ಪೋಲೆಂಡ್: ರಷ್ಯಾ-ಉಕ್ರೇನ್ ಸಂಘರ್ಷ ಮುಂದುವರಿದಿದ್ದ, ಭಾನುವಾರ ರಷ್ಯಾ ಉಕ್ರೇನ್ ಮೇಲೆ ದೊಡ್ಡ ಪ್ರಮಾಣದ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಕೈವ್ ಸೇರಿದಂತೆ ಹಲವು ನಗರಗಳನ್ನು ಗುರಿಮಾಡಿ, ನಡೆಸಿದ ದಾಳಿಯಲ್ಲಿ ಕೈವ್‌ನಲ್ಲಿ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದರು. ಡಜನ್‌ಗಟ್ಟಲೆ ಜನ ಗಾಯಗೊಂಡರು. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಈ ದಾಳಿಯನ್ನು “ಕ್ರೂರ ದಾಳಿಗಳು, ಸಾಮಾನ್ಯ ನಗರಗಳ ವಿರುದ್ಧ ಉದ್ದೇಶಪೂರ್ವಕ, ಉದ್ದೇಶಿತ ಭಯೋತ್ಪಾದನೆ” ಎಂದು ಹೇಳಿದ್ದಾರೆ. ರಷ್ಯಾ 12 ಗಂಟೆಗಳಿಗೂ ಹೆಚ್ಚು ಕಾಲ ದಾಳಿ ನಡೆಸಿದ್ದು, ಸುಮಾರು 600 ಡ್ರೋನ್‌ಗಳು ಮತ್ತು ಡಜನ್‌ಗಟ್ಟಲೆ ಕ್ಷಿಪಣಿಗಳನ್ನು ಹಾರಿಸಿದೆ. ರಷ್ಯಾ ತನ್ನ ದಾಳಿಗಳು ಮಿಲಿಟರಿ ಗುರಿಗಳ ಮೇಲೆ ಮಾತ್ರ ಎಂದು ಹೇಳಿದೆ. ಆದರೆ ಉಕ್ರೇನ್ ವಸತಿ ಕಟ್ಟಡಗಳು, ಹೃದ್ರೋಗ ಕೇಂದ್ರ ಮತ್ತು ಶಿಶುವಿಹಾರಕ್ಕೂ ಹಾನಿಯಾಗಿದೆ ಎಂದು ವರದಿ ಮಾಡಿದೆ.

ಈ ರಾತ್ರಿಯ ದಾಳಿ ಕೈವ್ ಮೇಲೆ ತೀವ್ರವಾಗಿತ್ತು. ಕಳೆದ ತಿಂಗಳು ನಡೆದ ದಾಳಿಯ ನಂತರ ಇದು ಮೊದಲ ದೊಡ್ಡ ಬಾಂಬ್ ದಾಳಿಯಾಗಿದೆ. ಕಳೆದ ತಿಂಗಳ ದಾಳಿಯಲ್ಲಿ ಕನಿಷ್ಠ 21 ಜನರು ಸಾವನ್ನಪ್ಪಿದ್ದರು. ನ್ಯಾಟೊ ಒಕ್ಕೂಟ, ರಷ್ಯಾವು ವಾಯುಪ್ರದೇಶ ಉಲ್ಲಂಘನೆ ಮಾಡುತ್ತಿದೆ ಎಂದು ಆರೋಪಿಸಿದೆ. ಇದರ ನಂತರ ಪೋಲೆಂಡ್ ತನ್ನ ವಾಯುಪ್ರದೇಶವನ್ನು ಸುರಕ್ಷಿತಗೊಳಿಸಲು ಜೆಟ್‌ಗಳನ್ನು ಹಾರಿಸಿತು. ಯುದ್ಧವನ್ನು ಕೊನೆಗೊಳಿಸಲು ರಾಜತಾಂತ್ರಿಕ ಪ್ರಯತ್ನಗಳು ಸದ್ಯಕ್ಕೆ ಸ್ಥಗಿತಗೊಂಡಿವೆ.
ರಷ್ಯಾ 2022ರ ಫೆಬ್ರವರಿಯಲ್ಲಿ ಪ್ರಾರಂಭಿಸಿದ ಆಕ್ರಮಣವನ್ನು ಮುಂದುವರಿಸುವುದಾಗಿ ಘೋಷಿಸಿದೆ. ಅಲ್ಲದೆ ದಾಳಿಗಳ ನಂತರ ಝೆಲೆನ್ಸ್ಕಿ, “ಮಾಸ್ಕೋ ಹೋರಾಟ ಮತ್ತು ಕೊಲ್ಲುವುದನ್ನು ಮುಂದುವರಿಸಲು ಬಯಸುತ್ತದೆ. ಇದು ಪ್ರಪಂಚದಿಂದ ಕಠಿಣ ಒತ್ತಡಕ್ಕೆ ಅರ್ಹವಾಗಿದೆ” ಎಂದು ಹೇಳಿದ್ದಾರೆ. ರಷ್ಯಾ ತನ್ನ ದಾಳಿಗಳು ಮಿಲಿಟರಿ ಗುರಿಗಳ ಮೇಲೆ ಮಾತ್ರ ಎಂದು ಹೇಳಿಕೊಂಡಿದೆ. ಆದರೆ ಉಕ್ರೇನ್‌ನ ವಿದೇಶಾಂಗ ಸಚಿವಾಲಯವು ವಸತಿ ಕಟ್ಟಡಗಳ ಜೊತೆಗೆ ಹೃದ್ರೋಗ ಕೇಂದ್ರ ಮತ್ತು ಶಿಶುವಿಹಾರವೂ ಹಾನಿಗೊಳಗಾಗಿವೆ ಎಂದು ವರದಿ ಮಾಡಿದೆ. ಕೈವ್‌ನಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಲ್ಲದೆ, ಝಪೊರಿಝಿಯಾ, ಒಡೆಸ್ಸಾ, ಸುಮಿ, ಚೆರ್ಕಾಸಿ ಮತ್ತು ಮೈಕೋಲೈವ್ ಪ್ರದೇಶಗಳಲ್ಲಿಯೂ ಸಾವುನೋವುಗಳು ವರದಿಯಾಗಿವೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ.

1000 ದಿನ ಪೂರೈಸಿದ ರಷ್ಯಾ-ಉಕ್ರೇನ್ ಯುದ್ಧ; ಪಟ್ಟು ಸಡಿಲಿಸದ ರಷ್ಯಾ ಅಧ್ಯಕ್ಷ ಪುಟಿನ್ ಝಪೊರಿಝಿಯಾ ಗವರ್ನರ್ ಇವಾನ್ ಫೆಡೋರೊವ್, ನಗರವು “ಕನಿಷ್ಠ ನಾಲ್ಕು ಬಾರಿ” ದಾಳಿಗೊಳಗಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ಘಟನೆಯಲ್ಲಿ 42 ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದರು. ಈ ಪ್ರದೇಶದಲ್ಲಿ ರಷ್ಯಾದ ನಿಯಂತ್ರಣದಲ್ಲಿರುವ ಪ್ರಮುಖ ಪರಮಾಣು ವಿದ್ಯುತ್ ಸ್ಥಾವರವಿದೆ.
ಪೋಲೆಂಡ್‌ನ ಸಶಸ್ತ್ರ ಪಡೆಗಳು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರಕಟಿಸಿದ್ದು, ಫೈಟರ್ ಜೆಟ್‌ಗಳನ್ನು ಹಾರಿಸಲಾಗಿದೆ ಮತ್ತು ನೆಲ ಆಧಾರಿತ ವಾಯು ರಕ್ಷಣಾ ವ್ಯವಸ್ಥೆಗಳನ್ನು ಹೆಚ್ಚಿನ ಎಚ್ಚರಿಕೆಯಲ್ಲಿ ಇರಿಸಲಾಗಿದೆ ಎಂದು ಹೇಳಿದೆ. ಇತ್ತೀಚಿನ ವಾರಗಳಲ್ಲಿ, ಹಲವಾರು ಯುರೋಪಿಯನ್ ದೇಶಗಳು ರಷ್ಯಾದ ಡ್ರೋನ್ ಮತ್ತು ಜೆಟ್ ಒಳನುಗ್ಗುವಿಕೆಗಳನ್ನು ಆರೋಪಿಸಿವೆ. ನ್ಯಾಟೊ ಇದನ್ನು ತನ್ನ ಸಿದ್ಧತೆಯ ಪರೀಕ್ಷೆ ಎಂದು ವಿವರಿಸಿದೆ. ರಷ್ಯಾ ಅಂತಹ ವಾಯುಪ್ರದೇಶ ಉಲ್ಲಂಘನೆಗಳನ್ನು ಅಥವಾ ನ್ಯಾಟೊ ಸದಸ್ಯರ ಮೇಲೆ ಯಾವುದೇ ದಾಳಿಯನ್ನು ನಿರಾಕರಿಸಿದೆ.

Leave a comment