ಪೆರ್ಡೂರ್ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಬಿಡುಗಡೆಗೊಂಡ ಮಹಿಳೆಯನ್ನು ಕಾರಿನಲ್ಲಿ ಮನೆಗೆ ಬಿಟ್ಟ ಯುವಕನ ಮೇಲೆ  ಅಂಗಡಿಗೆ ನುಗ್ಗಿ ಹಲ್ಲೆ ಜೀವ ಬೆದರಿಕೆ

69

ಮನೋಜ್‌   ಬೈರಂಪಳ್ಳಿ ಗ್ರಾಮ ಇವರು ಪೆರ್ಡೂರು ನಲ್ಲಿ ರೆಡಿಮೇಡ್‌ ಬಟ್ಟೆ ವ್ಯಾಪಾರ ಮಾಡಿಕೊಂಡಿರುತ್ತಾರೆ. ನನ್ನ ತಾಯಿಯ ಸ್ನೇಹಿತೆ  ಸವಿತಾ ರವರಿಗೆ ಸುಮಾರು 6 ತಿಂಗಳು ಹಿಂದೆ ಕಾಲು ಮೂಳೆ ಮುರಿತವಾಗಿದ್ದು. ಈ ಬಗ್ಗೆ ಅವರು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು ಆಸ್ಪತ್ರೆಯಿಂದ ಬಿಡುಗಡೆ ಆಗುವಾಗ ನನ್ನ ತಾಯಿ ಸ್ನೇಹಿತೆ ಸವಿತಾ ರವರನ್ನು ಆಸ್ಪತ್ರೆಯಿಂದ ಕಾರಿನಲ್ಲಿ ಕರೆದುಕೊಂಡು ಬಂದು ಅವರ ಮನೆಗೆ ಬಿಟ್ಟಿರುತ್ತಾರೆ.

ವಿಚಾರದಲ್ಲಿ ಸಾತ್ವಿಕ್‌ ಮಡಿವಾಳ ರವರು ಪೆರ್ಡೂರು ನಲ್ಲಿರುವ ಮನೋಜ್ ರ ಬಟ್ಟೆ ಅಂಗಡಿಗೆ ಅಕ್ರಮ ಪ್ರವೇಶ ಮಾಡಿ ನೀನು ಸವಿತಾ ರವರನ್ನು ಯಾಕೇ ಕರೆದುಕೊಂಡು ಹೋಗಿದ್ದು, ನನ್ನ ಬಳಿ ದುಡ್ಡು ಇದೆ ನಾನು ನಿನ್ನ ಅಮ್ಮನನ್ನು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿರುತ್ತಾರೆ, ನಂತರ ಸಾತ್ವಿಕ್‌ ಮಡಿವಾಳ ರವರು ನಾನು ಸವಿತಾ ರವರ ಮಗಳು ಶ್ರಾವಣಿಯನ್ನು ಲವ್‌ ಮಾಡುತ್ತಿರುವೆ, ನೀನು ಅವರ ಸುದ್ದಿಗೆ ಹೋಗಬೇಡ ಎಂದು ಹೇಳಿರುತ್ತಾರೆ

ಆಗ ಮನೋಜ್ ಸವಿತಾ ರವರು ನನ್ನ ಅಮ್ಮನ ತರಹ ಅವರಿಗೆ ಆಸ್ಪತ್ರೆಗೆ ಕರೆದುಕೊಂಡು ಬರಲು ಹೋಗಿರುವುದು ಮಾತ್ರವೆಂದು ತಿಳಿಸಿರುತ್ತೇನೆ. ನಂತರ ಈ ಬಗ್ಗೆ ಶ್ರಾವಣಿ ಮತ್ತು ಸವಿತಾ ರವರಲ್ಲಿ ವಿಚಾರ ತಿಳಿಸಿದಾಗ ಶ್ರಾವಣಿ ರವರು ನನಗೆ ಅವನ ಮೇಲೆ ಯಾವುದೇ ಲವ್‌ ಇರುವುದಿಲ್ಲ ಅವನು ದಾರಿಯಲ್ಲಿ ನನಗೆ ಇಷ್ಟವಿಲ್ಲದೇ ಇದ್ದರೂ  ಮಾತನಾಡಿಸುವುದು ಮಾಡಿರುತ್ತಾನೆ ಎಂಬುದಾಗಿ ತಿಳಿಸಿರುತ್ತಾರೆ..

ದಿನಾಂಕ;20/11/2025 ರಂದು ಮನೋಜ್ ರ ಪೆರ್ಡೂರುನಲ್ಲಿರುವ ರೆಡಿಮೇಡ್‌ ಬಟ್ಟೆ ಅಂಗಡಿಯಲ್ಲಿರುವಾಗ ಸಾತ್ವಿಕ್‌ ಮಡಿವಾಳ, ಸುದೀಪ್‌ ಮತ್ತು ಇನ್ನೊಬ್ಬ ವ್ಯಕ್ತಿ ಏಕಾಏಕಿ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ಅಂಗಡಿಗೆ ಬಂದಿರುತ್ತಾರೆ ಆಗ ಮನೋಜ್ ಅವರ ಅಂಗಡಿಯಿಂದ ಹೊರಗಡೆ ಹೋಗಲು ಯತ್ನಿಸಿದಾಗ ಅವರನ್ನು ಅಡ್ಡಗಟ್ಟಿ ಸಾತ್ವಿಕ್‌ ಮಡಿವಾಳ ಅಂಗಿಯ ಕಾಲರ್‌ ಪಟ್ಟಿಯನ್ನು ಹಿಡಿದು ಅವಾಚ್ಯ ಶಬ್ದಗಳಿಂದ ಬೈದು ಅವರ ಕೈಯಲ್ಲಿದ್ದ ಖಡ(ಕೈಬಳೆ)ಯಿಂದ ಎದೆಗೆ ಬೆನ್ನಿಗೆ ಗುದ್ದಿರುತ್ತಾರೆ,

ಅವರ ಜೊತೆಯಲ್ಲಿದ್ದವರು ಕೆನ್ನೆಗೆ ಹೊಡೆದು  ಕೆಳಗೆ ಬೀಳುವಂತೆ ದೂಡಿ ಹಾಕಿರುತ್ತಾರೆ. ನಂತರ ವಾಪಾಸ್ಸು ಹೋಗುವಾಗ ಆ ದಿನ ಹೇಳಿದ್ದು ಅದೇ ಈ ದಿನ ಹೇಳವುದು ಅದೇ ನನ್ನ ಬಳಿ ದುಡ್ಡು ಇದೇ ನಿನ್ನ ಅಮ್ಮನನ್ನು ಕರೆದುಕೊಂಡು ಹೋಗತ್ತೇನೆ ಏನು ಮಾಡುತ್ತೀಯಾ ಮಾಡಿಕೊ.ಈ ವಿಚಾರದ ಬಗ್ಗೆ ದೂರು ನೀಡಿದರೇ ನಿನ್ನನ್ನು ಬಿಡುವುದಿಲ್ಲವೆಂದು ಜೀವ ಬೆದರಿಕೆಯನ್ನು ಹಾಕಿ ಹೋಗಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

Leave a comment

Leave a Reply

Your email address will not be published. Required fields are marked *

Related Articles

ಪೆರ್ಡೂರ್ ಸರಕಾರಿ ಜಮೀನು ಒತ್ತುವರಿ, ಮನೆ ನಿರ್ಮಾಣ, ದೂರು ನೀಡಿದರು ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸಾಮಾಜಿಕ ಕಾರ್ಯಕರ್ತ ನವೀನ್ ಪೆರ್ಡೂರ್ ಆಕ್ರೋಶ

ಬಡವರಿಗೊಂದು ನ್ಯಾಯ ಶ್ರೀಮಂತರಿಗೊಂದು ನ್ಯಾಯ ಎನ್ನುವ ಮಾತು ಪೆರ್ಡೂರ್ ಗ್ರಾಮ ಪಂಚಾಯತ್ ನಲ್ಲಿ ಈಗ ನಿಜವಾಗಿದೆ...

ಮಂಗಳೂರು–ಸುಬ್ರಹ್ಮಣ್ಯ ಮಾರ್ಗ ದುರಸ್ಥಿ ಕಾರ್ಯ ರೈಲು ಸಂಚಾರ 35 ದಿನ ರದ್ದು ಹೊಸ ರೈಲುಗಳ ವೇಳಾಪಟ್ಟಿ ಬಿಡುಗಡೆ

ಕರ್ನಾಟಕದಲ್ಲಿ ರೈಲು ಸೇವೆಗಳು ದಕ್ಷಿಣ ಪಶ್ಚಿಮ ರೈಲ್ವೆ ವಲಯದಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಮತ್ತು ನಿರ್ವಹಣಾ ಕಾಮಗಾರಿಗಳ...

ಲೈಂಗಿಕ ದೌರ್ಜನ್ಯ ಆರೋಪ ಮೂಡಬಿದ್ರೆ ಪೊಲೀಸ್ ಇನ್ಸ್ ಪೆಕ್ಟರ್ ಸಂದೇಶ್ ಬಿಜಿ ಅಮಾನತು

ಮಂಗಳೂರು: ಮೂಡುಬಿದಿರೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸಂದೇಶ್ ಬಿ.ಜಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಲಾಗಿದ್ದು,...

ಮಹಿಳಾ ದಿನಾಚರಣೆ ಪ್ರಯುಕ್ತ ಪ್ರಸಿದ್ಧ ರಂಗೋಲಿ ಕಲಾವಿದೆ ಶ್ರೀಮತಿ ವಿಶಾಲ ಮಹೇಶ್ ರವರಿಗೆ ಸನ್ಮಾನ

ಬ್ರಹ್ಮಾವರ : ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಶ್ರೀ ಮಾಸ್ತಿ ಅಮ್ಮನವರ ದೇವಸ್ಥಾನದಲ್ಲಿ ಜರಗಿದ ಸರಳ...