ವಿನಯ್ ಕುಮಾರ್ ಸೊರಕೆ ಯವರು ಕಳೆದ 2023ರ ವಿಧಾನ ಸಭಾ ಚುನಾವಣೆಯಲ್ಲಿ ಗ್ರಾಮ ಗ್ರಾಮಕ್ಕೆ ತೆರಳಿ ಇದು ನನ್ನ ಕೊನೆಯ ,
ಕಟ್ಟ ಕಡೆಯ ಚುನಾವಣೆ ಎಂದು ಜನರ ಮತ ಕೇಳಿದ್ದು ಇದರ ಹಿಂದಿನ ಚುನಾವಣೆಯಲ್ಲೂ ನನ್ನ ಕೊನೆ ಚುನಾವಣೆ ಎಂದು ಹೇಳಿದ್ದು ಈ ಬಾರಿ ಕಾರ್ಯಕರ್ತರ ಒತ್ತಾಯಕ್ಕೆ ಸರ್ವಾನೂಮತದಿಂದ ನಾನು ಸ್ಪರ್ಧಿಸಿದ್ದು
ಮುಂದಿನ 2028ರ ಚುನಾವಣೆಗೆ ನನಗೆ 74 ವರ್ಷ ನಡೆಯಲಿದ್ದು ನಾನು ಚುನಾವಣಾ ರಾಜಕಾರಣದಿಂದ ನಿವೃತ್ತಿ ಹೊಂದಬೇಕಾಗುತ್ತೆ ಎಂದು ತಿಳಿಸಿರುವ ಹಳೆ ವಿಡಿಯೋ ಈಗ ಸಾಮಾಜಿಕ ಜಾಲತಾಣ ಹಾಗೂ ಕಾಂಗ್ರೆಸ್ ವಾಟ್ಸಪ್ ಗ್ರೂಪ್ ಗಳಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ
ಕಾಪು ವಿಧಾನಸಭಾ ಕ್ಷೇತ್ರಕ್ಕೆ ಹೊಸ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಕಾಂಗ್ರೆಸ್ ವಾಟ್ಸಪ್ ಗ್ರೂಪಲ್ಲಿ ಬಹಳಷ್ಟು ಚರ್ಚೆಗಳು ನಡೆಯುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ
ಕಾಪು ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಕಾಂಗ್ರೇಸ್ ಪಕ್ಷ ತಕ್ಷಣ ಘೋಷಿಸುವುದು ಅನಿವಾರ್ಯ ಕಾಪು ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಹಾಗೂ ಮುಖಂಡರ ಅಭಿಮತವಾಗಿದೆ
ವಿನಯ್ ಕುಮಾರ್ ಸೊರಕೆ 2018ರ ಚುನಾವಣೆಯಲ್ಲಿ 11736 ಮತಗಳ ಹೀನಾಯ ಸೋಲು ಕಂಡಿದ್ದು 2023ರಲ್ಲಿ 13004 ಮತಗಳಲ್ಲಿ ಎರಡನೆಯ ಬಾರಿಗೆ ಹೀನಾಯವಾಗಿ ಸೋತಿದ್ದು
ಕಾಂಗ್ರೆಸ್ ಪಕ್ಷದ ಭದ್ರ ಕೋಟೆಯಾಗಲು ಕಾಪುವಿನಲ್ಲಿ ಅಭ್ಯರ್ಥಿ ಬದಲಾವಣೆಯಿಂದ ಕಾಂಗ್ರೆಸ್ ಗೆಲುವು ಕಟಿಟ್ಟ ಬುತ್ತಿ ಎನ್ನುವುದು ಕಾಂಗ್ರೆಸ್ ಕಾರ್ಯಕರ್ತರು ಬಹಿರಂಗ ವಾಗಿ ಚರ್ಚೆ ನೆಡೆಸುತ್ತಿರುವುದು ಕಾಂಗ್ರೆಸ್ ಮುಖಂಡರಿಗೆ ನುಂಗಲಾರದ ತುತ್ತು ಎನ್ನಲಾಗಿದೆ
ಮುಂದಿನ ದಿನಗಳಲ್ಲಿ ಅಭ್ಯರ್ಥಿ ಬದಲಾವಣೆ ಪ್ರಕ್ರಿಯೆ ಯಾವ ಹಂತಕ್ಕೆ ತಲುಪುತ್ತದೆ ಎಂದು ಕಾದು ನೋಡಬೇಕಾಗಿದೆ