“ನವದೆಹಲಿ: ಪ್ಯಾಲೆಸ್ತೀನ್‌ನಲ್ಲಿ ಇಸ್ರೇಲ್ ನರಮೇಧ ನಡೆಸುತ್ತಿದೆ ಎಂಬ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಇತ್ತೀಚಿನ ಆರೋಪಗಳಿಗೆ ಭಾರತದ ಇಸ್ರೇಲ್‌ನ ರಾಯಭಾರಿ ರುವೆನ್ ಅಜರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ಇಸ್ರೇಲ್ ದೇಶ ನರಮೇಧ ಮಾಡುತ್ತಿದೆ. 60,000 ಕ್ಕೂ ಹೆಚ್ಚು ಜನರನ್ನು ಹತ್ಯೆಗೈದಿದೆ. ಅವರಲ್ಲಿ 18,430 ಮಕ್ಕಳು ಸೇರಿದ್ದಾರೆ.
ಅನೇಕ ಮಕ್ಕಳು ಸೇರಿದಂತೆ ನೂರಾರು ಜನರು ಹಸಿವಿನಿಂದ ಸಾಯುವಂತೆ ಮಾಡಿದೆ. ಲಕ್ಷಾಂತರ ಜನರನ್ನು ಹಸಿವಿನಿಂದ ಸಾಯಿಸುವ ಬೆದರಿಕೆ ಹಾಕುತ್ತಿದೆ” ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮಾಡಿದ್ದರು.
ಅಲ್ಲದೇ, ಈ ವಿಚಾರದಲ್ಲಿ ಜಾಗತಿಕ ಮೌನವನ್ನು ಖಂಡಿಸಿದ ಪ್ರಿಯಾಂಕಾ ಗಾಂಧಿ, ಇಸ್ರೇಲ್ ಪ್ಯಾಲೆಸ್ತೀನ್ ಜನರ ಈ ವಿನಾಶಕಾರಿ ಕ್ರಮದ ವಿರುದ್ಧ ಭಾರತ ಸರ್ಕಾರ ಮೌನವಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕಿಡಿಕಾರಿದ್ದರು.
ಪ್ರಿಯಾಂಕಾ ಗಾಂಧಿ ಅವರ ಹೇಳಿಕೆಗಳಿಗೆ ಕಿಡಿಕಾರಿರುವ ಅಜರ್, “ನಿಮ್ಮ ಸುಳ್ಳಿನ ಹೇಳಿಕೆ ನಾಚಿಕೆಗೇಡಿನ ಸಂಗತಿಯಾಗಿದೆ. ಇಸ್ರೇಲ್ 25,000 ಹಮಾಸ್ ಉಗ್ರರನ್ನು ಕೊಂದಿದೆ.
ನಾಗರಿಕರ ಹಿಂದಿರುವ ಹಮಾಸ್‌ನ ಹೀನಾಯ ತಂತ್ರಗಳು, ಸ್ಥಳಾಂತರ ಅಥವಾ ನೆರವಾಗಲು ಪ್ರಯತ್ನಿಸುತ್ತಿರುವ ಜನರ ಮೇಲೆ ಗುಂಡಿನ ದಾಳಿ ಮತ್ತು ಅವರ ರಾಕೆಟ್ ದಾಳಿಯಿಂದ ಜನರು ಜೀವ ತೆತ್ತಬೇಕಾಗಿದೆ.
ಅಲ್ಲದೇ ಇಸ್ರೇಲಿನ ಮಾನವೀಯ ನೆರವಿನ ಕಾರ್ಯವನ್ನು ಉಲ್ಲೇಖಿಸಿರುವ ಅವರು, ಇಸ್ರೇಲ್ ಗಾಜಾಕ್ಕೆ 2 ಮಿಲಿಯನ್ ಟನ್ ಪದಾರ್ಥಗಳನ್ನು ಪೂರೈಸಿದೆ.
ಆದರೆ ಹಮಾಸ್ ಅವರನ್ನು ಪ್ರತ್ಯೇಕಿಸಲು ಪ್ರಯತ್ನಿಸುತ್ತಿದೆ. ಆ ಮೂಲಕ ಹಸಿವನ್ನು ಸೃಷ್ಟಿಸುತ್ತಿದೆ. ಕಳೆದ 50 ವರ್ಷಗಳಲ್ಲಿ ಗಾಜಾ ಜನಸಂಖ್ಯೆಯು ಶೇ. 450 ರಷ್ಟು ಬೆಳೆದಿದೆ.ಅಲ್ಲಿ ಯಾವುದೇ ನರಮೇಧ ನಡೆದಿಲ್ಲ ಎಂದು ಹೇಳಿದ್ದಾರೆ.
Leave a comment