ರಾಜ್ಯ ಸರಕಾರ ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಅನ್ನ ಸುವಿಧಾ ಯೋಜನೆ ಆರಂಭ

53

ವಿಜಯಪುರ: 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕೆಗೆ ಅನುಕೂಲ-7,369 ಜಿಲ್ಲೆಯಲ್ಲಿನ ಫಲಾನುಭವಿಗಳು 2024ರ ಬಜೆಟ್‌ನಲ್ಲಿ ಸರಕಾರ ಘೋಷಣೆ-50 ರೂ. ಸೇವಾ ಶುಲ್ಕ ನ್ಯಾಯಬೆಲೆ ಅಂಗಡಿಗೆ ಪಾವತಿ 1967ಗೆ ಕರೆ ಮಾಡಿ ದೂರು ನೀಡಬಹುದು

ನ್ಯಾಯಬೆಲೆ ಅಂಗಡಿ ಲಾಗಿನ್‌ನಲ್ಲಿ ಅರ್ಹ ಕಾರ್ಡ್‌ಗಳನ್ನು ಸೇರಿಸಲಾಗಿದೆ. ಅವರಿಗೆ ಪಡಿತರ ನೀಡುವ ದಿನಾಂಕವನ್ನೂ ನಿಗದಿಪಡಿಸಲಾಗಿದ್ದು, ಮನೆ ಬಾಗಿಲಿಗೆ ಬಂದು ಒಟಿಪಿ ಹಾಗೂ ಬಯೋಮೆಟ್ರಿಕ್‌ ಪಡೆದು ಪಡಿತರ ವಿತರಿಸಲಾಗುತ್ತದೆ. ಮನೆಗೆ ಹೋಗಲು ಕಷ್ಟಪಡುವ ಹಿರಿಯ ನಾಗರಿಕರಿಗೆ ಅನುಕೂಲ ಕಲ್ಪಿಸುವುದು ಅನ್ನ ಸುವಿಧಾ ಯೋಜನೆಯ ಉದ್ದೇಶವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024ರ ಬಜೆಟ್‌ನಲ್ಲಿಈ ಯೋಜನೆಯನ್ನು ಘೋಷಿಸಿದ್ದರು.

75 ವರ್ಷ ಮೇಲ್ಪಟ್ಟ ಇ-ಕೆವೈಸಿ ಆಗಿರುವ ಏಕ ಸದಸ್ಯ ಕಾರ್ಡ್‌ಗಳಿಗೆ ಅನ್ನ ಸುವಿಧಾ ಯೋಜನೆ ಅನ್ವಯವಾಗಲಿದೆ. ಜಿಲ್ಲೆಯಲ್ಲಿ ಪ್ರಸ್ತುತ 7,369 ಹಿರಿಯ ನಾಗರಿಕರು ಈ ಯೋಜನೆಯ ಅರ್ಹ ಫಲಾನುಭವಿಗಳನ್ನಾಗಿ ಗುರುತಿಸಲಾಗಿದೆ. ಡಿಸೆಂಬರ್‌ ತಿಂಗಳಿನಿಂದ ಈ ಫಲಾನುಭವಿಗಳು ನ್ಯಾಯಬೆಲೆ ಅಂಗಡಿಗಳಿಗೆ ಹೋಗದೇ ಮನೆಯಲ್ಲೇ ಕುಳಿತು ಪಡಿತರ ಪಡೆಯಲಿದ್ದಾರೆ.

ಪ್ರತಿ ತಿಂಗಳು 1ರಿಂದ 5ನೇ ತಾರೀಖಿನವರೆಗೆ ಫಲಾನುಭವಿಗಳು ವಿಲ್ಲಿಂಗ್‌ನೆಸ್‌ ಕೊಡಬೇಕು. 6ರಿಂದ 15ರವರೆಗೆ ಫಲಾನುಭವಿಗಳು ನಿಗದಿಪಡಿಸಿದ ದಿನದಂತೆ ನ್ಯಾಯಬೆಲೆ ಅಂಗಡಿಯವರು ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಪಡಿತರ ವಿತರಿಸಬೇಕು.

ದೂರುಗಳಿಗೆ ಕರೆ ಮಾಡಿ ಅನ್ನ ಸುವಿಧಾ ಯೋಜನೆಗೊಳಪಡುವ 75 ವರ್ಷ ಮೇಲ್ಪಟ್ಟ ಒಂಟಿ ಹಿರಿಯ ನಾಗರಿಕರ ಪಡಿತರ ಚೀಟಿಗಳ ವಿವರ ಆಯಾ ನ್ಯಾಯಬೆಲೆ ಅಂಗಡಿಗಳ ಲಾಗಿನ್‌ನಲ್ಲಿ ಲಭ್ಯವಿದೆ. ನ್ಯಾಯ ಬೆಲೆ ಅಂಗಡಿಯವರಿಗೆ ಪ್ರತಿ ಕಾರ್ಡ್‌ ಪಡಿತರ ವಿತರಣೆಗೆ 50 ರೂ. ಸೇವಾ ಶುಲ್ಕವನ್ನು ಸರಕಾರ ಪಾವತಿಸಲಿದೆ.

ಹೋಮ್‌ ಡೆಲಿವರಿ ಸಂಬಂಧಿತ ಯಾವುದೇ ದೂರುಗಳಿಗೆ ಟೋಲ್‌ ಫ್ರೀ ಸಂಖ್ಯೆ 1967ಗೆ ಕರೆ ಮಾಡಬಹುದಾಗಿದೆ. ಜಿಲ್ಲೆಯಲ್ಲಿ ಅನ್ನ ಸುವಿಧಾ ಯೋಜನೆಯಡಿ ಸದ್ಯ 7,369 ಫಲಾನುಭವಿಗಳನ್ನು ಗುರುತಿಸಲಾಗಿದೆ. ಡಿಸೆಂಬರ್‌ನಿಂದ ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಪಡಿತರ ವಿತರಣೆ ಆರಂಭಗೊಳ್ಳಲಿದೆ ಎಂದಿದ್ದಾರೆ ವಿನಯಕುಮಾರ ಪಾಟೀಲ, ಉಪ ನಿರ್ದೇಶಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ವಿಜಯಪುರ ”

Leave a comment

Leave a Reply

Your email address will not be published. Required fields are marked *

Related Articles

ನಮ್ಮಿಂದ ಬಿಜೆಪಿ ಹಾಳಾಗಿಲ್ಲ: ನಮ್ಮಿಂದಾಗಿ ಮಂತ್ರಿಯಾಗಿ ಲಂಚ ಪಡೆದು ನೀವು ಒಬ್ಬ ವ್ಯಕ್ತಿ ಆತ್ಮಹತ್ಯೆಗೆ ನೀವು ಕಾರಣರಾದೀರಿ ಈಶ್ವರಪ್ಪಗೆ:: ಬಿ ಸಿ ಪಾಟೀಲ್ ತಿರುಗೇಟು

ಬೆಂಗಳೂರು: ಈ ಹಿಂದೆ ದುಡ್ಡು ಕೊಟ್ಟು ಕರೆತಂದ 17 ಕಾಂಗ್ರೆಸ್ ಶಾಸಕರಿಂದಲೇ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ...

ಗ್ಯಾರೆಂಟಿ ಯೋಜನೆ ಅನರ್ಹ ಫಲಾನುಭವಿಗಳ ವಿರುದ್ಧ ಕ್ರಮ ಮುಖ್ಯ ಮಂತ್ರಿ ಡಿ ಕೆ ಶಿವಕುಮಾರ್

ಬೆಂಗಳೂರು: ಗ್ಯಾರೆಂಟಿ ಯೋಜನೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವವರ ವಿರುದ್ಧ ಮತ್ತು ಅನರ್ಹ ಫಲಾನುಭವಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು...

ವಿಧಾನಪರಿಷತ್ ಚುನಾವಣೆ ಕಾಂಗ್ರೆಸ್‌ನ 5ನೇ ಅಭ್ಯರ್ಥಿ ಗೆಲುವು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೆಲುವಿನ ನಗೆ

“ಬೆಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ನ 5ನೇ ಅಭ್ಯರ್ಥಿ ಗೆಲುವು ಸಾಧಿಸಿದ್ದು ಜೆಡಿಎಸ್ ಅಭ್ಯರ್ಥಿಗೆ ಸೋಲಾಗಿದೆ. ಕಾಂಗ್ರೆಸ್...

ಪಿ ಎಚ್ ಡಿ ವಿದ್ಯಾರ್ಥಿನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವಿವಿ ಪ್ರಾಧ್ಯಾಪಕನ ಅಮಾನತು

“ಧಾರವಾಡ: ಪಿ ಎಚ್ ಡಿ  ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಆರೋಪ...