ದಶಕಗಳಿಂದ 50ಕ್ಕೂ ಹೆಚ್ಚು ಸಿಸೇರಿಯನ್ ಹೆರಿಗೆ ಮಾಡಿಸಿದ್ದ ನಕಲಿ ವೈದ್ಯ ನ ಬಂಧನ

2

ಅಸ್ಸಾಂನ ಸಿಲ್ಚಾರ್‌ನಲ್ಲಿ ವೈದ್ಯರೊಬ್ಬರು ಸಿಸೇರಿಯನ್ ಮಾಡುತ್ತಿದ್ದರು. ಈ ವೇಳೆ ಆಪರೇಷನ್ ಕೋಣೆಗೆ ಬಂದ ಪೊಲೀಸರು ವೈದ್ಯನನ್ನು ಕರೆದುಕೊಂಡು ಹೋಗಿದ್ದು ಆತಂಕ ಮೂಡಿಸಿತು. ವಾಸ್ತವವಾಗಿ, ಈ ಇಡೀ ವಿಷಯ ಮುನ್ನಾಭಾಯಿ ಮಾದರಿಯ ವೈದ್ಯರಿಗೆ ಸಂಬಂಧಿಸಿದೆ.


ತನಿಖೆಯ ಸಮಯದಲ್ಲಿ ನಕಲಿ ವೈದ್ಯ ಪುಲಕ್ ಮಲಾಕರ್ ಕಳೆದ ಒಂದು ದಶಕದಿಂದ ಸಿಲ್ಚಾರ್‌ನ ಎರಡು ಖಾಸಗಿ ಆಸ್ಪತ್ರೆಗಳಲ್ಲಿ ‘ಸ್ತ್ರೀರೋಗತಜ್ಞ’ರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಕಂಡುಬಂದಿದೆ. ಮಲಾಕರ್ ಸುಮಾರು 50 ಸಿಸೇರಿಯನ್ ಮಾಡಿದ್ದಾರೆ.

ಶಿಬ್ಸುಂದರಿ ನಾರಿ ಶಿಕ್ಷಾ ಸೇವಾ ಆಶ್ರಮ ಆಸ್ಪತ್ರೆಯಲ್ಲಿ ಅವರು ಸಿಸೇರಿಯನ್ ಶಸ್ತ್ರಚಿಕಿತ್ಸೆ ಮಾಡುತ್ತಿದ್ದಾಗ ಪೊಲೀಸರು ಅವರನ್ನು ಬಂಧಿಸಿದರು. ವೈದ್ಯಕೀಯ ಪ್ರಮಾಣಪತ್ರಗಳು ನಕಲಿ ಎಂದು ಕಂಡುಬಂದಿದೆ.

ನಮಗೆ ಮಾಲಾಕರ್ ಬಗ್ಗೆ ಮಾಹಿತಿ ಸಿಕ್ಕಿತ್ತು. ನಂತರ ನಾವು ತನಿಖೆಯನ್ನು ಪ್ರಾರಂಭಿಸಿದ್ದೇವು. ನಂತರ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ನಂತರ, ಆತನ ವೈದ್ಯಕೀಯ ಪ್ರಮಾಣಪತ್ರಗಳು ನಕಲಿ ಎಂದು ಕಂಡುಬಂದಿದೆ.


ಅವರು ಯಾವುದೇ ಮಾನ್ಯ ವೈದ್ಯಕೀಯ ಪದವಿ ಇಲ್ಲದೆ ವರ್ಷಗಳಿಂದ ಈ ವ್ಯವಹಾರವನ್ನು ನಡೆಸುತ್ತಿದ್ದರು ಎಂದು ಕ್ಯಾಚರ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ನುಮಲ್ ಮಹತ್ತ ಹೇಳಿದರು.

ಮಲಾಕರ್ ಅಸ್ಸಾಂನ ಶ್ರೀಭೂಮಿ ನಿವಾಸಿಯಾಗಿದ್ದು ಆತನನ್ನು ಬಂಧಿಸಿದ ನಂತರ, ಪೊಲೀಸರು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಐದು ದಿನಗಳ ತಮ್ಮ ಕಸ್ಟಡಿಗೆ ತೆಗೆದುಕೊಂಡರು.


ಪೊಲೀಸರು ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 419 (ನಕಲು ಮಾಡುವಿಕೆ), 420 (ವಂಚನೆ), ಮತ್ತು 336 (ಮಾನವ ಜೀವಕ್ಕೆ ಅಪಾಯವನ್ನುಂಟುಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


ಈ ಬಂಧನವು ಅಸ್ಸಾಂ ಸರ್ಕಾರ ನಕಲಿ ವೈದ್ಯರ ವಿರುದ್ಧ ನಡೆಸುತ್ತಿರುವ ಅಭಿಯಾನದ ಭಾಗವಾಗಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದಲ್ಲಿ ಜನವರಿ 2025ರಲ್ಲಿ ಆಂಟಿ-ಕ್ವಾಕರಿ ಮತ್ತು ವಿಜಿಲೆನ್ಸ್ ಸೆಲ್ ಅನ್ನು ರಚಿಸಲಾಯಿತು.



ಇದು ರಾಜ್ಯ ಪೊಲೀಸರ ಸಹಯೋಗದೊಂದಿಗೆ ನಕಲಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ. ಈ ಘಟಕವು ಇಲ್ಲಿಯವರೆಗೆ 10ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಕ್ರಮಕೈಗೊಳ್ಳಲಾಗಿದೆ ಎಂದರು.

ಅಸ್ಸಾಂ ವೈದ್ಯಕೀಯ ನೋಂದಣಿ ಮಂಡಳಿಯ ವಿಜಿಲೆನ್ಸ್ ಅಧಿಕಾರಿ ಡಾ. ಅಭಿಜಿತ್ ನಿಯೋಗ್ ಮಾತನಾಡಿ, ಮಲಾಕರ್ ಒಡಿಶಾದ ಶ್ರೀರಾಮ ಚಂದ್ರ ಭಂಜ್ ವೈದ್ಯಕೀಯ ಕಾಲೇಜಿನಿಂದ ನಕಲಿ ಎಂಬಿಬಿಎಸ್ ಪ್ರಮಾಣಪತ್ರವನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

Leave a comment

Leave a Reply

Your email address will not be published. Required fields are marked *

Related Articles

ಅತಿ ಹೆಚ್ಚು ದಿನಗಳ ಕಾಲ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ ಅಮಿತ್ ಶಾ ಅವರನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ

“ದೆಹಲಿಯಲ್ಲಿ ಇಂದು ಮಂಗಳವಾರ ನಡೆದ ಎನ್‌ಡಿಎ ಮೈತ್ರಿಕೂಟ ಸಭೆಯಲ್ಲಿ ಅಮಿತ್ ಶಾ ಅವರನ್ನು ಶ್ಲಾಘಿಸಿದ ಪ್ರಧಾನಿ...

ಇಸ್ಲಾಂಗೆ ಮತಾಂತರ, ಮದುವೆಗೆ ನಿರಾಕರಣೆ; ಕತ್ತು ಸೀಳಿ ಭಾಗ್ಯಶ್ರೀ ಹತ್ಯೆ ಮಾಡಿದ ಶೇಖ್ ರಯೀಸ್

ಮಧ್ಯಪ್ರದೇಶದಲ್ಲಿ ಮತ್ತೊಂದು ಲವ್ ಜಿಹಾದ್ ಆರೋಪ ಕೇಳಿಬಂದಿದ್ದು, ಧಾರ್ಮಿಕ ಮತಾಂತರ ಮತ್ತು ಮದುವೆಗೆ ನಿರಾಕರಿಸಿದ್ದಕ್ಕೆ ಮಹಿಳೆಯೊಬ್ಬರನ್ನು...

ವಿಧಾನಸಭೆ ಕಲಾಪ ನಡೆಯುತ್ತಿದ್ದ ವೇಳೆ ಮೊಬೈಲ್ ನಲ್ಲಿ ರಮ್ಮಿ ಅಡಿ ಕೃಷಿ ಖಾತೆಯನ್ನು ಕಳೆದುಕೊಂಡ ಸಚಿವ

ಮುಂಬೈ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಮೊಬೈಲಿನಲ್ಲಿ ರಮ್ಮಿ ಆಡುತ್ತಿದ್ದ ಮಾಣಿಕ್ರಾವ್ ಕೊಕಾಟೆ ಕೃಷಿ...

ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣ ದೋಷಿ ತೀರ್ಪು ವಿಶೇಷ ನ್ಯಾಯಾಲಯದಿಂದ ನಾಳೆ ಶಿಕ್ಷೆ ಪ್ರಮಾಣ ಪ್ರಕಟ

ಬೆಂಗಳೂರು: ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಮಾಜಿ ಸಂಸದ ಪ್ರಜ್ವಲ್...