ಭವಿಷ್ಯ ಭಾರತೀಯ ಐಟಿ ಕಂಪನಿಗಳ ಉದ್ಯೋಗಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ.

37

ಹೊಸದಿಲ್ಲಿ: 1 ಬಿಲಿಯನ್ ಡಾಲರ್ ಆದಾಯದ ಭಾರತೀಯ ಐಟಿ ಕಂಪನಿಯಲ್ಲಿ ಈಗ ಇದ್ದಾರೆ 30,000 ಉದ್ಯೋಗಿಗಳು ಮುಂದಿನ 3 ವರ್ಷಗಳಲ್ಲಿ ಕೇವಲ 1,000 ಪೂರ್ಣಾವಧಿ ಸಿಬ್ಬಂದಿ ಇರಲಿದ್ದಾರೆ ಎಂದ ಕನ್ಸಲ್ಟೇಷನ್ ರಿಸರ್ಚ್ ಸಂಸ್ಥೆಯ ಸಿಇಒ ರೇ ವಾಂಗ್ ಐಟಿ ಉದ್ಯಮದಲ್ಲಿ ಉತ್ತಮ ಕಾರ್ಯಕ್ಷಮತೆಯನ್ನು ಸಾಧಿಸಲು ಕೃತಕ ಬುದ್ಧಿಮತ್ತೆಯಿಂದ ಭಾರೀ ಅನುಕೂಲ ಎಐ ಸಂಬಂಧ ಕನ್ಸಲ್ಟೇಷನ್‌ ರಿಸರ್ಚ್ ಸಂಸ್ಥೆಯ ಸಿಇಒ ರೇ ವಾಂಗ್‌ ಭಾರೀ ಭವಿಷ್ಯ ನುಡಿದಿದ್ದಾರೆ.

ಸರಾಸರಿ 1 ಬಿಲಿಯನ್‌ ಡಾಲರ್‌ ಆದಾಯ ಹೊಂದಿರುವ ಭಾರತೀಯ ಐಟಿ ಕಂಪನಿಯೊಂದರಲ್ಲಿ ಸುಮಾರು 30,000 ಉದ್ಯೋಗಿ ಗಳಿರುತ್ತಾರೆ. ಆದರೆ ಮುಂದಿನ ಮೂರೂವರೆ ವರ್ಷಗಳಲ್ಲಿ ಇಷ್ಟೇ ಆದಾಯವಿರುವ ಐಟಿ ಕಂಪನಿಯು ಕೇವಲ 1,000 ಪೂರ್ಣಾವಧಿ ಸಿಬ್ಬಂದಿಯನ್ನು ಮಾತ್ರ ಹೊಂದಿರಲಿದೆ! ಇದು ಕನ್ಸಲ್ಟೇಷನ್‌ ರಿಸರ್ಚ್ ಸಂಸ್ಥೆಯ ಸಿಇಒ ರೇ ವಾಂಗ್‌ ಭವಿಷ್ಯ.

”100 ಮಂದಿಯ ಸಾಫ್ಟ್‌ವೇರ್‌ ಕಂಪನಿಯು ಮುಂದಿನ 3 ವರ್ಷಗಳಲ್ಲಿ 1 ಬಿಲಿಯನ್‌ ಡಾಲರ್‌ ವಾರ್ಷಿಕ ಆದಾಯವಿರುವ ಕಂಪನಿಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬಹುದು,” ಎಂಬುದು ಅವರ ದೃಢವಾದ ಅಭಿಮತ.ಕೃತಕ ಬುದ್ಧಿಮತ್ತೆಯ (ಎಐ) ಅಪಾರ ಸಾಧ್ಯತೆಗಳು ತೆರೆದುಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಐಟಿ ಜಗತ್ತು ದೊಡ್ಡ ರೂಪಾಂತರಕ್ಕೆ ತೆರೆದುಕೊಳ್ಳಲಿದೆ.

ತಂತ್ರಜ್ಞಾನದ ಯೋಜನೆಗಳನ್ನು ಕಡಿಮೆ ವೆಚ್ಚದಲ್ಲಿ ಮಾಡಲು ಕಡಲಾಚೆಯ ಎಂಜಿನಿಯರ್‌ಗಳನ್ನು ನೇಮಿಸಿಕೊಳ್ಳಲಾಗುತ್ತದೆ. ಇದಕ್ಕೆ ಎಐ ಒತ್ತಾಸೆ ನೀಡುತ್ತದೆ. ತಂತ್ರಾಂಶದ ನಿರ್ಮಾಣ ಮತ್ತು ನಿರ್ವಹಣೆಯನ್ನು ಎಐ ಮಾಡುತ್ತದೆ. ಭಾರತದಲ್ಲಿ AI ಮಹಾಯುದ್ಧ!

ಸ್ಪರ್ಧೆಗೆ ಬಿದ್ದ ಜಿಯೋ, ಏರ್‌ಟೆಲ್‌! ಸಾವಿರಾರು ರೂಪಾಯಿ ಮೌಲ್ಯದ ಎಐ ಉಚಿತ! ನಿಮಗೇನು ಲಾಭ? ಏನಿದು ಎಐ ಏಜೆಂಟ್‌? ನಿರ್ಣಯ ಮಾಡುವುದು, ಅದಕ್ಕೆ ಬೇಕಾದ ಕಾರ್ಯನಿರ್ವಹಣೆಯನ್ನು ಹೊಂದಿಸಿಕೊಳ್ಳುವುದು ಮತ್ತು ತುಂಬ ಸಂಕೀರ್ಣವಾದರೂ ಕೆಲಸವನ್ನು ಸುಸೂತ್ರಗೊಳಿಸಿಕೊಳ್ಳುವುದು – ಇದೆಲ್ಲವನ್ನೂ ಮಾಡುವುದಕ್ಕೆ ‘ಎಐ ಏಜೆಂಟ್‌’ ಎನ್ನುತ್ತೇವೆ. ಮಾಹಿತಿ ಸಂಗ್ರಹಣೆ, ದತ್ತಾಂಶಗಳ ವಿಶ್ಲೇಷಣೆ, ಗುರಿ ಹಾಗೂ ಬೇಕಾದ ನಿಯಮಗಳಿಗೆ ತಕ್ಕಂತೆ ನಿರ್ಣಯ ಕೈಗೊಳ್ಳುವುದು ಹಾಗೂ ಮನುಷ್ಯರ ಮೇಲ್ವಿಚಾರಣೆಯನ್ನು ಹೆಚ್ಚು ಅವಲಂಬಿಸದೆ ಟಾಸ್ಕ್‌ ನಿರ್ವಹಣೆ ಮಾಡುವ ವಿಶಿಷ್ಟ ಕಾರ್ಯಗಳನ್ನು ‘ಎಐ ಏಜೆಂಟ್‌’ ಮಾಡುತ್ತದೆ.

ಕಳೆದ ಎರಡು ದಶಕಗಳಿಂದ ತಂತ್ರಜ್ಞಾನ ಸೇವೆಯ ರಫ್ತಿನಲ್ಲಿ ಮುಂಚೂಣಿಯಲ್ಲಿರುವ ಭಾರತಕ್ಕೆ ‘ಎಐ ಏಜೆಂಟ್‌’ ದೊಡ್ಡ ಸವಾಲನ್ನು ಒಡ್ಡಿದೆ. ಭಾರತದ ಟೆಕ್‌ ಉದ್ಯಮಕ್ಕೆ ಪೆಟ್ಟು ಹೆಚ್ಚು ಮಾನವ ಶ್ರಮ, ಸಂಪನ್ಮೂಲದ ಅಗತ್ಯವನ್ನು ಉಂಟು ಮಾಡಿದ್ದ ಭಾರತದ ಟೆಕ್‌ ಆಧಿಪತ್ಯದಲ್ಲಿ ಬಿರುಕುಗಳು ಉಂಟಾಗತೊಡಗಿವೆ. ಜಾಗತಿಕ ಮನ್ನಣೆಯ ಪ್ರಭಾವಳಿಗಳು ಮಂಕಾಗತೊಡಗಿವೆ. ಎಐ ದೈತ್ಯರಾದರೆ ಮಾತ್ರ ನಮ್ಮ ಐಟಿ ಹವಾ ಉಳಿಯಬಲ್ಲದು.

ಐಟಿ ವಲಯದಲ್ಲಿ ಆಗುತ್ತಿರುವ ಭೂಕಂಪನವನ್ನು ವಾಂಗ್‌ ಗ್ರಹಿಸಿದ್ದಾರೆ. ”ಎಐ ಬಳಕೆಯಿಂದ ಕಂಪನಿಗಳ ಕಾರ್ಯದಕ್ಷತೆ ಕ್ಷಿಪ್ರಗತಿಯನ್ನು ಪಡೆಯುತ್ತವೆ. ಇಂತಹ ಕಂಪನಿಗಳು ನೀಡುವ ಸೇವೆಯ ಆಫರ್‌ಗಳು ಹಿಂದೆ ಯಾರೋ ಮಾಡಿದ್ದ ವ್ಯವಹಾರದ ಮಾದರಿಗಳನ್ನು ಭಕ್ಷಣೆ ಮಾಡುತ್ತವೆ,” ಎನ್ನುವುದು ವಾಂಗ್‌ ಅವರ ಖಚಿತ ಅಭಿಪ್ರಾಯ.”

Leave a comment

Leave a Reply

Your email address will not be published. Required fields are marked *

Related Articles

ವಂದೇ ಮಾತರಂ’ ಹಾಡುವುದು ಕಡ್ಡಾಯ: ಏಕಪಕ್ಷೀಯ ಮತೀಯ ಅಜೆಂಡಕ್ಕೆ ವಿರೋಧ:: ಜಮಿಯತ್ ಉಲಮಾ-ಇ -ಹಿಂದ್

ನವದೆಹಲಿ: ರಾಷ್ಟ್ರೀಯ ಗೀತೆ ವಂದೇ ಮಾತರಂ ಗೀತೆ ಕುರಿತು ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿ...

ಸೇನಾ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಕಲು ಹದಿನೆಂಟು ಅಭ್ಯರ್ಥಿಗಳ ಬಂಧನ

“ಬೆಂಗಳೂರು: ಇತ್ತೀಚೆಗೆ ನಡೆದ ಸೇನಾ ಗ್ರೂಪ್ ಸಿ ನೇಮಕಾತಿ ಪರೀಕ್ಷೆಗೆ ಹಾಜರಾದ ಹದಿನೆಂಟು ಅಭ್ಯರ್ಥಿಗಳನ್ನು ವಂಚನೆ...

ಬಂಧನ ಭೀತಿಯಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜ್ ಹೈಕೋರ್ಟ್ ಬಿಗ್ ಶಾಕ್  ನಿರೀಕ್ಷಣಾ ಜಾಮೀನು ಅರ್ಜಿ ವಜಾ

“ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಭೈರತಿ ಬಸವರಾಜ್...

ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಪ್ರಾಥಮಿಕ ವಿಚಾರಣೆ ನಡೆಸದೆ ಏಕಾಏಕಿ” ಎಫ್‌ಐಆರ್‌ ದಾಖಲಿಸದಂತೆ ಹೊಸ ಮಾರ್ಗಸೂಚಿ

ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ “ಪ್ರಾಥಮಿಕ ವಿಚಾರಣೆ ನಡೆಸದೆ ಏಕಾಏಕಿ” ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತಿದೆ ಎಂಬುದನ್ನು ಗಮನಿಸಿದ...