ತೇಜಸ್ ಯುದ್ಧವಿಮಾನವು ದುಬೈನಲ್ಲಿ ಪತನಗೊಂಡ ಬೆನ್ನಲ್ಲೇ, ಕಂಪನಿಯ ಷೇರುಗಳು ಭಾರೀ ಕುಸಿತ

38

ಬೆಂಗಳೂರು : ದುಬೈನಲ್ಲಿ ತೇಜಸ್ ಯುದ್ಧವಿಮಾನ ಪತನ, ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಎಚ್‌ಎಎಲ್ ಷೇರುಗಳು ಶೇ.9 ರಷ್ಟು ಕುಸಿತ ಷೇರು ಮೌಲ್ಯವು 4,205.25 ರೂ.ಗೆ ಇಳಿಕೆ, ಇದು ಕಳೆದ 7 ತಿಂಗಳಲ್ಲೇ ದಾಖಲಾದ ಅತ್ಯಂತ ಕನಿಷ್ಠ ಮಟ್ಟ ಇತರ ರಕ್ಷಣಾ ಷೇರುಗಳಿಗೂ ಹೊಡೆತ, ಎಚ್‌ಎಎಲ್ ಜೊತೆಗೆ, ಕೊಚ್ಚಿನ್ ಶಿಪ್‌ಯಾರ್ಡ್, ಬಿಇಎಂಎಲ್ ಷೇರುಗಳೂ ಇಳಿಕೆ ಎಚ್‌ಎಎಲ್‌ ಷೇರುಗಳು ಭಾರೀ ಕುಸಿತ ಕಂಡಿವೆ.

ಭಾರತೀಯ ಸಾರ್ವಜನಿಕ ವಲಯದ ಪ್ರಮುಖ ರಕ್ಷಣಾ ಸಂಸ್ಥೆಯಾದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್‌) ತಯಾರಿಸಿದ ತೇಜಸ್ ಯುದ್ಧವಿಮಾನವು ದುಬೈನಲ್ಲಿ ಪತನಗೊಂಡ ಬೆನ್ನಲ್ಲೇ, ಕಂಪನಿಯ ಷೇರುಗಳು ಸೋಮವಾರದಂದು ಭಾರೀ ಕುಸಿತ ಕಂಡಿವೆ. ದುಬೈ ಏರ್ ಶೋನಲ್ಲಿ ಪ್ರದರ್ಶನ ನೀಡುವಾಗ ತೇಜಸ್ ವಿಮಾನ ಪತನಗೊಂಡು ಭಾರತೀಯ ವಾಯುಪಡೆಯ (ಐಎಎಫ್‌) ಪೈಲಟ್ ಮೃತಪಟ್ಟಿದ್ದರು.

ಈ ಘಟನೆ ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ಇದರ ಪರಿಣಾಮವಾಗಿ ಸೋಮವಾರ ಬೆಳಿಗ್ಗೆ ಷೇರುಪೇಟೆ ಆರಂಭವಾಗುತ್ತಿದ್ದಂತೆಯೇ ಎಚ್‌ಎಎಲ್‌ ಷೇರುಗಳು ಶೇ. 9 ರಷ್ಟು ಭಾರೀ ಕುಸಿತ ಕಂಡು ಬಿಎಸ್‌ಇಯಲ್ಲಿ 4,205.25 ರೂ.ಗಳ ಮಟ್ಟಕ್ಕೆ ತಲುಪಿದ್ದವು. ಇದು ಕಳೆದ ಏಳು ತಿಂಗಳಲ್ಲೇ ಷೇರು ಕಂಡ ಅತ್ಯಂತ ಕನಿಷ್ಠ ಮಟ್ಟವಾಗಿದೆ. 

ರಕ್ಷಣಾ ವಲಯದ ಷೇರುಗಳೂ ಇಳಿಕೆ ಈ ದುರಂತದ ಬಿಸಿ ಕೇವಲ ಎಚ್‌ಎಎಲ್‌ಗಷ್ಟೇ ಅಲ್ಲದೆ ಇತರೆ ರಕ್ಷಣಾ ಕಂಪನಿಗಳಿಗೂ ತಟ್ಟಿದೆ. ನಿಫ್ಟಿ ಡಿಫೆನ್ಸ್ ಸೂಚ್ಯಂಕವು ಶೇ. 1.5 ರಷ್ಟು ಕುಸಿತ ಕಂಡಿದೆ. ಪ್ರಮುಖವಾಗಿ ಡಾಟಾ ಪ್ಯಾಟರ್ನ್ಸ್, ಜಿಆರ್‌ಎಸ್‌ಇ , ಝೆನ್ ಟೆಕ್ನಾಲಜೀಸ್ , ಪರಸ್ ಡಿಫೆನ್ಸ್ , ಬಿಇಎಂಎಲ್ ಮತ್ತು ಕೊಚ್ಚಿನ್ ಶಿಪ್‌ಯಾರ್ಡ್ ಷೇರುಗಳು ತಲಾ ಶೇ. 2ರಷ್ಟು ಇಳಿಕೆ ದಾಖಲಿಸಿವೆ. ದುಬೈನ ಏರ್‌ಶೋನಲ್ಲಿ ಭಾರತದ ತೇಜಸ್‌ ಫೈಟರ್‌ ಜೆಟ್‌ ಪತನ! ಪೈಲಟ್‌ ಸಾವು, ಏನಾಯ್ತು? ಫೇಕ್‌ ವಿಡಿಯೋ ಬೆನ್ನಲ್ಲೇ ದುರಂತ! ಪತನಗೊಂಡಿದ್ದ ವಿಮಾನ ನವೆಂಬರ್ 21 ರಂದು ದುಬೈನಲ್ಲಿ ವೈಮಾನಿಕ ಪ್ರದರ್ಶನ ನಡೆಯುತ್ತಿದ್ದಾಗ ಈ ದುರಂತ ಸಂಭವಿಸಿತ್ತು.

ಏಕ ಆಸನದ ತೇಜಸ್ ಲಘು ಯುದ್ಧವಿಮಾನವು ಕಸರತ್ತು ನಡೆಸುತ್ತಿದ್ದಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿತ್ತು. ಪತನದ ರಭಸಕ್ಕೆ ಸ್ಥಳದಲ್ಲೇ ಬೆಂಕಿ ಹೊತ್ತಿಕೊಂಡಿದ್ದು, ಪೈಲಟ್ ವಿಧಿವಶರಾಗಿದ್ದಾರೆ ಎಂದು ವಾಯುಪಡೆ ಖಚಿತಪಡಿಸಿದೆ. ಕಳೆದ ಎರಡು ವರ್ಷಗಳಲ್ಲಿ ತೇಜಸ್ ವಿಮಾನಕ್ಕೆ ಸಂಭವಿಸಿದ ಎರಡನೇ ಅಪಘಾತ ಇದಾಗಿದೆ. ಇದಕ್ಕೂ ಮುನ್ನ 2024ರ ಮಾರ್ಚ್‌ನಲ್ಲಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ತೇಜಸ್ ವಿಮಾನ ಪತನಗೊಂಡಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಬೊನಾನ್ಜಾದ ಸಂಶೋಧನಾ ವಿಶ್ಲೇಷಕ ಅಭಿನವ್ ತಿವಾರಿ, “ಐತಿಹಾಸಿಕವಾಗಿ ವಿಮಾನ ಅಪಘಾತಗಳು ಸಂಭವಿಸಿದಾಗಲೆಲ್ಲಾ ಎಚ್‌ಎಎಲ್‌ ಷೇರುಗಳು ಕುಸಿತ ಕಂಡಿವೆ. ತಾಂತ್ರಿಕವಾಗಿ ಯಾವುದೇ ದೊಡ್ಡ ದೋಷವಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದರೆ ಅಥವಾ ಭವಿಷ್ಯದ ರಫ್ತು ಮತ್ತು ವಿತರಣೆಯ ಮೇಲೆ ಪರಿಣಾಮ ಬೀರದಿದ್ದರೆ ಷೇರು ಚೇತರಿಸಿಕೊಳ್ಳಬಹುದು,” ಎಂದು ಹೇಳಿದ್ದಾರೆ. ”

Leave a comment

Leave a Reply

Your email address will not be published. Required fields are marked *

Related Articles

ಪಿಯುಸಿ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಡಿಜಿಟಲ್ ಅಂಕಪಟ್ಟಿ ಲಭ್ಯ : ಸಚಿವ ಮಧು ಬಂಗಾರಪ್ಪ

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಮುದ್ರಿತ ಅಂಕಪಟ್ಟಿ ನೀಡುವುದಿಲ್ಲ....

ಸನ್ನಡತೆಯ ಆಧಾರದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ರಾಜ್ಯದ ಕಾರಾಗೃಹಗಳಲ್ಲಿರುವ 30 ಕೈದಿಗಳ ಬಿಡುಗಡೆ ಆದೇಶ

“ಜೀವಾವಧಿ ಶಿಕ್ಷೆಗೆ ಗುರಿಯಾಗಿ ರಾಜ್ಯದ ಬೇರೆಬೇರೆ ಕಾರಾಗೃಹಗಳಲ್ಲಿರುವ 30 ಕೈದಿಗಳನ್ನು ಸನ್ನಡತೆಯ ಆಧಾರದಲ್ಲಿ ಬಿಡುಗಡೆಗೊಳಿಸಿ ರಾಜ್ಯ...

ದಾಖಲೆಯ 17ನೇ ಬಜೆಟ್ ಮಂಡಿಸಲು ಸಿಎಂ ಸಿದ್ದರಾಮಯ್ಯ ತಯಾರಿ

ಬೆಂಗಳೂರು ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಮತ್ತೆ ಜೋರಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ...

ಫೆಬ್ರವರಿ 1 ಕೇಂದ್ರ ಬಜೆಟ್: ನಿರ್ಮಲಾಸೀತಾರಾಮನ್ ಹಣಕಾಸು ಸಚಿವೆ ಆಗಿ ಸತತವಾಗಿ ಒಂಬತ್ತನೆಯ ಬಜೆಟ್ ಮಂಡನೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಒಂಬತ್ತನೆಯ ಬಾರಿಗೆ ಬಜೆಟ್‌ ಮಂಡನೆ...