ಬೈಂದೂರು ತಾಲೂಕು ಮರವಂತೆ ಗ್ರಾಮದ ಶ್ರೀ ವರಹ ಮಹಾರಾಜ ಸ್ವಾಮಿ ದೇವಸ್ಥಾನದ ಹಿಂಬದಿಯಲ್ಲಿ ನರೇಶ್ ಖಾರ್ವಿ ಕೊಡೆರಿ ಇವರ ಮಾಲಕತ್ತದ ಮರವಂತೆ ಅಡ್ವೆಂಚರ್ ಎನ್ನುವ ಸಂಸ್ಥೆಯು ಸೌಪರ್ಣಿಕ ನದಿಯಲ್ಲಿ ನೆರೆಯನ್ನು ಲೆಕ್ಕಿಸದೆ ಪ್ರವಾಸಿಗರ ಬೋಟಿಂಗ್ ನಡೆಸುತ್ತಿದ್ದು ಪ್ರವಾಸಿಗರಿಗೆ ತೊಂದರೆ ಯಾಗುವ ಮೊದಲೇ ಸಂಬಂಧ ಪಟ್ಟವರ ವಿರುದ್ಧ ಕ್ರಮ ಕೈಗೊಳುವಂತೆ ಜಿಲ್ಲಾಧಿಕಾರಿ ಯವರನ್ನು ಸಾರ್ವಜನಿಕರು ಅಗ್ರಹಿಸಿದ್ದಾರೆ
ದೇವಸ್ಥಾನದ ಹಿಂಬದಿಯಿಂದ ಹೊರಟು ಕುರು ದ್ವೀಪವನ್ನು ಸುತ್ತುವರಿದು ಪ್ರವಾಸಿಗರನ್ನು ಕೂರಿಸಿಕೊಂಡು ಈ ಬೋಟ್ ಸಂಚರಿಸುತ್ತದೆ ರಾಜ್ಯಾದ್ಯಂತ ಎಲ್ಲಾ ಪ್ರವಾಸಿ ತಾಣಗಳಲ್ಲೂ ಬೋಟಿಂಗ್ ಹಾಗೂ ವಿವಿಧ ಪ್ರವಾಸಿ ಕ್ರೀಡಾ ಗಳಿಗೆ ನಿರ್ಬಂಧ ವಿದ್ದರೂ ಕೂಡ ಯಾವುದೇ ನಿರ್ಬಂಧವನ್ನು ಲೆಕ್ಕಿಸದೆ ಮೇ ತಿಂಗಳ ಕೊನೆಯ ವಾರದ ನಂತರ ಬೋಟಿಂಗ್ ಮಾಡಲು ಅನುಮತಿ ಇಲ್ಲದಿದ್ದರೂ ಕೂಡ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಬೊಟ್ ನೆಡೆಸುತ್ತಿದ್ದೂ ಈ ಬಗ್ಗೆ ಅಧಿಕಾರಿಗಳು ಕಣ್ಮುಚ್ಚಿ ಕೂತಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ
ಸೌಪರ್ಣಿಕ ನದಿಯು ಅದರಲ್ಲೂ ಈ ಪ್ರದೇಶದಲ್ಲಿ ಪದೇಪದೇ ನೆರೆ ನೀರಿನಿಂದ ರಸ್ತೆ ಜಲಾವೃತ್ತ ಗೊಂಡರು ಕೂಡ ಇವರು ಅದ್ಯಾವುದನ್ನೇ ಲೆಕ್ಕಿಸದೆ ಅಪಾಯದ ಅರಿವು ಇದ್ದರೂ ಸಹ ಇವರು ದಿನಾಲು ಬೋಟಿಂಗ್ ನಡೆಸುತ್ತಿದ್ದಾರೆ ಈ ಬಗ್ಗೆ ಪ್ರವಾಸೋದ್ಯಮ ಇಲಾಖೆಯಾಗಲಿ ಪೋಲಿಸ್ ಇಲಾಖೆ ಹಾಗೂ ಕರಾವಳಿ ಕಾವಲು ಪಡೆ ಮತ್ತು ಬಂದರು ಮತ್ತು ಒಳನಾಡು ಜಲ ಸಾರಿಗೆ ಅಧಿಕಾರಿಗಳು ಸುಮ್ಮನಿರುವುದು ಸಾರ್ವಜನಿಕರ ವಲಯದಲ್ಲಿ ಸಂಶಯ ವ್ಯಕ್ತವಾಗುತ್ತಿದ್ದು ಈ ಬಗ್ಗೆ ಬೊಟ್ ಮಾಲಕರ ಮೇಲೆ ಕ್ರಿಮಿನಲ್ ಕೇಸು ದಾಖಲೆ ಅವರ ಪರವಾನಿಗೆಯನ್ನು ರದ್ದು ಪಡಿಸಲು ಸ್ಥಳೀಯರು ಆಗ್ರಹಿಸುತ್ತಿದ್ದಾರೆ
ಇತ್ತೀಚಿಗಷ್ಟೇ ಗಂಗೊಳ್ಳಿ ಅಳಿವೆಯಲ್ಲಿ ಮೀನುಗಾರಿಕಾ ಬೋಟ್ ಒಂದು ಮಗುಚಿ ಮೂವರು ಮೀನುಗಾರರು ದಾರುಣ ವಾಗಿ ಸಾವನಪ್ಪಿದ ಘಟನೆಯ ನಡುವೆಯೂ ಅದೇ ನದಿಯಲ್ಲಿ ಇವರು ಪ್ರವಾಸಿ ಬೋಟ್ ನಡೆಸುತ್ತಿರುವುದು ವಿಪರ್ಯಾಸವೇ ಸರಿ
Leave a comment