ಮೆಜೆಸ್ಟಿಕ್‌ನಿಂದ ನೆಲಮಂಗಲ ನಡುವೆ 6 ಹೊಸ ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್‌ಗಳು ಸಂಚಾರ.

42

ಬೆಂಗಳೂರು: ಬಿಎಂಟಿಸಿ ಹೊಸ ಮಾರ್ಗದಲ್ಲಿ ಎಕ್ಸ್‌ಪ್ರೆಸ್‌ ಬಸ್‌ ಸೇವೆಯನ್ನು ಆರಂಭ.  30 ನಿಮಿಷ ಅಂತರದಲ್ಲಿ ಬೆಳಿಗ್ಗೆಯಿಂದ ಬಸ್‌ಗಳು ಲಭ್ಯ. ಬಿಎಂಟಿಸಿ ಎಕ್ಸ್‌ಪ್ರೆಸ್‌ ಸೇವೆ ಆರಂಭ.ಬಿಎಂಟಿಸಿ ಹೊಸ ಮಾರ್ಗದಲ್ಲಿ ಎಕ್ಸ್‌ಪ್ರೆಸ್‌ ಬಸ್‌ ಸೇವೆಯನ್ನು ಆರಂಭಿಸುತ್ತಿದೆ.

ಮೆಜೆಸ್ಟಿಕ್‌ನಿಂದ ನೆಲಮಂಗಲ ನಡುವೆ 6 ಹೊಸ ಹವಾನಿಯಂತ್ರಿತ ಎಲೆಕ್ಟ್ರಿಕ್ ವಜ್ರ ಬಸ್‌ಗಳು ನವೆಂಬರ್ 3 ರಿಂದ ಸಂಚರಿಸಲಿವೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ.

ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮೆಜೆಸ್ಟಿಕ್‌ – ನೆಲಮಂಗಲ ನಡುವೆ ಹೊಸ ಮಾರ್ಗ ಆರಂಭಿಸಲಾಗಿದೆ. 30 ನಿಮಿಷ ಅಂತರದಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೂ ಬಸ್‌ಗಳು ಸಂಚಾರ ನಡೆಸಲಿವೆ ಎಂದು ಬಿಎಂಟಿಸಿ ತಿಳಿಸಿದೆ.

ಹೊಸ ಬಸ್‌ ಮಾರ್ಗದ ವೇಳಾಪಟ್ಟಿ ಬಸ್‌ ಎಲ್ಲಿಂದ ಎಲ್ಲಿಗೆ ಸಂಚಾರ – ಕೆಂಪೇಗೌಡ ಬಸ್ ನಿಲ್ದಾಣ – ನೆಲಮಂಗಲ ಬಸ್ ನಿಲ್ದಾಣ ಮಾರ್ಗ ಸಂಖ್ಯೆ – ವಿ 258 ಸಿ ಬಸ್‌ ಮಾದರಿ – ನೂತನ ಹವಾನಿಯಂತ್ರಿತ ಎಲೆಕ್ಟ್ರಿಕ್ ವಜ್ರ ಎಲ್ಲೆಲ್ಲಿ ನಿಲುಗಡೆ – ಸೆಂಟ್ರಲ್ ಟಾಕೀಸ್, ಮಲ್ಲೇಶ್ವರ 8ನೇ ಕ್ರಾಸ್, ಗೋವರ್ಧನ ಟಾಕೀಸ್, ಗೊರಗುಂಟೆಪಾಳ್ಯ, ಅರಶಿನಕುಂಟೆ.

ಕೆಂಪೇಗೌಡ ಬಸ್ ನಿಲ್ದಾಣದಿಂದ ಹೊರಡುವ ಸಮಯ – ಬೆಳಿಗ್ಗೆ 6.00, 6.40, 7.10, 7.40, 8.20, 8.50, 9.30, 10.05, 10.35, 11.05, 12.05, ಮಧ್ಯಾಹ್ನ 1.05, 2.40, 3.30, ಸಂಜೆ 4.00, 4.30, 5.00, 5.30, 6.00, 6.50, 7.40, ರಾತ್ರಿ 8.40 ಮಾರ್ಗ ನೆಲಮಂಗಲ ಬಸ್ ನಿಲ್ದಾಣದಿಂದ ಹೊರಡುವ ಸಮಯ -ಬೆಳಿಗ್ಗೆ 7.35, 8.10, 8.45, 9.15, 9.55, 10.25, 11.10, 11.40, ಮಧ್ಯಾಹ್ನ 12.10, 12.40, 2.00, 3.00, ಸಂಜೆ 4.20, 5.05, 5.35, 6.05, 6.35, 7.10, ರಾತ್ರಿ 8.00, 8.40, 9.20, 10.00″

Leave a comment

Leave a Reply

Your email address will not be published. Required fields are marked *

Related Articles

ಎಸ್ ಎಸ್ ಎಲ್ ಸಿ ತೃತೀಯ ಭಾಷೆ ವಿವಾದ: ಸಿಎಂ ಸಲಹೆ ಪಡೆಯಲು ಮುಂದಾದ ಸಚಿವ ಮಧು ಬಂಗಾರಪ್ಪ ಬದಲಾಗಲಿದೆ ಸರ್ಕಾರದ ಮುಂದಿನ ನಡೆ

ಬೆಂಗಳೂರು: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆ ಅಂಕ/ಗ್ರೇಡ್ ವ್ಯವಸ್ಥೆ ಕುರಿತು ಉಂಟಾಗಿರುವ ವಿವಾದಕ್ಕೆ ಸಂಬಂಧಿಸಿ ಹೈಕೋರ್ಟ್...

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಕೆಪಿಸಿಸಿ ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್

ಬೆಂಗಳೂರು: ಕರ್ನಾಟಕ ಉಪ ಚುನಾವಣೆ ರಣಾಂಗಣ ದಿನಕಳೆದಂತೆ ತೀವ್ರ ಕುತೂಹಲ ಕೆರಳಿಸುತ್ತಿದ್ದು ಪ್ರಮುಖವಾಗಿ ದಾವಣಗೆರೆ ದಕ್ಷಿಣ...

ದಾವಣಗೆರೆ ಚುನಾವಣೆ ಬಂಡಾಯ ಕಾರ್ಯನಿರ್ವಹಿಸಿದ ಸಚಿವ ಜಮೀರ್ ಅಹ್ಮದ್ ಸೇರಿದಂತೆ ಹಲವು ಮುಸ್ಲಿಂ ನಾಯಕರ ವಿರುದ್ಧ ಶಿಸ್ತು ಕ್ರಮಕ್ಕೆ ಸಿದ್ಧತೆ

“ಬೆಂಗಳೂರು: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್ ಟಿಕೆಟ್ ಮುಸ್ಲಿಮರಿಗೆ ಕೊಡದಕ್ಕೆ ಶುರುವಾದ ಬಂಡಾಯ ಗೊಂದಲ...

ಪಿಯುಸಿ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಡಿಜಿಟಲ್ ಅಂಕಪಟ್ಟಿ ಲಭ್ಯ : ಸಚಿವ ಮಧು ಬಂಗಾರಪ್ಪ

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಮುದ್ರಿತ ಅಂಕಪಟ್ಟಿ ನೀಡುವುದಿಲ್ಲ....