ಮೈಸೂರು ದಸರಾ ಜಂಬುಸವಾರಿ ತಾಯಿ ಚಾಮುಂಡೇಶ್ವರಿ ಮೆರವಣಿಗೆ ಯಲ್ಲಿ ಉಡುಪಿ ಜಿಲ್ಲಾ ತಂಡಕ್ಕೆ ಪ್ರಥಮ ಬಹುಮಾನ ದ ಗೌರವ

ಈ ಭಾರಿ ಮೈಸೂರು ದಸರಾ ಮೆರವಣಿಗೆ ಉಡುಪಿ ಜಿಲ್ಲೆಯಲ್ಲಿ ವಿಭಿನ್ನವಾದ ಹುಲಿವೇಷ ಸಾಂಸ್ಕೃತಿಕ ಕಲೆಯನ್ನ ರಾಜ್ಯಾದ್ಯಂತ ಪರಿಚಯಿಸುವ ಉದ್ದೇಶದಿಂದ ಉಡುಪಿ ಜಿಲ್ಲಾಧಿಕಾರಿಯಾದ ಶ್ರೀಮತಿ ಟಿ ಕೆ ಸ್ವರೂಪ ಅವರು ಉಡುಪಿ ಜಿಲ್ಲೆಯಿಂದ ಹಲವಾರು ತಂಡಗಳ ನಡುವೆ ಇಷ್ಟ ಮಹಾಲಿಂಗೇಶ್ವರ ಹುಲಿವೇಷ ಕುಣಿತ ತಂಡವನ್ನು ದಸರಾ ಮೆರವಣಿಗೆಗೆ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸುವಂತೆ ಕಳಿಸಿದ್ದರು

ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಪಡುಬೈಲೂರು ಶ್ರೀ ಇಷ್ಟ ಮಹಾಲಿಂಗೇಶ್ವರ ಹುಲಿ ವೇಷ ತಂಡವು ಮೈಸೂರಿನಲ್ಲಿ ನಡೆದ ಈ ವರ್ಷದ ದಸರಾ ಮಹೋತ್ಸವದಲ್ಲಿ ಭಾಗವಹಿಸಿ, 118 ಕಲಾ ತಂಡಗಳ ಪೈಕಿ ಪ್ರಥಮ ಬಹುಮಾನವನ್ನು ಪಡೆದಿದೆ

Leave a comment