ದಿ.ಶರಣ್ ಶೆಟ್ಟಿ ತೋಕೂರು ಮತ್ತು ದಿ.ಶಿವರಾಜ್ ಕೋಡಿಕೆರೆಯವರ ಸ್ಮರಣಾರ್ಥ ಕೋಡಿಕೆರೆಯಲ್ಲಿ ರಕ್ತದಾನ ಕಾರ್ಯಕ್ರಮ

86

ಸುರತ್ಕಲ್: ಮಂಜಣ್ಣ ಸೇವಾ ಬ್ರಿಗೇಡ್ (ರಿ) ಟ್ರಸ್ಟ್ ಮಂಗಳೂರು ಹಾಗೂ ಗೆಳೆಯರ ಬಳಗ ಸುರತ್ಕಲ್ ರವರ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರ

ದಿ.ಶರಣ್ ಶೆಟ್ಟಿ ಹಾಗೂ ದಿ.ಶಿವರಾಜ್ ಕೋಡಿಕೆರೆ ಇವರ ಸ್ಮರಣಾರ್ಥ ಸಮಸ್ತ ಸ್ನೇಹಿತರ ಹಾಗೂ ಎ.ಜೆ ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ
ಮೂರನೇ ವರ್ಷದ ಬೃಹತ್ ರಕ್ತದಾನ ಶಿಬಿರವು ಭಾನುವಾರ ಹಿಂದೂ ಅನುದಾನಿತ ಪ್ರಾಥಮಿಕ ಶಾಲೆ ಪೆರ್ಮುದೆ ಕೋಡಿಕೆರೆ ಇಲ್ಲಿ ನೆರವೇರಿತು.

ರಕ್ತದಾನ ಶಿಬಿರದಲ್ಲಿ 150 ಕ್ಕೂ ಅಧಿಕ ದಾನಿಗಳು ರಕ್ತದಾನ ಮಾಡಿ ಅಗಲಿದ ದಿವ್ಯ ಚೇತನಗಳಿಗೆ ಭಾವಪೂರ್ಣ ಶೃದ್ದಾಂಜಲಿ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಪೆರ್ಮುದೆ ಹಿಂದೂ ಅನುದಾನಿತ ಶಾಲೆಯ ಸಂಚಾಲಕರಾದ ರಮೇಶ್ ರಾವ್, ಮಾಧವ ಸುವರ್ಣ ಧರ್ಮದರ್ಶಿಗಳು ಕೊರಗಜ್ಜ ಸನ್ನಿಧಿ ತೋಕೂರು, ಕೋಡಿಕೆರೆ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಭಾಗ್ಯಚಂದ್ರ ರಾವ್,

ಎ.ಜೆ ಬ್ಲಡ್ ಬ್ಯಾಂಕ್ ಸಂಸ್ಥೆಯ ನಿರ್ವಾಹಕರಾದ ಗೋಪಾಲಕೃಷ್ಣ, ದಿವಂಗತ ಶರಣ್ ಶೆಟ್ಟಿಯವರ ಮಾತೃಶ್ರೀ ಪ್ರೇಮಾ ಶೆಟ್ಟಿ, ದಿವಂಗತ ಶಿವರಾಜ್ ಕೋಡಿಕೆರೆ ಇವರ ಪೋಷಕರಾದ ರಾಜು ಕುಲಾಲ್ ಮತ್ತು ಮಾತೃಶ್ರೀ ವಾರಿಜಾ, ಗೆಳೆಯರ ಬಳಗ ಸುರತ್ಕಲ್ ಇದರ ಅಧ್ಯಕ್ಷರಾದ ನಾಗೇಶ್ ಪೂಜಾರಿ, ಶನೀಶ್ವರ ಸೇವಾ ಸಮಿತಿಯ ಅಧ್ಯಕ್ಷರಾದ ಜಯರಾಮ್ ಶೆಟ್ಟಿ, ಜೋಕಟ್ಟೆ ಪಂಚಾಯತ್ ಸದಸ್ಯರಾದ ರವೀಂದ್ರ ತೋಕೂರು ಹಾಗೂ ಪ್ರಮುಖರಾದ ಶ್ರೀಧರ್ ತೋಕೂರು, ಮನೀಶ್ ಕೋಡಿಕೆರೆ ಉಪಸ್ಥಿತರಿದ್ದರು. ಮೊದಲಿಗೆ ದೀಪ ಬೆಳಗಿಸಿ ಬಲಿದಾನಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಲಾಯಿತು.

ಹಿಂದುತ್ವಕ್ಕಾಗಿ ಉಸಿರು ಇರುವವರೆಗೂ ಶ್ರಮಿಸಿ ಎಲ್ಲರೊಂದಿಗೂ ಸ್ನೇಹಜೀವಿಗಳಾಗಿ ಬದುಕಿ ಭವಿಷ್ಯದಲ್ಲಿ ಉಜ್ವಲಿಸಬೇಕಾದ ಮಹಾನ್ ಹಿಂದೂ ಚೇತನ ಜಿಹಾದಿ ದುಷ್ಕರ್ಮಿಗಳ ಷಡ್ಯಂತ್ರಕ್ಕೆ ಬಲಿಯಾದ ಶಿವರಾಜ್ ಕೋಡಿಕೆರೆ ಮತ್ತು ತನ್ನ ಗೆಳೆಯನ ಬಲಿದಾನಕ್ಕೆ ಪ್ರತೀಕಾರದ ಸದ್ಗತಿಯನ್ನು ಸಮರ್ಪಿಸಿದ ಹಿಂದೂ ಕಣ್ಮಣಿ ಶರಣ್ ಶೆಟ್ಟಿ ತೋಕೂರು ಎರಡೂ ಅಮೂಲ್ಯ ರತ್ನಗಳು ಹರೆಯದ ಪ್ರಾಯದಲ್ಲಿಯೇ ವಿಧಿಯ ಕ್ರೂರ ಲೀಲೆಗೆ ಬಲಿಯಾಗಿ ವರುಷಗಳೇ ಸಂದರೂ ನೀವುಗಳು

ಬದುಕಿದಷ್ಟು ದಿನ ಹಿಂದೂ ಸಮಾಜಕ್ಕೆ ಸಮರ್ಪಿಸಿದ ಸಮರ್ಪಣೆ ಚಿರಕಾಲ ಚಿರಾಯುವಾಗಿ ಉಳಿಸಲು ಪ್ರತಿವರ್ಷ ರಕ್ತದಾನ ಮಾಡಲಾಗುತ್ತದೆ ಎಂದು ಶರಣ್ ನ ಆತ್ಮೀಯ ಗೆಳೆಯ ದೀಕ್ಷಿತ್ ಶೆಟ್ಟಿ ತೋಕೂರು ಅವರು ಬೆಳೆದು ಬಂದ ದಾರಿಯನ್ನು ನೆನಪಿಸಿಕೊಂಡರು. ಕಾರ್ಯಕ್ರಮದಲ್ಲಿ ಹಲವು ಸಂಘ ಸಂಸ್ಥೆಯ ಪದಾಧಿಕಾರಿಗಳು ಮತ್ತು ಸಂಸ್ಥೆಯ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎ ಜೆ ಬ್ಲಡ್ ಬ್ಯಾಂಕ್ ನ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು

Leave a comment

Leave a Reply

Your email address will not be published. Required fields are marked *

Related Articles

ಶ್ರೀ ಧೂಮಾವತಿ ಯುವಕ ಮಂಡಲ ನಿಟ್ಟೂರು ಆಶ್ರಯದಲ್ಲಿ ಉಚಿತ ನೇತ್ರ ಹಾಗೂ ಆರೋಗ್ಯ ತಪಾಸಣಾ ಶಿಬಿರ

ಶ್ರೀ ಧೂಮಾವತಿ ಯುವಕ ಮಂಡಲ(ರಿ), ವಿಷ್ಣುಮೂರ್ತಿ ನಗರ ನಿಟ್ಟೂರು, ಶ್ರೀಹರಿ ನೇತ್ರಾಲಯ, ಕಾರ್ತಿಕ್ ಎಸ್ಟೇಟ್ ಅಂಬಲಪಾಡಿ...

ರಾಜ್ಯ ಕಂಬಳ ಅಸೋಸಿಯೇಷನ್ ವತಿಯಿಂದ ಯುವಜನ ಕ್ರೀಡಾ ಸಬಲೀಕರಣ ಇಲಾಖೆ ಪ್ರಧಾನ ಕಾರ್ಯದರ್ಶಿ ಭೇಟಿ

ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಅವರ ನೇತೃತ್ವದಲ್ಲಿ, ರಾಜ್ಯ ಯುವಜನ...

ಬೈಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಶಿಶಿರ್ ಶೆಟ್ಟಿ ಆಯ್ಕೆ

“ಬೈಲೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿ ಬೈಲೂರು ಇಲ್ಲಿಯ ಹಳೆ ವಿದ್ಯಾರ್ಥಿ ಸಂಘವು ಪುನರ್...

ಪೆರ್ಡೂರ್ ಸರಕಾರಿ ಜಮೀನು ಒತ್ತುವರಿ, ಮನೆ ನಿರ್ಮಾಣ, ದೂರು ನೀಡಿದರು ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸಾಮಾಜಿಕ ಕಾರ್ಯಕರ್ತ ನವೀನ್ ಪೆರ್ಡೂರ್ ಆಕ್ರೋಶ

ಬಡವರಿಗೊಂದು ನ್ಯಾಯ ಶ್ರೀಮಂತರಿಗೊಂದು ನ್ಯಾಯ ಎನ್ನುವ ಮಾತು ಪೆರ್ಡೂರ್ ಗ್ರಾಮ ಪಂಚಾಯತ್ ನಲ್ಲಿ ಈಗ ನಿಜವಾಗಿದೆ...