ಬೆಂಗಳೂರು  ಹಳದಿ ಮಾರ್ಗದಲ್ಲಿ 13 ನಿಮಿಷಕ್ಕೊಂದು ರೈಲು  ಶೀಘ್ರದಲ್ಲಿ ಓಡಾಟ  ಪ್ರಾರಂಭ

41

ನಮ್ಮ ಮೆಟ್ರೋ ಹಳದಿ ಮಾರ್ಗದ ಐದನೇ ರೈಲಿನ ಆರು ಬೋಗಿಗಳು ಆಗಮನ. ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಬಂದು ತಲುಪಿದ ಹೊಸ ಬೋಗಿಗಳು. ಶೀಘ್ರ ಹಳದಿ ಮಾರ್ಗದಲ್ಲಿ 13 ನಿಮಿಷಕ್ಕೊಂದು ರೈಲು ಓಡಾಟ. ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಹೊಸ ರೈಲು

ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗದ ಐದನೇ ರೈಲಿನ ಆರು ಬೋಗಿಗಳು ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಬಂದು ತಲುಪಿವೆ. ಸೆಪ್ಟೆಂಬರ್ 19 ರಂದು ಪಶ್ಚಿಮ ಬಂಗಾಳದ ಟಿಟಾಗರ್‌ ಸಂಸ್ಥೆ ಲಾರಿಗಳ ಮೂಲಕ ಆರು ಬೋಗಿಗಳನ್ನು ಬೆಂಗಳೂರಿಗೆ ಕಳುಹಿಸಿತ್ತು. ಐದನೇ ರೈಲು ಮುಂದಿನ ಎರಡು ವಾರದಲ್ಲಿವಾಣಿಜ್ಯ ಸಂಚಾರ ಆರಂಭಿಸಲಿದೆ.

ಪ್ರಯಾಣಿಕರ ಕಾಯುವ ಅವಧಿ ಇಳಿಕೆ ಆರ್‌.ವಿ.ರಸ್ತೆ- ಬೊಮ್ಮಸಂದ್ರ ಮಾರ್ಗದಲ್ಲಿ(ಹಳದಿ ಮಾರ್ಗ) ಸದ್ಯ ನಾಲ್ಕು ರೈಲುಗಳು (24 ಬೋಗಿ) ಸಂಚಾರ ನಡೆಸುತ್ತಿದ್ದು, ಪ್ರತಿ 19 ನಿಮಿಷಕ್ಕೊಂದು ರೈಲು ಪ್ರಯಾಣಿಕರ ಸೇವೆಗೆ ಲಭ್ಯವಿದೆ. ಐದನೇ ರೈಲು ಸಂಚಾರ ಆರಂಭಿಸಿದ ಬಳಿಕ ಪ್ರತಿ 13 – 15 ನಿಮಿಷಕ್ಕೆ ಒಂದು ರೈಲು ಸೇವೆ ಪ್ರಯಾಣಿಕರಿಗೆ ಲಭ್ಯವಾಗಲಿದೆ. ಇದರಿಂದ ಪ್ರಯಾಣಿಕರ ಕಾಯುವ ಅವಧಿ ಸಾಕಷ್ಟು ತಗ್ಗಲಿದೆ.

ಪ್ರತಿ 3 ನಿಮಿಷಕ್ಕೊಂದು ರೈಲು ಸೇವೆ ಲಭ್ಯ ಈ ಮಾರ್ಗಕ್ಕೆ ಇನ್ನೂ 10 ರೈಲುಗಳು (60 ಬೋಗಿ) ಬರಬೇಕಾಗಿದ್ದು, ಮುಂದಿನ ವರ್ಷದ ಮಾರ್ಚ್ ವೇಳೆಗೆ ಎಲ್ಲಾ ಬೋಗಿಗಳು ಲಭ್ಯವಾಗಲಿವೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ. 15 ರೈಲುಗಳು ಸಂಚಾರ ಆರಂಭಿಸಿದ ನಂತರ ಪ್ರಯಾಣಿಕರಿಗೆ ಪ್ರತಿ 3 ನಿಮಿಷಕ್ಕೊಂದು ರೈಲು ಸೇವೆ ಲಭ್ಯವಾಗಲಿದೆ.

ಸದ್ಯ ಈ ಮಾರ್ಗದಲ್ಲಿ ಚಾಲಕರ ಮೂಲಕವೇ ರೈಲುಗಳು ಸಂಚಾರ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಚಾಲಕರಹಿತ ಸೇವೆಗೆ ಚಾಲನೆ ಸಿಗಲಿದೆ. ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌, ನಮ್ಮ ಮೆಟ್ರೋ ಹಳದಿ ಮಾರ್ಗ ವಿಸ್ತರಣೆ, ಎಲ್ಲಿಂದ ಎಲ್ಲಿಗೆ? ಹಳದಿ ಮಾರ್ಗದಲ್ಲಿ 85 ಸಾವಿರ ಮಂದಿ ನಿತ್ಯ ಸಂಚಾರ 19 ಕಿ.ಮೀ.ನ ಈ ಮಾರ್ಗಕ್ಕೆ ಆ.10 ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.

ಪ್ರಸ್ತುತ ಈ ಮಾರ್ಗದಲ್ಲಿ 85 ಸಾವಿರಕ್ಕೂ ಹೆಚ್ಚು ಜನರು ನಿತ್ಯ ಪ್ರಯಾಣ ಮಾಡುತ್ತಾರೆ. ರೈಲು ಬೋಗಿ ಪರಿಶೀಲಿಸಿದ ಬಿಎಂಆರ್‌ಸಿಎಲ್ ಎಂಡಿ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಡಾ. ಜೆ ರವಿಶಂಕರ್ ಹೆಬ್ಬಗೋಡಿ ಡಿಪೋಗೆ ಭೇಟಿ ನೀಡಿ ಹಳದಿ ಮಾರ್ಗಕ್ಕೆ ಆಗಮಿಸಿದ 5ನೇ ರೈಲು ಸೆಟ್ ಅನ್ನು ಪರಿಶೀಲಿಸಿದರು.

ಅವರು ವಾಣಿಜ್ಯ ಕಾರ್ಯಾಚರಣೆಗಾಗಿ ಈ ರೈಲು ಸೆಟ್ ಅನ್ನು ಆದ್ಯತೆಯ ಮೇಲೆ ಸೇರ್ಪಡೆಗೊಳಿಸಲು ಅಧಿಕಾರಿಗಳೊಂದಿಗೆ ವಿವರವಾದ ಚರ್ಚೆ ನಡೆಸಿದರು. ಕಡ್ಡಾಯ ಪರೀಕ್ಷೆ ಮತ್ತು ಸೇವಾ ಪ್ರಯೋಗಗಳ ನಂತರ ರೈಲು ಜನ ಸಂಚಾರಕ್ಕೆ ಲಭ್ಯವಾಗಲಿದೆ. ಮಾರ್ಗದಲ್ಲಿ ರೈಲುಗಳ ಕಾರ್ಯಾಚರಣೆಯನ್ನು 15 ನಿಮಿಷಗಳ ಆವರ್ತನದಲ್ಲಿ ನಡೆಸಲು ಅನುಕೂಲವಾಗುತ್ತದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.”

Leave a comment

Leave a Reply

Your email address will not be published. Required fields are marked *

Related Articles

ಪಿಯುಸಿ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಡಿಜಿಟಲ್ ಅಂಕಪಟ್ಟಿ ಲಭ್ಯ : ಸಚಿವ ಮಧು ಬಂಗಾರಪ್ಪ

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಮುದ್ರಿತ ಅಂಕಪಟ್ಟಿ ನೀಡುವುದಿಲ್ಲ....

ಸನ್ನಡತೆಯ ಆಧಾರದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ರಾಜ್ಯದ ಕಾರಾಗೃಹಗಳಲ್ಲಿರುವ 30 ಕೈದಿಗಳ ಬಿಡುಗಡೆ ಆದೇಶ

“ಜೀವಾವಧಿ ಶಿಕ್ಷೆಗೆ ಗುರಿಯಾಗಿ ರಾಜ್ಯದ ಬೇರೆಬೇರೆ ಕಾರಾಗೃಹಗಳಲ್ಲಿರುವ 30 ಕೈದಿಗಳನ್ನು ಸನ್ನಡತೆಯ ಆಧಾರದಲ್ಲಿ ಬಿಡುಗಡೆಗೊಳಿಸಿ ರಾಜ್ಯ...

ಬಳ್ಳಾರಿ ಬ್ಯಾನರ್ ಗಲಾಟೆ ನಿನ್ನೆ ಅಧಿಕಾರ ಸ್ವೀಕರಿಸಿದ್ದ ಬಳ್ಳಾರಿ ಎಸ್ಪಿ ಪವನ್ ನೆಜ್ಜೂರ್ ಅಮಾನತು

ಬೆಂಗಳೂರು: ಬ್ಯಾನರ್ ಕಟ್ಟುವ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಕಾಂಗ್ರೆಸ್ ಕಾರ್ಯಕರ್ತ ಗುಂಡೇಟಿಗೆ ಬಲಿಯಾದ...

2025 ರಲ್ಲಿ ರಾಜ್ಯದಲ್ಲಿ ನಿರ್ಲಕ್ಷದ ಚಾಲನೆಗಾಗಿ 5947 ವಾಹನ ಚಾಲನಾ ಪರವಾನಿಗೆ ರದ್ದು

ಬೆಂಗಳೂರು: ಕರ್ನಾಟಕದ ಸಾರಿಗೆ ಇಲಾಖೆಯು 2025 ರಲ್ಲಿ ಕರ್ನಾಟಕದಾದ್ಯಂತ 5,947 ಚಾಲನಾ ಪರವಾನಗಿಗಳನ್ನು (DL) ಅಮಾನತುಗೊಳಿಸಿದೆ....