
ಸುಪ್ರೀತ್ , ಚಾಂತಾರು ಬ್ರಹ್ಮಾವರ ಇವರ ಅಜ್ಜಿ ಮನೋರಮಾ ರವರು ನಾಡ್ಪಾಲು ಗ್ರಾಮದ ನಂದಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಮುಕ್ತೇಸರಾಗಿರುತ್ತಾರೆ.

ಸುಪ್ರೀತ್ ಹಾಗೂ ಅವರ ಮನೆಯವರು ದಿನಾಂಕ 12/08/2025 ರಂದು ಮದ್ಯಾಹ್ನ 12:30 ಗಂಟೆಗೆ ಹೆಬ್ರಿ ತಾಲೂಕು ನಾಡ್ಪಾಲು ಗ್ರಾಮದ ಸೀತಾನದಿ ನಂದಲ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಹೋಗಲು ಆವರಣದಲ್ಲಿ ಕಾರಿನಲ್ಲಿ ಕುಳಿತುಕೊಂಡಿರುವಾಗ ವಿಜಯ ಮತ್ತು ಅವನ ಜೊತೆ ಇರುವ ಕೆಲವರು ಬಳಿ ಬಂದು ಕಾರನ್ನು ತಡೆದು ಜೀವ ಬೆದರಿಕೆ ಹಾಕಿ ದೇವಸ್ಥಾನದ ಪ್ರವೇಶಕ್ಕೆ ಅನುಮತಿ ನೀಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾರೆ.
ಅವರು ಈ ಹಿಂದೆ ಕೂಡಾ ದೇವಸ್ಥಾನದ ವಿಚಾರದಲ್ಲಿ ಬೆದರಿಕೆ ಹಾಕಿರುತ್ತಾರೆ. ಅವರು ತನ್ನ ಕುಟುಂಬಕ್ಕೆ ಹಾನಿ ಉಂಟು ಮಾಡಬಹುದಾಗಿಎಂದು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ .”
Leave a comment