. ಈ ಬಗ್ಗೆ ಬಾಲಿವುಡ್ ಹಂಗಾಮಾ ವರದಿ ಮಾಡಿದ್ದು, ಪುತ್ರಿ ಸುಹಾನಾ ಖಾನ್ ನಟಿಸುತ್ತಿರುವ ಕಿಂಗ್ ಚಿತ್ರದ ಚಿತ್ರೀಕರಣ ವೇಳೆ ನಟ ಶಾರುಖ್ ಖಾನ್ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಕಿಂಗ್ ಚಿತ್ರದ ತೀವ್ರ ಸಾಹಸಮಯ ದೃಶ್ಯ ಚಿತ್ರೀಕರಿಸುವಾಗ ಶಾರುಖ್ ಖಾನ್ ಗಾಯಗೊಂಡಿದ್ದು, ಸಾಹಸ ದೃಶ್ಯದ ಚಿತ್ರೀಕರಣದ ಸಮಯದಲ್ಲಿ ಸ್ನಾಯುಗಳಿಗೆ ಗಾಯವಾಗಿದೆ. ಅವರು ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದಾರೆ.
ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುವುದು ಮತ್ತು ವೈದ್ಯರು ಅವರಿಗೆ ಒಂದು ತಿಂಗಳು ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ ಎನ್ನಲಾಗಿದೆ. ಶಾರುಖ್ ಖಾನ್ ರ ಗಾಯದ ತೀವ್ರತೆ ಕುರಿತು ಸಂಪೂರ್ಣ ವಿವರ ಬಹಿರಂಗಗೊಂಡಿಲ್ಲವಾದರೂ ಅವರು ತಮ್ಮ ತಂಡದೊಂದಿಗೆ ಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗಿದ್ದಾರೆ.
ಇದು ತುಂಬಾ ದೊಡ್ಡ ಅಥವಾ ಗಂಭೀರವಾದ ಗಾಯವಲ್ಲ, ಆದರೆ ಸ್ನಾಯುಗಳಿಗೆ ಪೆಟ್ಟಾಗಿದೆ. ಶಾರುಖ್ ಅವರು ಸಾಹಸ ದೃಶ್ಯದಲ್ಲಿ ನಟಿಸುವಾಗ ಈ ಹಿಂದೆ ಹಲವು ಬಾರಿ ಸ್ನಾಯುಗಳಿಗೆ ಗಾಯ ಮಾಡಿಕೊಂಡಿದ್ದಾರೆ ಎಂದು ಮೂಲವೊಂದು ತಿಳಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಶಸ್ತ್ರ ಚಿಕಿತ್ಸೆ, ಒಂದು ತಿಂಗಳು ವಿಶ್ರಾಂತಿ ಇನ್ನು ನಟ ಶಾರುಖ್ ಖಾನ್ ಅವರಿಗೆ ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆ ಕೂಡ ನಡೆಸಲಾಗಿದ್ದು, ಶಸ್ತ್ರಚಿಕಿತ್ಸೆಯ ನಂತರ ವೈದ್ಯರು ಒಂದು ತಿಂಗಳು ವಿಶ್ರಾಂತಿ ಪಡೆಯಲು ಶಾರುಖ್ ಖಾನ್ ಅವರಿಗೆ ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಆದ್ದರಿಂದ ಶಾರುಖ್ ಖಾನ್ ಮುಂದಿನ ಚಿತ್ರ ‘ಕಿಂಗ್’ ಚಿತ್ರೀಕರಣ ಈಗ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಪ್ರಾರಂಭವಾಗಲಿದೆ. ಶಾರುಖ್ ಖಾನ್ ಸಂಪೂರ್ಣವಾಗಿ ಚೇತರಿಸಿಕೊಂಡ ನಂತ ಚಿತ್ರೀಕರಣಕ್ಕೆ ಮರಳುತ್ತಾರೆ ಎಂದು ಹೇಳಲಾಗಿದೆ.
ಅಂದಹಾಗೆ ‘ಕಿಂಗ್’ ಚಿತ್ರ 2026 ರಲ್ಲಿ ಬಿಡುಗಡೆಯಾಗಲಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರದಲ್ಲಿ ಶಾರುಖ್ ಜೊತೆಗೆ ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚನ್, ರಾಣಿ ಮುಖರ್ಜಿ, ಅನಿಲ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂತೆಯೇ ಇದೇ ಕಿಂಗ್ ಚಿತ್ರದ ಮೂಲಕ ಶಾರುಖ್ ಪುತ್ರಿ ಸುಹಾನಾ ಖಾನ್ ಕೂಡ ಬಾಲಿವುಡ್ ಗೆ ಪದಾರ್ಪಣೆ ಮಾಡುತ್ತಿದ್ದಾರೆ.
ಬಾಲಿವುಡ್ ಕಿಂಗ್ ಚಿತ್ರದ ಶೂಟಿಂಗ್ ವೇಳೆ ಭಾರಿ ಅವಘಡ: ಸಾಹಸ ದೃಶ್ಯದ ವೇಳೆ ಶಾರುಖ್ ಖಾನ್ ಗೆ ತೀವ್ರ ಗಾಯ
ಮುಂಬೈ: ಸಿನಿಮಾ ಶೂಟಿಂಗ್ ವೇಳೆ ಬಾಲಿವುಡ್ ನಟ ಶಾರುಖ್ ಖಾನ್ ಗೆ ತೀವ್ರ ಪೆಟ್ಟಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಹೌದು.. ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಸಿನಿಮಾ ಶೂಟಿಂಗ್ ವೇಳೆ ಸಂಭವಿಸಿದ ಭಾರಿ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ