ಅದಾನಿ ಗ್ರೀನ್ ಎನರ್ಜಿ ಷೇರುಗಳ ಮೌಲ್ಯ ಶೇ. 14ರಷ್ಟು ಏರಿಕೆ

43

ಅದಾನಿ ಸಮೂಹದ ನವೀಕರಿಸಬಹುದಾದ ಇಂಧನ ವಿಭಾಗವಾದ ಅದಾನಿ ಗ್ರೀನ್ ಎನರ್ಜಿ, ತನ್ನ ಸೆಪ್ಟೆಂಬರ್ ತ್ರೈಮಾಸಿಕದ ಫಲಿತಾಂಶವನ್ನು ಪ್ರಕಟಿಸಿದ ನಂತರ ಷೇರು ಮಾರುಕಟ್ಟೆಯಲ್ಲಿ ಉತ್ತಮ ಗಳಿಕೆ ಕಂಡಿದೆ. ಕಂಪನಿಯ ನಿವ್ವಳ ಲಾಭದಲ್ಲಿ ಶೇ. 25ರಷ್ಟು ಹೆಚ್ಚಳವಾಗಿದ್ದು, ಬುಧವಾರದ ವಹಿವಾಟಿನಲ್ಲಿ ಷೇರುಗಳ ಮೌಲ್ಯ ಶೇ. 14ರಷ್ಟು ಜಿಗಿದು 1,145 ರೂ.ಗೆ ತಲುಪುವ ಮೂಲಕ ಒಂದು ತಿಂಗಳ ಗರಿಷ್ಠ ಮಟ್ಟವನ್ನು ದಾಖಲಿಸಿದೆ.

1,145 ರೂ.ಗೆ ಜಂಪ್‌ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭವು ಶೇ. 25ರಷ್ಟು ಹೆಚ್ಚಳ, 644 ಕೋಟಿ ರೂ.ಗೆ ಏರಿಕೆ ಇಂಧನ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ. 39ರಷ್ಟು ಹೆಚ್ಚಳ, 19,569 ದಶಲಕ್ಷ ಯೂನಿಟ್‌ಗಳಿಗೆ ಏರಿಕೆ 2025-26ರ ಹಣಕಾಸು ವರ್ಷದ ಮೊದಲಾರ್ಧದಲ್ಲಿ 2.4 ಗಿಗಾವ್ಯಾಟ್ ಹೊಸ ಸಾಮರ್ಥ್ಯ ಸೇರ್ಪಡೆ ತನ್ನ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕಿಂತ ಶೇ. 67ರಷ್ಟು ಕಡಿಮೆ ಮೌಲ್ಯದಲ್ಲಿ ವಹಿವಾಟು ನಡೆಸುತ್ತಿದೆ ಷೇರು ಅದಾನಿ ಗ್ರೀನ್‌ ಎನರ್ಜಿ ಷೇರುಗಳು ಭಾರೀ ಏರಿಕೆ.

ಅದಾನಿ ಸಮೂಹಕ್ಕೆ ಸೇರಿದ ಅದಾನಿ ಗ್ರೀನ್‌ ಷೇರುಗಳು ಬುಧವಾರ ಭಾರೀ ಏರಿಕೆ ಕಂಡಿವೆ. ಒಂದು ಹಂತದಲ್ಲಿ ಷೇರುಗಳು ಶೇ. 14ರಷ್ಟು ಏರಿಕೆ ಕಂಡಿದ್ದವು. ಇದಕ್ಕೆ ಕಾರಣ, ಕಂಪನಿ ಪ್ರಕಟಿಸಿರುವ ಸೆಪ್ಟೆಂಬರ್‌ ತ್ರೈಮಾಸಿಕ ಫಲಿತಾಂಶ. ಮಂಗಳವಾರ ಮಾರುಕಟ್ಟೆ ಅವಧಿ ಮುಗಿದ ನಂತರ ಅದಾನಿ ಗ್ರೀನ್ ಎನರ್ಜಿ ತನ್ನ ಎರಡನೇ ತ್ರೈಮಾಸಿಕದ ಆರ್ಥಿಕ ಫಲಿತಾಂಶಗಳನ್ನು ಪ್ರಕಟಿಸಿತು.

ಇದರಲ್ಲಿ ಕಂಪನಿಯ ಆದಾಯವು ಬಹುತೇಕ ಸ್ಥಿರವಾಗಿದ್ದರೂ, ಹೆಚ್ಚಿದ ಇಂಧನ ಮಾರಾಟ ಮತ್ತು ಕಾರ್ಯಾಚರಣೆಯ ದಕ್ಷತೆಯಿಂದಾಗಿ ನಿವ್ವಳ ಲಾಭವು ಶೇ. 25ರಷ್ಟು ಏರಿಕೆಯಾಗಿ 644 ಕೋಟಿ ರೂ.ಗೆ ತಲುಪಿದೆ. ಈ ಮೂಲಕ ಸತತ ಮೂರು ದಿನಗಳ ನಷ್ಟದ ಸರಣಿಗೆ ಷೇರು ಮುಕ್ತಿ ಹಾಡಿದೆ”

Leave a comment

Leave a Reply

Your email address will not be published. Required fields are marked *

Related Articles

ತುಳುನಾಡು ಪ್ರಾಪರ್ಟೀಸ್ ಉದ್ಯಮಿ ಉದಯ ಕೆ ಶೆಟ್ಟಿ ಹಿರಿಯಡ್ಕರಿಗೆ ಅಟಲ್ ಭಾರತ್ ಗೌರವ ಸಮ್ಮಾನ್ ಪ್ರಶಸ್ತಿ

ಅಟಲ್ ಭಾರತ್ ಗೌರವ ಸಮ್ಮಾನ್ – ಇದು ಭಾರತದ ಶ್ರೇಷ್ಠ ರಾಷ್ಟ್ರೀಯ ಗೌರವಗಳಲ್ಲಿ ಒಂದು! ಅವಾರ್ಡ್ಸ್...

ಅಮೆರಿಕ ಕದನ ವಿರಾಮ ಘೋಷಣೆ ಗಗನಕ್ಕೇರಿದ್ದ ಚಿನ್ನದ ದರದಲ್ಲಿ  ಕುಸಿತ

ಮುಂಬೈ: ಇರಾನ್ ಯುದ್ಧ ಮತ್ತು ಅಮೆರಿಕ ಕದನ ವಿರಾಮ ಘೋಷಣೆ ಬೆನ್ನಲ್ಲೇ ಮಹಿಳೆಯರ ನೆಚ್ಚಿನ ಚಿನ್ನದ...

ದಾಖಲೆಯ 17ನೇ ಬಜೆಟ್ ಮಂಡಿಸಲು ಸಿಎಂ ಸಿದ್ದರಾಮಯ್ಯ ತಯಾರಿ

ಬೆಂಗಳೂರು ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಮತ್ತೆ ಜೋರಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ...

ಫೆಬ್ರವರಿ 1 ಕೇಂದ್ರ ಬಜೆಟ್: ನಿರ್ಮಲಾಸೀತಾರಾಮನ್ ಹಣಕಾಸು ಸಚಿವೆ ಆಗಿ ಸತತವಾಗಿ ಒಂಬತ್ತನೆಯ ಬಜೆಟ್ ಮಂಡನೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಒಂಬತ್ತನೆಯ ಬಾರಿಗೆ ಬಜೆಟ್‌ ಮಂಡನೆ...