
ಮುಂಬೈ: ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಮಹಾರಾಷ್ಟ್ರದಲ್ಲಿ ಸರ್ಕಾರ ಹೇರಿರುವ ಮಾಂಸ ಮಾರಾಟದ ಮೇಲಿನ ನಿಷೇಧವನ್ನು ವಿರೋಧಿಸಿರುವ ಮಹಾರಾಷ್ಟ್ರ ನವನಿರ್ಮಾಣ ಸೇನಾ ಅಧ್ಯಕ್ಷ ರಾಜ್ ಠಾಕ್ರೆ, ‘ಜನರ ಆಹಾರ ಪದ್ಧತಿಯ ಸರ್ಕಾರ ನಿರ್ಧರಿಸಬಾರದು’ ಎಂದು ಕಿಡಿಕಾರಿದ್ದಾರೆ.
ಮಾಂಸ ಮಾರಾಟದ ಮೇಲಿನ ನಿಷೇಧವನ್ನು ವಿಧಿಸುವ ಹಕ್ಕು ನಾಗರಿಕ ಸಂಸ್ಥೆಗಳಿಗೆ ಇಲ್ಲ ಎಂದು ಹೇಳಿದ ರಾಜ್ ಠಾಕ್ರೆ, ‘ಒಬ್ಬರು ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಎಂದು ಸರ್ಕಾರ ಮತ್ತು ನಾಗರಿಕ ಸಂಸ್ಥೆಗಳು ನಿರ್ಧರಿಸಬಾರದು.
ನಾವು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದ್ದೇವೆ. ಆದರೆ ಏನು ತಿನ್ನಬೇಕೆಂದು ಆಯ್ಕೆ ಮಾಡುವ ಸ್ವಾತಂತ್ರ್ಯ ನಮಗಿಲ್ಲ. ಸ್ವಾತಂತ್ರ್ಯ ದಿನದಂದು ಯಾವುದೇ ನಿಷೇಧವನ್ನು ತರುವುದು ವಿರೋಧಾಭಾಸವಾಗಿದೆ” ಎಂದು ಹೇಳಿದರು.
ಅಂದಹಾಗೆ ಮಹಾರಾಷ್ಟ್ರದ ನಾಗ್ಪುರ, ನಾಸಿಕ್, ಮಾಲೆಗಾಂವ್, ಛತ್ರಪತಿ ಸಂಭಾಜಿನಗರ ಮತ್ತು ಕಲ್ಯಾಣ್-ಡೊಂಬಿವ್ಲಿಯಲ್ಲಿನ ಪುರಸಭೆಗಳು ಆಗಸ್ಟ್ 15 ರಂದು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿರುವ ಕಸಾಯಿಖಾನೆಗಳು ಮತ್ತು ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ನಿರ್ದೇಶಿಸಿ ಆದೇಶಗಳನ್ನು ಹೊರಡಿಸಿವೆ.
ಹಿಂದೂ ಮತ್ತು ಜೈನ ಹಬ್ಬಗಳ ದೃಷ್ಟಿಯಿಂದ ಮಾಂಸ ಮಾರಾಟದ ಮೇಲಿನ ನಿಷೇಧವನ್ನು ಇನ್ನೂ ಕೆಲ ದಿನಗಳ ವರೆಗೆ ಮುಂದುವರೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇದು ಸರ್ಕಾರ ಮತ್ತು ವಿಪಕ್ಷಗಳ ನಡುವಿನ ಜಟಾಪಟಿಗೆ ಕಾರಣವಾಗಿದ್ದು, ಸರ್ಕಾರದ ಮಾಂಸ ಮಾರಾಟ ನಿಷೇಧ ನಡೆಯನ್ನು ವಿಪಕ್ಷಗಳು ಟೀಕಿಸಿವೆ. ಆದರೆ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬುಧವಾರ ಸರ್ಕಾರವು ಜನರ ಆಹಾರ ಆಯ್ಕೆಗಳನ್ನು ನಿಯಂತ್ರಿಸಲು ಆಸಕ್ತಿ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಸ್ವಾತಂತ್ರ್ಯ ದಿನದಂದು ಕಸಾಯಿಖಾನೆಗಳನ್ನು ಮುಚ್ಚುವ ನೀತಿಯನ್ನು ಮೊದಲು 1988 ರಲ್ಲಿ ಜಾರಿಗೆ ತರಲಾಯಿತು ಎಂದು ಬಿಜೆಪಿ ಹೇಳಿದ್ದು, ಈಗ ಎನ್‌ಸಿಪಿ-ಶರದ್‌ಚಂದ್ರ ಪವಾರ್ ನೇತೃತ್ವದ ಶರದ್ ಪವಾರ್ ಅವರು ಮುಖ್ಯಮಂತ್ರಿಯಾಗಿದ್ದಾಗ ಮತ್ತು ವಿರೋಧ ಪಕ್ಷಗಳು ಈ ಬಗ್ಗೆ ಹಿರಿಯ ರಾಜಕಾರಣಿಯನ್ನು ಪ್ರಶ್ನಿಸುತ್ತವೆಯೇ ಎಂದು ಬಿಜೆಪಿ ಪ್ರಶ್ನಿಸಿದೆ.
Leave a comment