ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಶ್ರೀಯುತ ಮಂಜುನಾಥ್ ಭಂಡಾರಿ ಅವರು ನಿಯಮ 72 ಗಮನ ಸೆಳೆಯುವ ಸೂಚನೆಯ ಮೇರೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರ ಹಾಗೂ ಸದಸ್ಯರ ಗೌರವಧನವನ್ನು ಹೆಚ್ಚಿಸುವಂತೆ ಹಾಗೂ ಗ್ರಾಮ ಪಂಚಾಯಿತಿಗಳ ಸಿಬ್ಬಂದಿಗಳಿಗೆ ಸಿ ಮತ್ತು ಡಿ ದರ್ಜೆ ಸ್ಥಾನಮಾನ ನೀಡಿ ವೇತನ ಭದ್ರತೆ ಒದಗಿಸುವಂತೆ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಲ್ಲಿ ಮನವಿ ಮಾಡಿದರು.
ಈ ಹಿಂದೆ ಪಂಚಾಯತ್ ಸದಸ್ಯರ ಅಧ್ಯಕ್ಷರ ಉಪಾಧ್ಯಕ್ಷರ ಗೌರವ ಧನವನ್ನು ಹೆಚ್ಚಿಸಿದ ಹೆಮ್ಮೆ ಸನ್ಮಾನ್ಯ ಮಂಜುನಾಥ್ ಭಂಡಾರಿಯವರದ್ದು.ಪಂಚಾಯತ್ ಆಡಳಿತ ಸ್ಥಳೀಯ ಆಡಳಿತವಾಗಿದ್ದು ಜನಸಾಮಾನ್ಯರ ಯಾವುದೇ ಸಮಸ್ಯೆಗಳಿದ್ದರು ಅಭಿವೃದ್ಧಿ ವಿಚಾರಗಳು ಇದ್ದರೆ ಸಾರ್ವಜನಿಕರು ಮೊದಲು ಸಂಪರ್ಕ ಮಾಡುವುದೆ ಪಂಚಾಯತ್ ಸದಸ್ಯರನ್ನು,
ಹೆಚ್ಚಿನ ಪಂಚಾಯತ್ ಸದಸ್ಯರು ಆರ್ಥಿಕವಾಗಿ ದುರ್ಬಲವಾಗಿದ್ದು ಅವರಿಗೆ ಗೌರವ ಧನ ಹೆಚ್ಚಿಸುವಲ್ಲಿ ರಾಜ್ಯದ ವಿಧಾನಮಂಡಲದಲ್ಲಿ ಧ್ವನಿ ಎತ್ತಿದ್ದು ಪಂಚಾಯತ್ ಸದಸ್ಯರು ನಿಮ್ಮ ಮೇಲೆ ಇಟ್ಟಿರುವ ನಂಬಿಕೆ ಇಮ್ಮಡಿಯಾಗಿದೆ ಎಂದು ಉಡುಪಿ ಜಿಲ್ಲೆ ಪೆರ್ಡೂರು ಗ್ರಾಮ ಪಂಚಾಯತ್ ಸದಸ್ಯರಾದ ನವೀನ್ ಸಾಲ್ಯಾನ್ ಹರ್ಷ ವ್ಯಕ್ತ ಪಡಿಸಿದರು.
ಮುಂದುವರೆದು ಮುಂಬರುವಪಂಚಾಯತ್ ,ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳ ಚುನಾವಣೆಯನ್ನು ಶೀಘ್ರವಾಗಿ ಪಕ್ಷದ ಚಿಹ್ನೆಯಡಿ ಕೈಗೊಳ್ಳಲು ಸರ್ಕಾರದಿಂದ ನಿರ್ಣಯಿಸುವಂತೆ ಮನವಿ ಮಾಡಿದ್ದು ಕೂಡ ಸರಿಯಾದ ನಿರ್ಧಾರ ಎಂದು ನವೀನ್ ಸಾಲ್ಯಾನ್ ತಿಳಿಸಿದ್ದಾರೆ.
Leave a comment