ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಕೊಡಿಸುವುದಾಗಿ ವಂಚನೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲು ” ಸರಿತಾ ಲೂವಿಸ್ ಇವರು ನವೆಂಬರ್ 2023 ರಲ್ಲಿ ಅಂಜಲಿನ್ ಡಿಸಿಲ್ವಾ ರವರಿಂದ 1ನೇ ಆರೋಪಿ ಕೌಶಲ್ಯ ರವರು ಪರಿಚಯವಾಗಿ ಸರಿತಾರಿಗೆ PMEGP ಅಡಿಯಲ್ಲಿ ಸಬ್ಸಡಿ ಲೋನ್ ಮಾಡಿಸಿಕೊಡುತ್ತೇನೆ ಎಂದು ಹೇಳಿದ್ದು ಸರಿತಾ ಅವರು ಬೇಡ ಎಂದರೂ ಆರೋಪಿ ಕೌಶಲ್ಯಳು ಒತ್ತಾಯದಿಂದ ನಂಬಿಸಿ ಒಪ್ಪಿಸಿರುತ್ತಾಳೆ
. ನಂತರ ದಿನಗಳಲ್ಲಿ ಸಬ್ಸಡಿ ಲೋನ್ ಬಗ್ಗೆ ಹಲವಾರು ಕಾರಣಗಳನ್ನು ತಿಳಿಸಿ ಹಣ ಕಟ್ಟಬೇಕು ಎಂದು ಹೆಳಿದ್ದು, ಅದರಂತೆ ಸರಿತಾ ಲೂವಿಸ್ ದಾರರಿಂದ ಹಂತ ಹಂತವಾಗಿ ಕೌಶಲ್ಯಳ ಖಾತೆಗೆ ಹಾಗೂ ಆಕೆಯ ತಿಳಿಸಿದ ವ್ಯಕ್ತಿಗಳಾದ ಆಕೆಯ ಗಂಡ ಸಂದೇಶ ಮತ್ತು ಪ್ರಕಾಶ, ಆಶೀಶ ಶೆಟ್ಟಿ, ರಾಜೇಂದ್ರ ಬೈಂದೂರು, ಗೀತ, ಹರಿಣಿ, ನವ್ಯ, ಕುಮಾರ್, ಮಾಲತಿ, ಪ್ರವೀಣ್, ಹರಿಪ್ರಸಾದ್, ನಾಗರಾಜ ಮತ್ತು ಭಾರತಿ ಸಿಂಗ್ ಎಂಬುವರಿಗೆ ನಗದು ರೂಪದಲ್ಲಿ ಒಟ್ಟು 80,72,000/- ರೂಪಾಯಿ ಹಣ ನೀಡಿರುತ್ತಾರೆ.
ಸರಿತಾರ ಸಂಬಂಧಿ ಅಂಜಲಿನ್ ಡಿಸಿಲ್ವಾ ರವರಿಗೂ ಕೂಡಾ PMEGP ಅಡಿಯಲ್ಲಿ ಸಬ್ಸಡಿ ಲೋನ್ ಮಾಡಿಸಿಕೊಡುತ್ತೇನೆ ಎಂದು ಹೇಳಿ ಹಂತ ಹಂತವಾಗಿ ಸರಿತಾ ಅವರು ಮೇಲೆ ತಿಳಿಸಿದ ವ್ಯಕ್ತಿಗಳಿಗೆ 65,00,000/- ರೂಪಾಯಿ ನಗದು ಹಣವನ್ನು ನೀಡಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
Leave a comment