ಧರ್ಮಸ್ಥಳ ಪ್ರಕರಣ ದೂರುದಾರ ಗುರುತಿಸಿದ ಹೊಸ ಸ್ಪಾಟ್15ಕ್ಕೆ ಸಾಕ್ಷಿ- ದೂರುದಾರರನ್ನು ಕರೆದೊಯ್ದ ಎಸ್ಐಟಿ

6
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಶುಕ್ರವಾರ ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳ ಗ್ರಾಮದ ಬೋಳಿಯಾರು ಎಂಬಲ್ಲಿ ಸ್ಪಾಟ್ 15 ಎಂದು ಗುರುತಿಸಲಾದ ಹೊಸ ಸ್ಥಳಕ್ಕೆ ಸಾಕ್ಷಿ-ದೂರುದಾರರನ್ನು ಕರೆದೊಯ್ದಿದೆ.


ಸಾಕ್ಷಿ-ದೂರುದಾರನೊಂದಿಗೆ ತನಿಖಾಧಿಕಾರಿ ಎಸ್‌ಪಿ ಜಿತೇಂದ್ರ ಕುಮಾರ್ ದಯಾಮ ಮತ್ತು ಪುತ್ತೂರು ವಿಭಾಗದ ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಇದ್ದರು. ಹೊಸ ಸ್ಥಳದಲ್ಲಿ ಪರಿಶೀಲನೆ ಮತ್ತು ಭೂಮಿಯನ್ನು ಅಗೆಯುವ ಕಾರ್ಯವನ್ನು ಪ್ರಾರಂಭಿಸುವುದಾಗಿ ಎಸ್‌ಐಟಿಯ ಮೂಲಗಳು ತಿಳಿಸಿದ್ದವು.
ಪ್ರಕರಣದಲ್ಲಿ ಸಾಕ್ಷಿ-ದೂರುದಾರರು ತೋರಿಸಿರುವ ಒಟ್ಟು ಸ್ಥಳಗಳ ಪೈಕಿ ಈಗಾಗಲೇ 13 ಸ್ಥಳಗಳಲ್ಲಿ ಶೋಧ ಕಾರ್ಯ ಪೂರ್ಣಗೊಂಡಿದ್ದು, ಜುಲೈ 31 ರಂದು 6ನೇ ಸ್ಥಳದಲ್ಲಿ ಮಾತ್ರ ಮಾನವ ಅವಶೇಷಗಳು ಕಂಡುಬಂದಿವೆ. ಆಗಸ್ಟ್ 5 ರಂದು, ಎಸ್‌ಐಟಿ 11 ಮತ್ತು 12ನೇ ಸ್ಥಳದಲ್ಲಿ ಅಗೆದಿತ್ತು. ಆದರೆ, ಯಾವುದೇ ಅವಶೇಷಗಳು ಪತ್ತೆಯಾಗಿಲ್ಲ.


ಅಲ್ಲದೆ, ಸಾಕ್ಷಿ-ದೂರುದಾರ ಗುರುತಿಸಿದ್ದ 13ನೇ ಜಾಗವನ್ನು ಹೊರತುಪಡಿಸಿ, ಉಳಿದೆಲ್ಲ ಸ್ಥಳಗಳಲ್ಲಿ ಎಸ್ಐಟಿ ಶೋಧ ಕಾರ್ಯ ಪೂರ್ಣಗೊಳಿಸಿದೆ. ಇದೀಗ 15ನೇ ಸ್ಥಳ ಎಂದು ಗುರುತಿಸಿದ ಹೊಸ ಸ್ಥಳದಲ್ಲಿಯೂ ಶೋಧಕ್ಕೆ ಮುಂದಾಗಿದೆ.

Leave a comment

Leave a Reply

Your email address will not be published. Required fields are marked *

Related Articles

ಧರ್ಮಸ್ಥಳ ಪ್ರಕರಣ ಪಾಯಿಂಟ್ 13ರ ಶೋಧ ಕಾರ್ಯಕ್ಕೆ ಜಿಪಿಆರ್ ಬಳಕೆಗೆ ತಜ್ಞರ ಸಲಹೆ ಕೇಳಿದ ಎಸ್ಐಟಿ

“ಸಾಕ್ಷಿ-ದೂರುದಾರರು ತೋರಿಸಿರುವ ಸ್ಥಳ 13 ರಲ್ಲಿ ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (ಜಿಪಿಆರ್) ವ್ಯವಸ್ಥೆ ಮತ್ತು ಡ್ರೋನ್...

ಹಿಂದೂ ಮುಖಂಡ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ರಾಜ್ಯದ 18 ಸ್ಥಳಗಳಲ್ಲಿ ಎನ್ಐಎ ದಾಳಿ

ನವದೆಹಲಿ: ಬಜರಂಗದಳ ಸದಸ್ಯ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಶನಿವಾರ...

ಪರಶುರಾಮ್ ಥೀಮ್ ಪಾರ್ಕ್ ವಿಚಾರದಲ್ಲಿ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರ ಗೊಂದಲದ ನಡೆ ಕೂಡಲೆ ಸೃಷ್ಟಿಕರಣ ನೀಡಿ ::ನಿತಿನ್ ಪೂಜಾರಿ ಆಗ್ರಹ

ಧಾರ್ಮಿಕ ನಂಬಿಕೆಯ ಹೋರಾಟಕ್ಕೆ ರಾಜಕೀಯ ಬಣ್ಣ ಬೇಡ : ಉದಯಕುಮಾರ್ ಶೆಟ್ಟಿ ಅವರು ಸಲ್ಲಿಸಿದ ಹೈಕೋರ್ಟ್...