ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆಯು ಸಿವಿಲ್ ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸಲು ಸಿದ್ಧತೆ

10

ಬೆಂಗಳೂರು : 73 ಕಿ.ಮೀ. ಉದ್ದದ ರಸ್ತೆ ನಿರ್ಮಾಣದಿಂದ ಸಂಚಾರ ದಟ್ಟಣೆ ತಗ್ಗುವ ನಿರೀಕ್ಷೆ ರಸ್ತೆಯುದ್ದಕ್ಕೂ ವಾಣಿಜ್ಯ ಕಾರಿಡಾರ್‌ ಅಭಿವೃದ್ಧಿ ಮುಖ್ಯರಸ್ತೆ ಜತೆಗೆ ಎರಡೂ ಬದಿಯಲ್ಲಿ ಸವೀರ್‍ಸ್‌ ರಸ್ತೆ, ದ್ವಿಚಕ್ರ ವಾಹನ ಪಥ, ಮೆಟ್ರೊ ಮಾರ್ಗ ನಿರ್ಮಾಣಕ್ಕೂ ಜಾಗ ಕಾಯ್ದಿರಿಸಲಾಗಿದೆ.

ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್‌ (ಬಿಬಿಸಿ) ಯೋಜನೆಯು ವೇಗ ಪಡೆದುಕೊಳ್ಳುತ್ತಿದ್ದು, 2026ರ ಜನವರಿ ಅಂತ್ಯದೊಳಗೆ ಸಿವಿಲ್‌ ಕಾಮಗಾರಿಗಳಿಗೆ ಟೆಂಡರ್‌ ಆಹ್ವಾನಿಸಲು ತಯಾರಿ ಮಾಡಿಕೊಳ್ಳಲಾಗಿದೆ.

ಮಹಾನಗರದಲ್ಲಿ ಉಂಟಾಗುತ್ತಿರುವ ವಾಹನ ದಟ್ಟಣೆ ತಗ್ಗಿಸಲು 1ನೇ ಹಂತದಲ್ಲಿ73 ಕಿ.ಮೀ. ಉದ್ದದ ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್‌ (ಪಿಆರ್‌ಆರ್‌-1) ನಿರ್ಮಾಣಕ್ಕೆ ಅಗತ್ಯ ಪೂರ್ವ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಕಾರಿಡಾರ್‌ ನಿರ್ಮಾಣಕ್ಕಾಗಿಯೇ ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್‌ ಲಿಮಿಟೆಡ್‌ (ಬಿಬಿಸಿಎಲ್‌) ಸ್ಥಾಪಿಸಲಾಗಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ವು ಆರಂಭದಲ್ಲಿ 100 ಮೀಟರ್‌ ಅಗಲದ ಕಾರಿಡಾರ್‌ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಿತ್ತು. ಆದರೆ, ರಸ್ತೆ ವಿನ್ಯಾಸದಲ್ಲಿ ಮಾರ್ಪಾಡು ಮಾಡಲಾಗಿದ್ದು, 100 ಮೀಟರ್‌ನಿಂದ 65 ಮೀಟರ್‌ಗೆ ತಗ್ಗಿಸಲಾಗಿದೆ. 35 ಮೀಟರ್‌ನಲ್ಲಿ ವಾಣಿಜ್ಯ ಕಾರಿಡಾರ್‌ ನಿರ್ಮಾಣವಾಗಲಿದೆ. ಮುಖ್ಯರಸ್ತೆ ಜತೆಗೆ ಎರಡೂ ಬದಿಯಲ್ಲಿ ಸವೀರ್‍ಸ್‌ ರಸ್ತೆ, ದ್ವಿಚಕ್ರ ವಾಹನ ಪಥ, ಮೆಟ್ರೊ ಮಾರ್ಗ ನಿರ್ಮಾಣಕ್ಕೂ ಜಾಗ ಕಾಯ್ದಿರಿಸಲಾಗಿದೆ.

ಡಿಸೆಂಬರ್‌ಗೆ ಪರಿಷ್ಕೃತ ಡಿಪಿಆರ್‌: ರಸ್ತೆ ವಿನ್ಯಾಸದಲ್ಲಿ ಸಾಕಷ್ಟು ಮಾರ್ಪಾಡು ಮಾಡಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಪರಿಷ್ಕೃತ ಯೋಜನಾ ವರದಿಯನ್ನು ತಜ್ಞರು ಸಿದ್ಧಪಡಿಸುತ್ತಿದ್ದಾರೆ. ಪರಿಷ್ಕೃತ ಡಿಪಿಆರ್‌ ಡಿಸೆಂಬರ್‌ ಅಂತ್ಯದೊಳಗೆ ಬಿಬಿಸಿಎಲ್‌ ಕೈಸೇರುವ ಸಾಧ್ಯತೆಗಳಿವೆ. ಆನಂತರ ಟೆಂಡರ್‌ ಆಹ್ವಾನಕ್ಕೆ ದಾಖಲೆಗಳನ್ನು ಸಿದ್ಧಪಡಿಸಲಾಗುತ್ತದೆ. ಸಿವಿಲ್‌ ಕಾಮಗಾರಿಗೆ 7500 ಕೋಟಿ ರೂ.: ಬಿಬಿಸಿ ನಿರ್ಮಾಣಕ್ಕೆ ಹುಡ್ಕೋದಿಂದ ಈಗಾಗಲೇ 27 ಸಾವಿರ ಕೋಟಿ ರೂ. ಸಾಲ ಪಡೆಯಲಾಗಿದೆ.

ಇದರಲ್ಲಿ ಸಿವಿಲ್‌ ಕಾಮಗಾರಿಗಳಿಗೆ ಸುಮಾರು 7500 ಕೋಟಿ ರೂ. ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ. ಭೂಸ್ವಾಧೀನಕ್ಕೆ ಎಷ್ಟು ನಗದು ಪರಿಹಾರ ನೀಡಬೇಕಾಗುತ್ತದೆ ಎಂಬುದು ಗೊತ್ತಾಗಿಲ್ಲ. ಅದು ರೈತರ ಪರಿಹಾರದ ಆಯ್ಕೆಯನ್ನು ಆಧರಿಸಿದೆ. 73 ಕಿ.ಮೀ. ಉದ್ದದ ರಸ್ತೆ ನಿರ್ಮಾಣಕ್ಕೆ ಒಟ್ಟು ಮೂರು ಪ್ಯಾಕೇಜ್‌ಗಳಲ್ಲಿ ಟೆಂಡರ್‌ ಕರೆಯಲು ನಿರ್ಧರಿಸಲಾಗಿದೆ. ತುಮಕೂರು ರಸ್ತೆಯಿಂದ ಬಳ್ಳಾರಿ ರಸ್ತೆ (19.37 ಕಿ.ಮೀ.), ಬಳ್ಳಾರಿ ರಸ್ತೆಯಿಂದ ಹಳೆ ಮದ್ರಾಸ್‌ ರಸ್ತೆ (18 ಕಿ.ಮೀ) ಹಾಗೂ ಹಳೆ ಮದ್ರಾಸ್‌ ರಸ್ತೆಯಿಂದ ಹೊಸೂರು ರಸ್ತೆ (27.75 ಕಿ.ಮೀ.) ಪ್ಯಾಕೇಜ್‌ಗಳನ್ನು ವಿಂಗಡಿಸಲಾಗುತ್ತಿದೆ.

ಪರಿಷ್ಕೃತ ಡಿಪಿಆರ್‌ ಸಿದ್ಧವಾದ ಬಳಿಕ 2026ರ ಜನವರಿ ಅಂತ್ಯದೊಳಗೆ ಟೆಂಡರ್‌ ಕರೆಯಲು ಉದ್ದೇಶಿಸಲಾಗಿದೆ. ಇದು ಭೂಸ್ವಾಧೀನ ಪ್ರಕ್ರಿಯೆಯನ್ನು ಆಧರಿಸಿದೆ. ಶೇ.80ರಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ, ಟೆಂಡರ್‌ ಆಹ್ವಾನಿಸಲು ನಿರ್ಧರಿಸಲಾಗಿದೆ. ಟೆಂಡರ್‌ ಕರೆದ ಬಳಿಕ 3 ತಿಂಗಳೊಳಗೆ ಗುತ್ತಿಗೆ ಸಂಸ್ಥೆಯನ್ನು ಅಂತಿಮಗೊಳಿಸಲಾಗುತ್ತದೆ. ಆನಂತರ 30 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. 800 ಎಕರೆ ಸ್ವಾಧೀನಕ್ಕೆ ಸಿದ್ಧ: ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್‌ ನಿರ್ಮಾಣಕ್ಕೆ ಅಗತ್ಯವಿರುವ 2,410 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ.

ಯೋಜನೆಗೆ ಭೂಮಿ ಬಿಟ್ಟುಕೊಡುವ ಮಾಲೀಕರಿಗೆ ಪರಿಹಾರದ ಐದು ಆಯ್ಕೆಗಳನ್ನು ನೀಡಲಾಗಿದೆ. ಸದ್ಯ 800 ಎಕರೆಯು ಸ್ವಾಧೀನಕ್ಕೆ ಸಿದ್ಧವಿದ್ದು, ಈ ತಿಂಗಳಲ್ಲೇ ಅಂತಿಮ ಅವಾರ್ಡ್‌ ನೋಟಿಸ್‌ ನೀಡಲಾಗುತ್ತಿದೆ. ಈ ಕಾರಿಡಾರ್‌ ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಹಳೆ ಮದ್ರಾಸ್‌ ರಸ್ತೆ ಹಾಗೂ ಹೊಸೂರು ರಸ್ತೆ ಸೇರಿದಂತೆ ಪ್ರಮುಖ ಹೆದ್ದಾರಿಗಳನ್ನು ಸಂಪರ್ಕಿಸಲಿದೆ.

ಯೋಜನೆ ಅನುಷ್ಠಾನ ಮಾದರಿ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಟೋಲ್‌ ಶುಲ್ಕ ನಿಗದಿ ಬಗ್ಗೆಯೂ ತೀರ್ಮಾನಿಸಿಲ್ಲ. 2000 ಕೋಟಿ ರೂ. ಆದಾಯ ನಿರೀಕ್ಷೆ: ಬಿಬಿಸಿಯ 100 ಮೀಟರ್‌ ಅಂಚಿನಿಂದ ಎರಡೂ ಬದಿಯಲ್ಲಿ 500 ಮೀಟರ್‌ ದೂರದವರೆಗಿನ ವ್ಯಾಪ್ತಿಯ ಪ್ರದೇಶಗಳನ್ನು ಪರಿಣಾಮ ವಲಯವೆಂದು (ಇಂಪ್ಯಾಕ್ಟ್ ಜೋನ್‌) ಎಂದು ಪರಿಗಣಿಸಿ ಸುಧಾರಣಾ ಶುಲ್ಕ ವಿಧಿಸಲು ನಿರ್ಧರಿಸಲಾಗಿದೆ. ಇದರಿಂದ 2000 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ.

8 ಕಡೆ ಕ್ಲೋವರ್‌ ಲೀಫ್‌ ನಿರ್ಮಾಣ: ತುಮಕೂರು ರಸ್ತೆಯ ಮಾದನಾಯಕನಹಳ್ಳಿ ಜಂಕ್ಷನ್‌, ಹೆಸರಘಟ್ಟ ರಸ್ತೆ ಜಂಕ್ಷನ್‌, ದೊಡ್ಡಬಳ್ಳಾಪುರ ರಸ್ತೆ ಜಂಕ್ಷನ್‌, ಹೆಣ್ಣೂರು ರಸ್ತೆ ಜಂಕ್ಷನ್‌, ಚನ್ನಸಂದ್ರ ರಸ್ತೆ ಜಂಕ್ಷನ್‌, ವೈಟ್‌ಫೀಲ್ಡ್‌ ರಸ್ತೆ ಜಂಕ್ಷನ್‌, ಸರ್ಜಾಪುರ ರಸ್ತೆ ಜಂಕ್ಷನ್‌ ಹಾಗೂ ಚೊಕ್ಕನಹಳ್ಳಿ ರಸ್ತೆ ಜಂಕ್ಷನ್‌ನಲ್ಲಿ ಕ್ಲೋವರ್‌ ಲೀಫ್‌ ನಿರ್ಮಿಸಲಾಗುತ್ತದೆ. ಬಿಬಿಸಿ ನಿರ್ಮಾಣಕ್ಕೆ ಅಗತ್ಯವಿರುವ ಭೂಸ್ವಾಧೀನಕ್ಕೆ ರೈತರೊಂದಿಗೆ ನಿರಂತರವಾಗಿ ಸಭೆ ನಡೆಸಲಾಗುತ್ತಿದೆ. 800 ಎಕರೆಗೆ ಶೀಘ್ರದಲ್ಲೇ ಅವಾರ್ಡ್‌ ನೋಟಿಸ್‌ ನೀಡಲಾಗುವುದು.

ಡಿಸೆಂಬರ್‌ ವೇಳೆಗೆ ಪರಿಷ್ಕೃತ ಡಿಪಿಆರ್‌ ಸಿದ್ಧವಾಗಲಿದ್ದು, ಜನವರಿಯಲ್ಲಿ ಸಿವಿಲ್‌ ಕಾಮಗಾರಿಗೆ ಟೆಂಡರ್‌ ಆಹ್ವಾನಿಸಲಾಗುವುದು. ಇದಕ್ಕೆ 7,500 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಪಿಆರ್‌ಆರ್‌-2ಗೆ ಅಗತ್ಯವಿರುವ ಜಮೀನಿನ ಸ್ವಾಧೀನಕ್ಕೆ ಎರಡು ತಿಂಗಳೊಳಗೆ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದಿದ್ದಾರೆ ಎಲ್‌.ಕೆ.ಅತೀಕ್‌, ಅಧ್ಯಕ್ಷ, ಬಿಬಿಸಿಎಲ್‌ ಪ್ರಮುಖ ಅಂಕಿ-ಅಂಶಗಳು: 1ನೇ ಹಂತ 73 ಕಿ.ಮೀ. 2ನೇ ಹಂತ 44 ಕಿ.ಮೀ. ಪ್ಯಾಕೇಜ್‌-1: ತುಮಕೂರು ರಸ್ತೆ-ಬಳ್ಳಾರಿ ರಸ್ತೆ (19.37 ಕಿ.ಮೀ.) ಪ್ಯಾಕೇಜ್‌-2: ಬಳ್ಳಾರಿ ರಸ್ತೆ-ಹಳೆ ಮದ್ರಾಸ್‌ ರಸ್ತೆ (18 ಕಿ.ಮೀ.) ಪ್ಯಾಕೇಜ್‌-3: ಹಳೆ ಮದ್ರಾಸ್‌ ರಸ್ತೆ-ಹೊಸೂರು ರಸ್ತೆ (27.75 ಕಿ.ಮೀ.)”

Leave a comment

Leave a Reply

Your email address will not be published. Required fields are marked *

Related Articles

ಐಟಿ ಉದ್ಯೋಗಿಗಳಿಗೆ ‘ಆರ್ಬಿಟ್ ವಾಲೆಟ್ ರೂಪೇ ಕಾರ್ಡ್’ ಮೂಲಕ 1,500 ರೂ. ಮೆಟ್ರೋ ಪ್ರೋತ್ಸಾಹಧನ

ಬೆಂಗಳೂರು:250 ಐಟಿ ಉದ್ಯೋಗಿಗಳಿಗೆ ತಲಾ 1,500 ರೂ ಮೌಲ್ಯದ ಮೆಟ್ರೋ ಪ್ರೋತ್ಸಾಹಧನವನ್ನು ‘ಆರ್ಬಿಟ್ ವಾಲೆಟ್ ರೂಪೇ...

ತಿರುಪತಿ ಲಡ್ಡು ತಯಾರಿಕೆಯಲ್ಲಿ ನಕಲಿ ತುಪ್ಪ ಬಳಕೆ ಸಾಬೀತು, ಕಠಿಣ ಕ್ರಮಕ್ಕೆ ಆಗ್ರಹ

ನಕಲಿ ತುಪ್ಪವನ್ನು ಬಳಸಿ ತಿರುಪತಿ ಲಡ್ಡು ತಯಾರಿಸಲಾಗಿದೆ ಎನ್ನುವ ಸುದ್ದಿ, ಹಿಂದೂ ಭಕ್ತರನ್ನು ಕೆರಳಿಸಿದೆ. ಈ...

ದೆಹಲಿಯಲ್ಲಿ ವಾಯುಮಾಲಿನ್ಯದ ಮಟ್ಟ ಏರಿಕೆ 5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಹೈಬ್ರಿಡ್

ಹೊಸದಿಲ್ಲಿ : ವಾಯುಮಾಲಿನ್ಯದ ಮಟ್ಟ ‘ಅತ್ಯಂತ ಕೆಟ್ಟ’ ದಿಂದ ‘ಭಯಾನಕ’ ವರ್ಗಕ್ಕೆ ತಲುಪಿದೆ ದಿಲ್ಲಿ ವಾಯುಮಾಲಿನ್ಯ...

ದೆಹಲಿ ಸ್ಫೋಟಕ್ಕೂ ಪುಲ್ವಾಮಾ ದಾಳಿಗೂ ನಂಟು? ಬಹು ಆಯಾಮಗಳಲ್ಲಿ ತನಿಖೆ

ನವದೆಹಲಿ: ದೆಹಲಿಯಲ್ಲಿ ಮತ್ತೊಂದು ಭಯೋತ್ಪಾದ ದಾಳಿ ಸಂಭವಿಸಿದ್ದು, ಈ ದಾಳಿಯಲ್ಲಿ ಆತ್ಮಹತ್ಯ ಬಾಂಬರ್ ಆಗಿದ್ದ ಉಗ್ರ...