ಚಡ್ಡಿ ಗ್ಯಾಂಗ್ ನಿಂದ ಮನೆಕಳ್ಳತನಕ್ಕೆ ಯತ್ನ ಅಮೇರಿಕಾ ದಿಂದ ಸಿಸಿ ಟಿವಿ ಗಮನಿಸಿ  ತಂದೆ ತಾಯಿಯನ್ನು ರಕ್ಷಿಸಿದ ಮಗಳು

49

ಬಾಗಲಕೋಟೆ: ಟೆಕ್ಕಿ ಯುವತಿಯೊಬ್ಬರು ಅಮೆರಿಕದಲ್ಲಿ ಕುಳಿತೇ ತನ್ನ ಮನೆಯಲ್ಲಿ ನಡೆಯಬಹುದಾದ ಕಳ್ಳತನವನ್ನು ತಪ್ಪಿಸಿದ್ದಾರೆ. ಮುಧೋಳ ನಗರದ ಸಿದ್ರಾಮೇಶ್ವರ ಕಾಲೋನಿಯಲ್ಲಿ ನೆಲೆಸಿರುವ ನಿವೃತ್ತ ಎಂಜಿನಿಯರ್‌ ಹನಮಂತಗೌಡ ಅವರ ಪುತ್ರಿ ಶೃತಿ ಅಮೆರಿಕದಲ್ಲಿ ಉದ್ಯೋಗದಲ್ಲಿದ್ದಾರೆ.

ವಿದೇಶದಲ್ಲಿದ್ದರೂ ಸಮಯಪ್ರಜ್ಞೆ ಮೆರೆಯುವ ಮೂಲಕ ಮನೆಗೆ ನುಗ್ಗಿದ್ದ ಕಳ್ಳರನ್ನು ಓಡಿಸುವಲ್ಲಿ ಶೃತಿ ಯಶಸ್ವಿಯಾಗಿದ್ದಾರೆ. ಕೆಲ ವರ್ಷಗಳ ಹಿಂದೆ ಸ್ವದೇಶ ಆಗಮಿಸಿದ್ದಾಗ ಶೃತಿ ಮನೆಗೆ ಸಿಸಿ ಕ್ಯಾಮೆರಾ ಅಳವಡಿಸಿದ್ದರು. ಅಳವಡಿಸಿದ್ದು ಮಾತ್ರವಲ್ಲ ಅದರ ದೃಶ್ಯ ತನ್ನ ಮೊಬೈಲಿಗೆ ಬರುವಂತೆ ಸಿಂಕ್‌ ಮಾಡಿದ್ದರು. ಮಂಗಳವಾರ ತಡರಾತ್ರಿ 1 ರಿಂದ 2 ಗಂಟೆಯ ಮಧ್ಯೆ ಚಡ್ಡಿ ಗ್ಯಾಂಗ್ ಇಬ್ಬರು ಹನಮಂತಗೌಡ ಸಂಕಪ್ಪನವರ್ ಮನೆಗೆ ನುಗ್ಗಿದ್ದಾರೆ.

ಮನೆಗೆ ಸಿಸಿಟಿವಿ ಕ್ಯಾಮರಾ ಹಾಕಿಸಿದ್ದಾರೆ. ಹನುಮಂತಗೌಡರ ಅಮೆರಿಕದಲ್ಲಿರುವ ಪುತ್ರಿ ಶ್ರುತಿ ತನ್ನ ಮೊಬೈಲ್ಗೆ ಸಿಸಿ ಕ್ಯಾಮರಾ ಕನೆಕ್ಟ್ ಮಾಡಿಕೊಂದ್ದು, ಅಲ್ಲಿಂದಲೇ ಮನೆಯವರನ್ನು ಗಮನಿಸುತ್ತಿದ್ದರು ಮುಧೋಳದಲ್ಲಿ ಮಧ್ಯರಾತ್ರಿ ಆಗಿದ್ದರೆ ಅಮೆರಿಕದಲ್ಲಿ ಮಧಾಹ್ನದ 3:30ರ ಸಮಯವದು. ಹೀಗೆ ಮೊಬೈಲ್‌ ನೋಡುತ್ತಿದ್ದಾಗ ಮನೆಗೆ ಕಳ್ಳರು ನುಗ್ಗಿದ ದೃಶ್ಯವನ್ನು ನೋಡಿ ಕೂಡಲೇ ಶೃತಿ ಪೋಷಕರಿಗೆ ಕರೆ ಮಾಡಿದ್ದಾರೆ.

ತಕ್ಷಣ ಎಚ್ಚೆತ್ತ ಪೋಷಕರು ಬಾಗಿಲು ತೆರೆಯದೇ ಮನೆಯ ಎಲ್ಲಾ ದೀಪ ಆನ್‌ ಮಾಡಿ ಕೂಗಾಡಿದ್ದಾರೆ. ದಿಢೀರ್‌ ಮನೆಯ ಲೈಟ್‌ ಆನ್‌ ಆಗಿದ್ದನ್ನು ಕಂಡು ಕಳ್ಳರು ಶಾಕ್‌ಗೆ ಒಳಗಾಗಿ ಸ್ಥಳದಿಂದ ಪರಾರಿಯಾಗಿದ್ದಾರೆ. ಎಚ್ಚೆತ್ತ ಹನುಮಂತಗೌಡ, ಮನೆ ಬಾಗಿಲು ತೆರೆದಾಗ ಚಡ್ಡಿ ಗ್ಯಾಂಗ್ ಅಲ್ಲಿಂದ ಕಾಲ್ಕಿತ್ತಿದೆ. ಒಬ್ಬನ ಮುಖಕ್ಕೆ ಮಂಕಿ ಕ್ಯಾಪ್, ಮತ್ತೊಬ್ಬನ ಮುಖದಲ್ಲಿ ಮಾಸ್ಕ್, ಮೈಮೇಲೆ ಶರ್ಟ್ ಇದೆ ಆದರೆ ಪ್ಯಾಂಟೇ ಇಲ್ಲ. ಇರೋದು ಬರೀ ಚಡ್ಡಿ ಧರಿಸಿದ್ದರು.

ಸದ್ಯ, ಅಮೆರಿಕದಲ್ಲಿ ನೆಲೆಸಿದ್ದ ಸಾಫ್ಟ್ವೇರ್ ಎಂಜಿನಿಯರ್ ಶ್ರುತಿ ಸಮಯಪ್ರಜ್ಞೆಯಿಂದ ಮನೆ ಕಳ್ಳತನ ತಪ್ಪಿದೆ. ಇದೀಗ ಚಡ್ಡಿ ಗ್ಯಾಂಗ್ ಬಗ್ಗೆ ಕೇಸ್ ದಾಖಲಿಸಿಕೊಂಡಿರುವ ಮುಧೋಳ ಪೊಲೀಸರು, ತನಿಖೆ ಆರಂಭಿಸಿದ್ದಾರೆ. ಒಟ್ಟಿನಲ್ಲಿ ಮುಧೋಳ ಕಳ್ಳತನ ಪ್ರಕರಣ ಅಮೆರಿಕದಿಂದ ಬಯಲಾಗಿದ್ದು, ಪೊಲೀಸರು ಚಡ್ಡಿ ಗ್ಯಾಂಗ್ ಅನ್ನು ಆದಷ್ಟು ಬೇಗ ಹಿಡಿದು, ಮುಂದೆ ಆಗಬಹುದಾದ ಇನ್ನಷ್ಟು ಕಳ್ಳತನ ಪ್ರಕರಣಗಳನ್ನು ತಡೆಯಬೇಕಾಗಿದೆ.

Leave a comment

Leave a Reply

Your email address will not be published. Required fields are marked *

Related Articles

ವಂದೇ ಮಾತರಂ’ ಹಾಡುವುದು ಕಡ್ಡಾಯ: ಏಕಪಕ್ಷೀಯ ಮತೀಯ ಅಜೆಂಡಕ್ಕೆ ವಿರೋಧ:: ಜಮಿಯತ್ ಉಲಮಾ-ಇ -ಹಿಂದ್

ನವದೆಹಲಿ: ರಾಷ್ಟ್ರೀಯ ಗೀತೆ ವಂದೇ ಮಾತರಂ ಗೀತೆ ಕುರಿತು ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿ...

ಸೇನಾ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಕಲು ಹದಿನೆಂಟು ಅಭ್ಯರ್ಥಿಗಳ ಬಂಧನ

“ಬೆಂಗಳೂರು: ಇತ್ತೀಚೆಗೆ ನಡೆದ ಸೇನಾ ಗ್ರೂಪ್ ಸಿ ನೇಮಕಾತಿ ಪರೀಕ್ಷೆಗೆ ಹಾಜರಾದ ಹದಿನೆಂಟು ಅಭ್ಯರ್ಥಿಗಳನ್ನು ವಂಚನೆ...

ಬಂಧನ ಭೀತಿಯಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜ್ ಹೈಕೋರ್ಟ್ ಬಿಗ್ ಶಾಕ್  ನಿರೀಕ್ಷಣಾ ಜಾಮೀನು ಅರ್ಜಿ ವಜಾ

“ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಭೈರತಿ ಬಸವರಾಜ್...

ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಪ್ರಾಥಮಿಕ ವಿಚಾರಣೆ ನಡೆಸದೆ ಏಕಾಏಕಿ” ಎಫ್‌ಐಆರ್‌ ದಾಖಲಿಸದಂತೆ ಹೊಸ ಮಾರ್ಗಸೂಚಿ

ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ “ಪ್ರಾಥಮಿಕ ವಿಚಾರಣೆ ನಡೆಸದೆ ಏಕಾಏಕಿ” ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತಿದೆ ಎಂಬುದನ್ನು ಗಮನಿಸಿದ...