ರೈಲು ಪ್ರಯಾಣಿಕರ ಸುರಕ್ಷತೆಗಾಗಿ  ‘ಆಪರೇಷನ್‌ ರಕ್ಷಿತ’ ಕಾರ್ಯಾಚರಣೆ ಆರಂಭ

9

 ಪೆರ್ಲ:ರೈಲು ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ ‘ಆಪರೇಷನ್‌ ರಕ್ಷಿತ’ ಕೈಗೊಳ್ಳಲಾಗಿದೆ ಮತ್ತು ದೊಡ್ಡ ಪ್ರಮಾಣದಲ್ಲಿ ತಪಾಸಣೆಗಳನ್ನು ನಡೆಸಲಾಗುತ್ತಿದೆ. ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಮುನ್ನೋಟವಾಗಿ ಮಹಿಳಾ ಪೊಲೀಸ್‌ ಸಿಬ್ಬಂದಿ ಮತ್ತು ಗುಪ್ತಚರ ವಿಭಾಗ ಬಳಸಲಾಗುತ್ತಿದೆ. ಅನುಮಾನಾಸ್ಪದ ವಸ್ತುಗಳು ಅಥವಾ ವ್ಯಕ್ತಿಗಳ ಬಗ್ಗೆ ಸಾರ್ವಜನಿಕರು ಕಂಟ್ರೋಲ್ ರೂಂ ನಂ 112 ಅಥವಾ ರೈಲ್ವೆ ಸಹಾಯವಾಣಿ 139ಕ್ಕೆ ತಿಳಿಸುವಂತೆ ಸೂಚನೆ

ರೈಲು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಪೊಲೀಸರು ತೀವ್ರ ತಪಾಸಣೆ ಕೈಗೊಂಡಿದ್ದಾರೆ. ರೈಲ್ವೆ ಮತ್ತು ಸ್ಥಳೀಯ ಪೊಲೀಸ್‌ ಇಲಾಖೆಗಳ ‘ಆಪರೇಷನ್‌ ರಕ್ಷಿತ’ ಹೆಸರಲ್ಲಿ ಜಂಟಿ ಕಾರ್ಯಾಚರಣೆ ಅಂಗವಾಗಿ ತಪಾಸಣೆಗಳನ್ನು ಬಿಗಿಗೊಳಿಸಲಾಗಿದೆ.

ನ. 2 ರಂದು ರಾತ್ರಿ ತಿರುವನಂತಪುರದ ವರ್ಕಲಾ ಮತ್ತು ಕಡಕ್ಕಾವೂರು ನಿಲ್ದಾಣಗಳ ಮಧ್ಯೆ ಮದ್ಯದ ಅಮಲಿನಲ್ಲಿ ಪ್ರಯಾಣಿಕನೊಬ್ಬ 19 ವರ್ಷದ ಯುವತಿಯನ್ನು ತುಳಿದು ಹೊರ ಬೀಳಿಸಿದ ಘಟನೆ ಬಳಿಕ ರೈಲು ಪ್ರಯಾಣಿಕರಿಗೆ ಭದ್ರತೆ ಹೆಚ್ಚಿಸುವಂತೆ ರಾಜ್ಯ ಡಿಜಿಪಿ ನಿರ್ದೇಶನ ನೀಡಿದ್ದಾರೆ.

ರೈಲು ಮತ್ತು ಪ್ಲಾಟ್‌ಫಾಮ್‌ರ್‍ಗಳಲ್ಲಿ ಗಸ್ತು ಹೆಚ್ಚಿಸಲಾಗಿದೆ. ಮಹಿಳೆಯರ ಕಂಪಾರ್ಟ್‌ಮೆಂಟ್‌ಗಳಲ್ಲಿ ವಿಶೇಷ ತಪಾಸಣೆ ಆರಂಭಿಸಲಾಗಿದೆ. ಆಲ್ಕೋಮೀಟರ್‌ ಪರೀಕ್ಷೆ: ರೈಲು ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರ, ಪ್ಲಾಟ್‌ಫಾರ್ಮ್ ಹಾಗೂ ರೈಲಿನಲ್ಲಿ ಮದ್ಯದ ಅಮಲಿನಲ್ಲಿರುವ ಪ್ರಯಾಣಿಕರನ್ನು ಗುರುತಿಸಲು ಆಲ್ಕೋಮೀಟರ್‌ ಪರೀಕ್ಷೆ ಶುರು ಮಾಡಲಾಗಿದೆ. ರೈಲುಗಳ ಮೇಲೆ ಕಲ್ಲುಎಸೆಯುವವರು, ಹಳಿಗಳ ಮೇಲೆ ಕಲ್ಲು ಮತ್ತು ಇತರ ವಸ್ತುಗಳನ್ನು ಇಡುವವರನ್ನು ಪತ್ತೆ ಹಚ್ಚಲು ಗಸ್ತು ಆರಂಭಿಸಲಾಗಿದೆ.

ಇಂಥವರ ಪತ್ತೆಗೆ ಗುಪ್ತಚರ ಇಲಾಖೆ ಕಣ್ಗಾವಲು ಬಿಗಿಗೊಳಿಸಿದೆ. ಮಾದಕವಸ್ತು, ನಿಷೇಧಿತ ತಂಬಾಕು ಉತ್ಪನ್ನಗಳು ಮತ್ತು ಹವಾಲಾ ಹಣ ಸಾಗಾಟವನ್ನು ಪತ್ತೆಹಚ್ಚಲು ಬಾಂಬ್‌ ಸ್ಕ್ಯಾಡ್‌ ಮತ್ತು ಮಾದಕವಸ್ತು ಘಟಕವನ್ನು ಬಳಸಿಕೊಂಡು ರೈಲು ನಿಲ್ದಾಣ ಹಾಗೂ ರೈಲುಗಳಲ್ಲಿ ಕಣ್ಗಾವಲು ತೀವ್ರಗೊಳಿಸಲಾಗಿದೆ. ಅನುಮಾನಾಸ್ಪದ ವಸ್ತುಗಳು ಕಂಡುಬಂದರೆ ಬಾಂಬ್‌ ಸ್ಕ್ಯಾಡ್‌ ಮತ್ತು ಕೆ-9 ಸ್ಕಾ ್ವ ಡ್‌ ಸಹಾಯದಿಂದ ತುರ್ತು ತಪಾಸಣೆ ನಡೆಸಲಾಗುವುದು.

ರೈಲು ನಿಲ್ದಾಣಗಳಲ್ಲಿಅನುಮಾನಾಸ್ಪದವಾಗಿ ಕಂಡು ಬರುವ ಬ್ಯಾಗ್‌ಗಳು, ಅನುಮಾನಾಸ್ಪದ ವಸ್ತುಗಳು ಅಥವಾ ವ್ಯಕ್ತಿಗಳನ್ನು ಕಂಡರೆ ಹತ್ತಿರದ ಪೊಲೀಸ್‌ ಠಾಣೆ ಅಥವಾ ರೈಲು ಅಲರ್ಟ್‌ ಕಂಟ್ರೋಲ್‌ ಸಂಖ್ಯೆ 9846200100, ಇಆರ್‌ಎಸ್‌ಎಸ್‌ ನಿಯಂತ್ರಣ ಕೊಠಡಿಯ 112 ಅಥವಾ ರೈಲ್ವೆ ಸಹಾಯವಾಣಿ 139ಕ್ಕೆ ತಿಳಿಸುವಂತೆ ಇಂಟಲಿಜೆನ್ಸ್‌ ಆ್ಯಂಡ್‌ ರೈಲ್ವೆ ಎಡಿಜಿಪಿ ತಿಳಿಸಿದ್ದಾರೆ.

ರೈಲ್ವೇ ಪ್ರಯಾಣಿಕರಿಗೆ ಗುಡ್‌ನ್ಯೂಸ್‌: ಕರ್ನಾಟಕದ ಹೊಸ ವಂದೇ ಭಾರತ್ ಸೇರಿ 4 ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ; ಯಾವಾಗ?, ಎಲ್ಲಿಂದ ಎಲ್ಲಿಗೆ? ಗುಪ್ತಚರ ವಿಭಾಗ, ಮೊಬೈಲ್‌ ಅಪ್ಲಿಕೇಶನ್‌: ರೈಲು ಮತ್ತು ಪ್ಲಾಟ್‌ಫಾಮ್‌ರ್‍ಗಳಲ್ಲಿ ರೈಲ್ವೆ ಪೊಲೀಸರ ಜತೆಗೆ ರಾಜ್ಯ ಗುಪ್ತಚರ ಬ್ಯೂರೋ ಮತ್ತು ಪೊಲೀಸರು ತಪಾಸಣೆಯಲ್ಲಿ ಭಾಗವಹಿಸುವರು.

ಮುನ್ನೆಚ್ಚರಿಕೆ ಭಾಗವಾಗಿ ಪದೇಪದೆ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡವರ ವಿರುದ್ಧ ಬಂಧನ ಸಹಿತ ಕ್ರಮ ಕೈಗೊಳ್ಳಲಾಗುವುದು. ಅಪರಾಧ ಕೃತ್ಯಗಳು ನಡೆದರೆ ಸಾರ್ವಜನಿಕರು ಕಾನೂನು ಸಹಾಯಕ್ಕಾಗಿ ಸಂಪರ್ಕಿಸಲು ಮೊಬೈಲ್‌ ಸುರಕ್ಷಾ ಆ್ಯಪ್‌ ಬಿಡುಗಡೆ ಮಾಡಲಾಗುವುದು. ಈ ನಿಟ್ಟಿನಲ್ಲಿ ರೈಲ್ವೆಯ ಉಸ್ತುವಾರಿ ಹೊಂದಿರುವ ಎಡಿಜಿಪಿ ಹಿರಿಯ ಗುಪ್ತಚರ ಅಧಿಕಾರಿಗಳ ಸಭೆ ಕರೆದು ಅಗತ್ಯ ಸೂಚನೆಗಳನ್ನು ನೀಡಿದ್ದಾರೆ.”

Leave a comment

Leave a Reply

Your email address will not be published. Required fields are marked *

Related Articles

ಐಟಿ ಉದ್ಯೋಗಿಗಳಿಗೆ ‘ಆರ್ಬಿಟ್ ವಾಲೆಟ್ ರೂಪೇ ಕಾರ್ಡ್’ ಮೂಲಕ 1,500 ರೂ. ಮೆಟ್ರೋ ಪ್ರೋತ್ಸಾಹಧನ

ಬೆಂಗಳೂರು:250 ಐಟಿ ಉದ್ಯೋಗಿಗಳಿಗೆ ತಲಾ 1,500 ರೂ ಮೌಲ್ಯದ ಮೆಟ್ರೋ ಪ್ರೋತ್ಸಾಹಧನವನ್ನು ‘ಆರ್ಬಿಟ್ ವಾಲೆಟ್ ರೂಪೇ...

ತಿರುಪತಿ ಲಡ್ಡು ತಯಾರಿಕೆಯಲ್ಲಿ ನಕಲಿ ತುಪ್ಪ ಬಳಕೆ ಸಾಬೀತು, ಕಠಿಣ ಕ್ರಮಕ್ಕೆ ಆಗ್ರಹ

ನಕಲಿ ತುಪ್ಪವನ್ನು ಬಳಸಿ ತಿರುಪತಿ ಲಡ್ಡು ತಯಾರಿಸಲಾಗಿದೆ ಎನ್ನುವ ಸುದ್ದಿ, ಹಿಂದೂ ಭಕ್ತರನ್ನು ಕೆರಳಿಸಿದೆ. ಈ...

ದೆಹಲಿಯಲ್ಲಿ ವಾಯುಮಾಲಿನ್ಯದ ಮಟ್ಟ ಏರಿಕೆ 5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಹೈಬ್ರಿಡ್

ಹೊಸದಿಲ್ಲಿ : ವಾಯುಮಾಲಿನ್ಯದ ಮಟ್ಟ ‘ಅತ್ಯಂತ ಕೆಟ್ಟ’ ದಿಂದ ‘ಭಯಾನಕ’ ವರ್ಗಕ್ಕೆ ತಲುಪಿದೆ ದಿಲ್ಲಿ ವಾಯುಮಾಲಿನ್ಯ...

ದೆಹಲಿ ಸ್ಫೋಟಕ್ಕೂ ಪುಲ್ವಾಮಾ ದಾಳಿಗೂ ನಂಟು? ಬಹು ಆಯಾಮಗಳಲ್ಲಿ ತನಿಖೆ

ನವದೆಹಲಿ: ದೆಹಲಿಯಲ್ಲಿ ಮತ್ತೊಂದು ಭಯೋತ್ಪಾದ ದಾಳಿ ಸಂಭವಿಸಿದ್ದು, ಈ ದಾಳಿಯಲ್ಲಿ ಆತ್ಮಹತ್ಯ ಬಾಂಬರ್ ಆಗಿದ್ದ ಉಗ್ರ...