪಚುನಾವಣೆಯಲ್ಲಿ ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಒಮ್ಮತದಿಂದ ಕೆಲಸ ಮಾಡುವುದಾಗಿ ಸಚಿವ ಎಸ್ ಎಸ್...

ಮದುವೆಯಾಗಬೇಕಿದ್ದ ಬಾಲಕಿಯ ಎದೆ ಭಾಗ ಕತ್ತರಿಸಿ ಗುಪ್ತಾಂಗಕ್ಕೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಭಾವಿ ಪತಿ ಸೈಯದ್

ಬೆಂಗಳೂರು: ತನ್ನನ್ನು  ಮದುವೆಯಾಗಬೇಕಿದ್ದ ಬಾಲಕಿಯ ಎದೆ ಭಾಗ ಕತ್ತರಿಸಿ, ಗುಪ್ತಾಂಗಕ್ಕೆ ಚಾಕುವಿನಿಂದ ಇರಿದು ಭಾವಿ ಪತಿಯೇ ಬರ್ಬರವಾಗಿ...