ಇಷ್ಟ ಮಹಾಲಿಂಗೇಶ್ವರ ಹುಲಿವೇಷ ತಂಡದಿಂದ ದಶಮಾನೋತ್ಸವ ಸಂಭ್ರಮಾಚರಣೆ

45

ಉಡುಪಿ ಪಡುಬೈಲೂರು ಇಷ್ಟ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಕಳೆದ ಹತ್ತು ವರ್ಷಗಳಿಂದ ಇಷ್ಟ ಮಹಾಲಿಂಗೇಶ್ವರಹುಲಿವೇಷ ತಂಡ ಪ್ರಾರಂಭಗೊಂಡು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಹುಲಿ ವೇಷ ಕುಣಿತ ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸಿಕೊಂಡು ಬಂದು ಇದೀಗ ಇಂದು ತನ್ನ ದಶಮಾನೋತ್ಸವ ಸಂಭ್ರಮವನ್ನು ಆಚರಣೆಗೆ ಇಷ್ಟ ಮಹಾಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಭೀಮಾ ಜುವೆಲರ್ಸ್ ಪ್ರಾಯೋಜಕತ್ವದ ವೇದಿಕೆಯಲ್ಲಿ ದಶಮಾನೋತ್ಸವ ಕಾರ್ಯಕ್ರಮ ನಡೆಯಿತು

ಕಾರ್ಯಕ್ರಮವನ್ನು ಶೀರೂರು ಮಠಾಧೀಶರಾದ ಶ್ರೀ ಶ್ರೀ ವೇದ ವರ್ಧನ ಸ್ವಾಮೀಜಿಯವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ಆಶೀರ್ವಚನ ಮಾಡಿದ ಶ್ರೀ ಶ್ರೀ ವೇದ ವರ್ಧನ ತೀರ್ಥ ಸ್ವಾಮೀಜಿ ಯಾವುದೇ ತಂಡವನ್ನು ಸತತವಾಗಿ ಮುಂದುವರಿಸಿಕೊಂಡು ಹೋಗಿ ದಶಮಾನೋತ್ಸವ ಸಂಭ್ರಮಾಚರಣೆ ಮಾಡುವುದು ಸುಲಭ ಸಾಧನೆ ಅಲ್ಲ ಹೀಗಿದ್ದು ಕೂಡ ಇಷ್ಟ ಮಹಾಲಿಂಗೇಶ್ವರ ಹುಲಿ ವೇಷ ತಂಡ ಶಿಸ್ತು ಬದ್ಧ ಸಾಂಪ್ರದಾಯಿಕ ಹುಲಿವೇಷ ತಂಡವಾಗಿದ್ದು ಎಲ್ಲರ ಮೆಚ್ಚುಗೆ ಮಾತ್ರವಾಗಿದೆ ಈ ತಂಡಕ್ಕೆ ಸದಾ ಯಶಸ್ಸು ಸಿಗಲಿ ಎಂದು ಹಾರೈಸಿದರು

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿಗಳಾದ ಡಾ ಸ್ವರೂಪ ಟಿ ಕೆ ಅವರು ಉಪಸ್ಥಿತರಿದ್ದು ದಶಮಾನೋತ್ಸವ ಸಂಭ್ರಮಾಚರಣೆಯಲ್ಲಿ ಸದಸ್ಯರು ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟು ಶುಭ ಹಾರೈಸಿದರು

ಈ ಕಾರ್ಯಕ್ರಮದಲ್ಲಿ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿಯ ಸಂಸ್ಥಾಪಕರಾದ ಶಿವಕುಮಾರ್ ಕರ್ಜೆ, ಸಮಾಜ ಸೇವಕರಾದ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ ದೇವಸ್ಥಾನದ, ತಂತ್ರಿಗಳಾದ ಶ್ರೀ ಕೃಷ್ಣ ಮೂರ್ತಿ ತಂತ್ರಿ ಶ್ರೀ ವಿಠಲ ತಂತ್ರಿ,ನ್ಯಾಯವಾದಿ ಮಟ್ಟಾರ್ ರತ್ನಾಕರ ಹೆಗ್ಡೆ ಗಾಂಧಿ ಆಸ್ಪತ್ರೆಯ ಡಾ. ಹರಿಶ್ಚಂದ್ರ, ಹಾಗೂ ಕಾಪು ಶಾಸಕರಾದ ಗುರ್ಮೆ ಸುರೇಶ ಶೆಟ್ಟಿ , ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ, ಶುಭ ಹಾರೈಸಿದರು

ಹಲವಾರು ವರ್ಷಗಳಿಂದ ಕಲಾ ಸಾಧಕರಾಗಿ ಕಾರ್ಯನಿರ್ವಹಿಸುತ್ತಿದ್ದ ಗಣ್ಯರನ್ನು ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ವಿಜಯ ಪೂಜಾರಿ ಬಳ್ಳಾಲ್ ಮೊಬೈಲ್ಸ್ ನ ಮಾಲಕರಾದ ಸಂದೇಶ ಬಳ್ಳಾಲ್, ರೂಪೇಶ್ ಕಲ್ಮಾಡಿ ಉಪಸ್ಥಿತರಿದ್ದರು

ಪ್ರಾಸ್ತಾವಿಕ ಮಾತನಾಡಿದ ಗೌತಮ್ ಕೆ ಬಿ 10 ವರ್ಷಗಳ ಕಾಲ ತಂಡ ನಡೆದು ಬಂದ ರೀತಿಯನ್ನು ವಿವರಿಸಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು

ಕಾರ್ಯಕ್ರಮದ ಮೊದಲ ಅಂಗವಾಗಿ ಮಧ್ವವಲ್ಲಭ ಆಚಾರ್ಯ ಸ್ವಾಗತಿಸಿದರು ಅಕ್ಷಯ್ ಹೆಬ್ಬಾರ್ ನಿರೂಪಿಸಿ ಸಂದೀಪ್ ಮಂಜ ಧನ್ಯವಾದ ಸಮರ್ಪಿಸಿದರು

Leave a comment

Leave a Reply

Your email address will not be published. Required fields are marked *

Related Articles

ಕನ್ನಡ ಶಾಲೆ ಉಳಿಸಿ–ಬೆಳೆಸುವ ನಿಟ್ಟಿನಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಹೋರಾಟ ಶ್ಲಾಘನೀಯ – ಕರವೇ ಉಡುಪಿ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ

ಉಡುಪಿ ಜಿಲ್ಲೆ ಬ್ರಹ್ಮಾವರ ವಲಯದ ಅಧೀನಕ್ಕೆ ಒಳಪಡುವ ಸೇಕ್ರೆಡ್ ಹಾರ್ಟ್ ಅನುದಾನಿತ ಹಿರಿಯ ಪ್ರಾಥಮಿಕ ಕನ್ನಡ...

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಹರಿದು ಬಂದ ಜನ ಸಾಗರ ಜನವರಿ ತಿಂಗಳಲ್ಲಿ ಕಾಣಿಕೆಹುಂಡಿಯಲ್ಲಿ ದಾಖಲೆಯ ಮೊತ್ತ ಸಂಗ್ರಹ

ಕೊಲ್ಲೂರು: ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಜನವರಿಯಲ್ಲಿ 1.39...

1997ರ ಮಂಗಳೂರು ಡಬಲ್ ಮರ್ಡರ್ ಪ್ರಕರಣ: 29 ವರ್ಷಗಳ ಬಳಿಕ ಕುಖ್ಯಾತ ‘ದಂಡುಪಾಳ್ಯ ಗ್ಯಾಂಗ್’ ಸದಸ್ಯನ ಬಂಧನ

ಮಂಗಳೂರು: ಮಂಗಳೂರು ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1997ರಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ...

ಮಂಗಳೂರು ಬಾಂಗ್ಲಾದೇಶದ ಪ್ರಜೆಯೆಂದು ತಪ್ಪು ತಿಳಿದು ಅಸ್ಸಾಂ ಮೂಲದ ಕಾರ್ಮಿಕರ ಮೇಲೆ ಹಲ್ಲೆ

ಬಾಂಗ್ಲಾದೇಶದ ಪ್ರಜೆ ಎಂದು ಶಂಕಿಸಿ ಜಾರ್ಖಂಡ್‌ನ ವಲಸೆ ಕಾರ್ಮಿಕನೊಬ್ಬನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ...