ಪಡಿತರದಲ್ಲಿ ತೊಗರಿ ಬೇಳೆ ವಿತರಣೆ ಆರಂಭ : ಜಿಲ್ಲೆಯಲ್ಲಿರುವ ದಾಲ್‌ಮಿಲ್‌ಗಳಿಗೆ ಶುಕ್ರದೆಸೆ

74

ಕಲಬುರಗಿ: ಪಡಿತರದಲ್ಲಿ ಎರಡು ಕೆಜಿ ತೊಗರಿ ಬೇಳೆ ನೀಡುವ ಪ್ರಕ್ರಿಯೆ ಶುರುವಾಗಿದ್ದರಿಂದ ತೊಗರಿ ಉದ್ಯಮ ಗರಿಗೆದರಿದೆ. ರಾಜ್ಯದ ತೊಗರಿ ಕಣಜ ಖ್ಯಾತಿಯ ಕಲಬುರಗಿ ಜಿಲ್ಲೆಗೆ ಇದರಿಂದ ಹೆಚ್ಚು ಅನುಕೂಲವಾಗಲಿದ್ದು, ಜಿಲ್ಲೆಯಲ್ಲಿರುವ ದಾಲ್‌ಮಿಲ್‌ಗಳಿಗೆ ಶುಕ್ರದೆಸೆ ಸಿಗಲಿದೆ ಎಂದು ಉದ್ಯಮಿಗಳು ನಿರೀಕ್ಷೆಯಲ್ಲಿದ್ದಾರೆ.

ತೊಗರಿ ಬೇಳೆ ಜಿಲ್ಲೆಯಲ್ಲಿ ತೊಗರಿ ಬೇಳೆ ತಯಾರಿಸುವ 150 ದಾಲ್‌ಮಿಲ್‌ಗಳಿವೆ. ಕೆಲವು ದಾಲ್‌ಮಿಲ್‌ಗಳಿಗೆ ತೊಗರಿ ಮಾರುಕಟ್ಟೆಗೆ ಬರುವ ಸಮಯದಲ್ಲಿ ಮಾತ್ರ ಕೆಲಸ ಇತ್ತು. ಉಳಿದ ದಿನಗಳಲ್ಲಿ ಬಂದ್‌ ಆಗಿರುತ್ತಿದ್ದವು. ಪಡಿತರದಲ್ಲಿ ತೊಗರಿ ನೀಡಿಕೆ ಶುರುವಾದರೆ ವರ್ಷಪೂರ್ತಿ ಕಾರ್ಖಾನೆಗಳು ಕಾರ್ಯನಿರ್ವಹಿಸಲಿದ್ದು, ಉದ್ಯಮಕ್ಕೆ ಉತ್ತೇಜನ ಸಿಗಲಿದೆ. ಈಗ ಪ್ರತಿ ದಾಲ್‌ಮಿಲ್‌ನಲ್ಲಿ ಸುಮಾರು 15 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಇನ್ನು ಮುಂದೆ 30ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಅವಕಾಶ ಸಿಗಲಿವೆ.

ಸಾಗಣೆ, ವಹಿವಾಟು ಪ್ರಮಾಣ ಹೆಚ್ಚಾಗಿ ತೊಗರಿ ಉದ್ಯಮಕ್ಕೆ ಬಲ ಬರಲಿದೆ ಎನ್ನುತ್ತಾರೆ ದಾಲ್‌ಮಿಲ್‌ ಸಂಘದ ಅಧ್ಯಕ್ಷರು. ರಾಜ್ಯದಲ್ಲಿ ಒಟ್ಟು ಬಿಪಿಎಲ್‌ ಕಾರ್ಡುದಾರರು ಇದ್ದು, ಪ್ರತಿ ತಿಂಗಳು 2 ಕೆ.ಜಿ ತೊಗರಿ ಬೇಳೆ ನೀಡಲಾಗುತ್ತದೆ. ಸುಮಾರು 1 ಲಕ್ಷ ಕ್ವಿಂಟಾಲ್‌ ತೊಗರಿ ಬೇಳೆ ಬೇಕಾಗುತ್ತದೆ. ಈ ಬೇಳೆ ಪೂರೈಸುವ ದಾಲ್‌ಮಿಲ್‌ಗಳಿಗೆ, ತೊಗರಿ ಬೆಳೆಗಾರರಿಗೆ ಹೊಸ ಚೈತನ್ಯ ಸಿಗಲಿದೆ.

ದರ ಸ್ಥಿರೀಕರಣ ಪ್ರತಿ ವರ್ಷದ ರೈತರು ಕಾಳು ಮಾರುಕಟ್ಟೆಗೆ ಬರುವ ಮುನ್ನವೇ ದರ ಕುಸಿದು ಬೆಳೆಗಾರರಿಗೆ ನಷ್ಟ ಆಗುತ್ತಿತ್ತು. ಕಷ್ಟಪಟ್ಟು ಬೆಳೆ ಬೆಳೆದರೂ ದರ ಸಿಗದೇ ಸಂಕಷ್ಟಕ್ಕೀಡಾಗುತ್ತಿದ್ದರು. ಎಂಎಸ್‌ಪಿ ಇದ್ದರೂ ನಿಗದಿತ ದರ ಸಿಗುತ್ತಿರಲಿಲ್ಲ. ಅದು ಇದ್ದೂ ಇಲ್ಲದಂತಾಗಿತ್ತು. ಆದರೆ ಈಗ ಪಡಿತರದಲ್ಲಿ ತೊಗರಿ ಬೇಳೆ ಸೇರಿಸಿದ್ದರಿಂದ ತೊಗರಿ ದರ ಕುಸಿತದ ಆತಂಕವೂ ದೂರವಾಗಲಿದೆ. ಮಾರುಕಟ್ಟೆಯಲ್ಲಿ ತೊಗರಿ ದರ ಸ್ಥಿರೀಕರಣವಾಗಲಿದೆ ಎನ್ನುತ್ತಾರೆ ಮಾರುಕಟ್ಟೆ ವಿಶ್ಲೇಷಕರು.

ಕೆಲವೇ ಕ್ಷಣದಲ್ಲಿ ಉತ್ತರ ಸೀಸನ್‌ನಲ್ಲಿ ಮಾತ್ರ ದಾಲ್‌ಮಿಲ್‌ ನಡೆಸಿ ಉಳಿದ ದಿನ ಬಂದ್‌ ಮಾಡುತ್ತಿರುವ ಉದ್ಯಮಿಗಳಿಗೆ ಈಗ ವರ್ಷಪೂರ್ತಿ ಮಿಲ್‌ ನಡೆಸುವಂತಾಗುತ್ತದೆ. ಕಾರ್ಮಿಕರಿಗೂ ವರ್ಷಪೂರ್ತಿ ಕೆಲಸ ಸಿಗುತ್ತದೆ. ಕೈ ತುಂಬ ಸಂಬಳವೂ ಸಿಗುತ್ತದೆ. ಆರ್ಥಿಕ ಸ್ಥಿತಿಯೂ ಸುಧಾರಿಸಲಿದೆ ಎಂಬ ಆಶಾಭಾವನೆ ಇದೆ. ದಾಲ್‌ಮಿಲ್‌ಗಳು ವರ್ಷದ ಎಲ್ಲ ದಿನಗಳಲ್ಲೂ ಕಾರ್ಯನಿರ್ವಹಿಸುವುದರಿಂದ ಈಗಿರುವ ಕಾರ್ಮಿಕರಿಗಿಂತ ಹೆಚ್ಚು ಜನ ಬೇಕು. ಹೆಚ್ಚು ಕಾರ್ಮಿಕರನ್ನು ನೇಮಿಸಿಕೊಳ್ಳುವುದು ಅನಿವಾರ್ಯವಾಗಲಿದೆ ಎನ್ನುತ್ತಾರೆ ದಾಲ್‌ಮಿಲ್‌ ಮಾಲೀಕರು.”

ಕೆಲವೇ ಕ್ಷಣದಲ್ಲಿ ಉತ್ತರ ಸೀಸನ್‌ನಲ್ಲಿ ಮಾತ್ರ ದಾಲ್‌ಮಿಲ್‌ ನಡೆಸಿ ಉಳಿದ ದಿನ ಬಂದ್‌ ಮಾಡುತ್ತಿರುವ ಉದ್ಯಮಿಗಳಿಗೆ ಈಗ ವರ್ಷಪೂರ್ತಿ ಮಿಲ್‌ ನಡೆಸುವಂತಾಗುತ್ತದೆ. ಕಾರ್ಮಿಕರಿಗೂ ವರ್ಷಪೂರ್ತಿ ಕೆಲಸ ಸಿಗುತ್ತದೆ. ಕೈ ತುಂಬ ಸಂಬಳವೂ ಸಿಗುತ್ತದೆ. ಆರ್ಥಿಕ ಸ್ಥಿತಿಯೂ ಸುಧಾರಿಸಲಿದೆ ಎಂಬ ಆಶಾಭಾವನೆ ಇದೆ. ದಾಲ್‌ಮಿಲ್‌ಗಳು ವರ್ಷದ ಎಲ್ಲ ದಿನಗಳಲ್ಲೂ ಕಾರ್ಯನಿರ್ವಹಿಸುವುದರಿಂದ ಈಗಿರುವ ಕಾರ್ಮಿಕರಿಗಿಂತ ಹೆಚ್ಚು ಜನ ಬೇಕು. ಹೆಚ್ಚು ಕಾರ್ಮಿಕರನ್ನು ನೇಮಿಸಿಕೊಳ್ಳುವುದು ಅನಿವಾರ್ಯವಾಗಲಿದೆ ಎನ್ನುತ್ತಾರೆ ದಾಲ್‌ಮಿಲ್‌ ಮಾಲೀಕರು.”

Leave a comment

Leave a Reply

Your email address will not be published. Required fields are marked *

Related Articles

ಮುಲ್ಲಾಗಳಿಗೂ ನೀಟ್ ಪರೀಕ್ಷೆಗೂ ಸಂಬಂಧವೇನು ಪ್ರಶ್ನಿಸಿದ ಬಿಜೆಪಿ ಶಾಸಕ ಸಿಟಿ ರವಿ ವಿರುದ್ಧ ಎಫ್ ಐ ಆರ್ ದಾಖಲು

ಬೆಂಗಳೂರು: ದೇಶಾದ್ಯಂತ ಮತ್ತು ರಾಷ್ಟ್ರ ರಾಜಧಾನಿಯಲ್ಲಿ ನಡೆದ ನೀಟ್ ಪತ್ರಿಕೆ ಸೋರಿಕೆ ಪ್ರತಿಭಟನೆಗಳ ಕುರಿತು ದ್ವೇಷ...

ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಣೆ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ನಾಳೆ ನಡೆಯುವ ಸಾಧ್ಯತೆ

ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆ ಸಂಬಂಧ ಸಿಎಂ ಜೊತೆ ಸಿದ್ದರಾಮಯ್ಯ,...

ಭೂ ಕಬಳಿಕೆ ಪ್ರಕರಣ ಆರ್ಟ್ ಆಫ್ ಲಿವಿಂಗ್ ನ ಭೂ ಅತಿಕ್ರಮಣ ತನಿಖೆಗೆ ಎಸ್ ಐಟಿ ರಚಿಸಿದ ಕರ್ನಾಟಕ ರಾಜ್ಯ ಸರಕಾರ

ಬೆಂಗಳೂರು: ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಗ್ಗಲಿಪುರ ಗ್ರಾಮದಲ್ಲಿ ಶ್ರೀ ಶ್ರೀ ರವಿಶಂಕರ್ ಅವರ ದಿ ಆರ್ಟ್...

ಅಕ್ರಮ ಮರಳು ಗಣಿಗಾರಿಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು, ಉಪ ಆಯುಕ್ತರು ಮತ್ತು ತಹಶೀಲ್ದಾರ್‌ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಬಾಗಲಕೋಟೆಯಾದ್ಯಂತ ಅಕ್ರಮ ಮರಳು ಗಣಿಗಾರಿಕೆ ನಡೆದಿರುವುದು ಪರಿಶೀಲನೆಯಲ್ಲಿ ಕಂಡುಬಂದ ಬೆನ್ನಲ್ಲೇ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು,...