ಜಿಬಿಎ ಹೊಸ ಪ್ಲ್ಯಾನ್ :  ಕಸದ ಗಾಡಿಯ ಪೂರ್ತಿ ಕಸ ನಿಮ್ ಮನೆ ಮುಂದೆಯೇ ಬೀಳುತ್ತೆ ಎಚ್ಚರ

42

ಬೆಂಗಳೂರು : ನಿಯಮ ಪ್ರಕಾರ ಗಾಡಿಗಳಿಗೆ ಕೊಡದೆ, ರಸ್ತೆ ಬದಿ, ಬೇರೆಯವರ ಮನೆಯ ಅಕ್ಕಪಕ್ಕ ಸುರಿದು ಸಮಸ್ಯೆ ಸೃಷ್ಟಿಸುವವರಿಗೆ ತಕ್ಕ ಶಾಸ್ತಿ ಮಾಡಲು ಜಿಬಿಎ ಮುಂದಾಗಿದೆ. ಕಸ ಎಸೆಯುವವರ ವಿಡಿಯೋ ಮಾಡಿ, ಅವರ ಮನೆ ಮುಂದೆಯೇ ಬಂದು ಕಸ ಹಾಕಿ, ದುಪ್ಪಟ್ಟು ದಂಡ ಹಾಕಲಾಗ್ತಿದೆ.

ಬೆಂಗಳೂರು ರಸ್ತೆ ಬದಿ, ಕೆರೆಗಳ ಪಕ್ಕ, ಮರದ ಬುಡದಲ್ಲಿ ಹೀಗೆ ಎಲ್ಲೆಂದರಲ್ಲಿ ಕಸ ಸುರಿದು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಹೆಸರು ಹಾಳಾಗುತ್ತಿದೆ. ಹೀಗಾಗಿ ಜನರಿಗೆ ತಕ್ಕ ಪಾಠ ಕಲಿಸಲು ಗ್ರೇಟರ್ ಬೆಂಗಳೂರು ಅಥಾರಿಟಿ ಹೊಸ ಪ್ಲ್ಯಾನ್ ಮಾಡಿದೆ. ಮನೆ ಮುಂದೆ ಆಟೋ ಕಸ ಸುರಿದ ಜಿಬಿಎ! ಕಸ ಎಸೆಯುವಾಗ ಅವರ ವಿಡಿಯೋಗಳನ್ನು ಮಾರ್ಷಲ್ ಗಳು ತೆಗೆದು, ನಂತರ ಅವರ ಮನೆಯ ಮುಂದೆಯೇ ಆಟೋ ಟಿಪ್ಪರ್ ಮೂಲಕ ಫುಲ್ ಲೋಡ್ ಕಸ ಸುರಿಯುವ ಮೂಲಕ ಜಿಬಿಎ ಪಾಠ ಕಲಿಸಲು ಮುಂದಾಗಿದೆ.

ಇಂದು ಈ ಅಭಿಯಾನ ನಡೆಸಿರುವ ಮಾರ್ಷಲ್ ಗಳು, ಪೌರಕಾರ್ಮಿಕರು ಹಾಗೂ ಆರೋಗ್ಯ ಅಧಿಕಾರಿಗಳು ಮನೆ ಮುಂದೆ ಕಸ ಸುರಿಯಲು ಆರಂಭಿಸಿದ್ದಾರೆ. ಈ ಮೂಲಕ ಮರ್ಯಾದೆ ಬೀದಿ ಪಾಲು ಆಗುವುದಲ್ಲದೆ, ದಂಡದ ಮೊತ್ತ ಕೂಡಾ ದುಪ್ಪಟ್ಟು ಹಾಕಲಾಗುತ್ತಿದೆ. ಎಲ್ಲೆಲ್ಲಿ ಅಭಿಯಾನ? ದತ್ತಾತ್ರೇಯ ವಾರ್ಡ್, ಶಿವಾಜಿನಗರ ವ್ಯಾಪ್ತಿಯಲ್ಲಿ ಬರುವ ಎಸ್ ಆರ್‌ನಗರ, ಸಂಪಂಗಿರಾಮನಗರದಲ್ಲಿ ಮನೆಮುಂದೆ ಕಸ ಸುರಿಯಲಾಗಿದೆ.

ಅಲ್ಲದೆ ಪ್ರತಿಯೊಬ್ಬರಿಗೂ 500 ರೂಪಾಯಿ‌ದಂಡ ವಿಧಿಸಲಾಗಿದೆ. ಇನ್ನು ಮುಂದೆ ಈ ತಪ್ಪನ್ನು ಮರುಕಳಿಸಬಾರದೆಂದು ಎಚ್ಚರಿಕೆ ನೀಡಲಾಗಿದೆ. ಕಟ್ಟಡದಲ್ಲಿ ಹಲವು ಮನೆಗಳಿದ್ದರೂ, ಯಾರೇ ಒಬ್ಬರು ಕಸ ಎಸೆದಿದ್ದರೂ ಎಲ್ಲಾ ಮನೆಗೆ ಸಮಸ್ಯೆ ಆಗಲಿದೆ ರಾತ್ರಿ ಹೊತ್ತಲ್ಲಿ, ಇರಬಹುದು ಯಾವುದೇ ಸಮಯದಲ್ಲಿ ಕಸ ಎಸೆಯುವವರ ಮೇಲೆ ಹದ್ದಿನ ಕಣ್ಣು ಇಡಲಾಗುತ್ತಿದೆ. ಕಸ ಎಸೆದಾಗ, ಅಕ್ಕಪಕ್ಕ ಮನೆಯವರು ಕೂಡಾ ಛೀಮಾರಿ ಹಾಕಿದ ಘಟನೆ ನಡೆದಿದೆ.

ವಿದ್ಯಾವಂತರು ಕೂಡಾ ಮೂರ್ಖರ ರೀತಿ ಕಸ ಸೆಯುತ್ತಿದ್ದಾರೆ. ಇದೇ ರೀತಿ ಬುದ್ಧಿ ಕಲಿಸುತ್ತಿರುವುದು ಸರಿಯಾಗಿದೆ. ಜಿಬಿಎ ಗಾಡಿ ಬಂದಾಗ ಕಸ ವಿಂಗಡಿಸಿ ಕೊಡಬೇಕು. ಅದು ಬಿಟ್ಟು 8 ಗಂಟೆಯವರೆಗೂ ನಿದ್ದೆ ಮಾಡುತ್ತಾ, ನಂತರ ಕಸ ಎಲ್ಲೆಂದರಲ್ಲಿ ಎಸೆಯೋದು ಸರಿಯಲ್ಲ ಎಂದು ಹೇಳಿದ್ದಾರೆ. ಕಸವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವುದರಿಂದ ಎಲ್ಲರ ಆರೋಗ್ಯ ರಕ್ಷಣೆಯೂ ಸಾಧ್ಯ.

ಬೇರೆಯವರ ಮನೆ ಮುಂದೆ, ರಸ್ತೆ ಕಾರ್ನರ್ ಗಳಲ್ಲಿ ಎಸೆಯುವುದು ಸರಿಯಲ್ಲ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಕಸ ಸುರಿದು, ದುಪ್ಪಟ್ಟು ದಂಡ ಹಾಕಿ, ಅಕ್ಕಪಕ್ಕದ ಮನೆಯವರ ಮುಂದೆ ತಪ್ಪಿತಸ್ಥರಿಗೆ ಕ್ಲಾಸ್ ತೆಗೆದುಕೊಂಡ ಮಾರ್ಷಲ್ ಗಳು, ಆರೋಗ್ಯ ಅಧಿಕಾರಿಗಳು ಬಳಿಕ ಕಸವನ್ನು ವಾಪಸ್ ತುಂಬಿಕೊಂಡು ಹೋದರು.”

Leave a comment

Leave a Reply

Your email address will not be published. Required fields are marked *

Related Articles

ಎಸ್ ಎಸ್ ಎಲ್ ಸಿ ತೃತೀಯ ಭಾಷೆ ವಿವಾದ: ಸಿಎಂ ಸಲಹೆ ಪಡೆಯಲು ಮುಂದಾದ ಸಚಿವ ಮಧು ಬಂಗಾರಪ್ಪ ಬದಲಾಗಲಿದೆ ಸರ್ಕಾರದ ಮುಂದಿನ ನಡೆ

ಬೆಂಗಳೂರು: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆ ಅಂಕ/ಗ್ರೇಡ್ ವ್ಯವಸ್ಥೆ ಕುರಿತು ಉಂಟಾಗಿರುವ ವಿವಾದಕ್ಕೆ ಸಂಬಂಧಿಸಿ ಹೈಕೋರ್ಟ್...

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಕೆಪಿಸಿಸಿ ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್

ಬೆಂಗಳೂರು: ಕರ್ನಾಟಕ ಉಪ ಚುನಾವಣೆ ರಣಾಂಗಣ ದಿನಕಳೆದಂತೆ ತೀವ್ರ ಕುತೂಹಲ ಕೆರಳಿಸುತ್ತಿದ್ದು ಪ್ರಮುಖವಾಗಿ ದಾವಣಗೆರೆ ದಕ್ಷಿಣ...

ದಾವಣಗೆರೆ ಚುನಾವಣೆ ಬಂಡಾಯ ಕಾರ್ಯನಿರ್ವಹಿಸಿದ ಸಚಿವ ಜಮೀರ್ ಅಹ್ಮದ್ ಸೇರಿದಂತೆ ಹಲವು ಮುಸ್ಲಿಂ ನಾಯಕರ ವಿರುದ್ಧ ಶಿಸ್ತು ಕ್ರಮಕ್ಕೆ ಸಿದ್ಧತೆ

“ಬೆಂಗಳೂರು: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್ ಟಿಕೆಟ್ ಮುಸ್ಲಿಮರಿಗೆ ಕೊಡದಕ್ಕೆ ಶುರುವಾದ ಬಂಡಾಯ ಗೊಂದಲ...

ಪಿಯುಸಿ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಡಿಜಿಟಲ್ ಅಂಕಪಟ್ಟಿ ಲಭ್ಯ : ಸಚಿವ ಮಧು ಬಂಗಾರಪ್ಪ

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಮುದ್ರಿತ ಅಂಕಪಟ್ಟಿ ನೀಡುವುದಿಲ್ಲ....