ಪಾಕಿಸ್ತಾನದ ಮೌಲ್ವಿ  ಕೋಡ್ ಹೊಂದಿದ್ದ ಜೆಇಎಂ ಟಾಪ್ ಕಮಾಂಡರ್  ಭಯೋತ್ಪಾದಕ ಹೈದರ್  ಭಾರತೀಯ ಸೇನಾ ಗುಂಡಿಗೆ ಬಲಿ

61

“ಜಮ್ಮು-ಕಾಶ್ಮೀರದಲ್ಲಿ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ (JEM) ಭಯೋತ್ಪಾದಕರ ಸಂಘಟನೆಯ ಟಾಪ್ ಕಮಾಂಡರ್ ನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ

. ಉಧಮ್‌ಪುರ ಜಿಲ್ಲೆಯ ದುಡು-ಬಸಂತಗಢ ಅರಣ್ಯದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭಯೋತ್ಪಾದಕ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ (ಜೆಇಎಂ) ಸಂಘಟನೆಯ ಓರ್ವ ಟಾಪ್ ಕಮಾಂಡರ್ ನನ್ನು ಹತ್ಯೆ ಮಾಡಲಾಗಿದೆ

. ಆತ ಕಳೆದ ನಾಲ್ಕು ವರ್ಷಗಳಿಂದ ಈ ಪ್ರದೇಶದಲ್ಲಿ ಸಕ್ರಿಯನಾಗಿದ್ದ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ನಳಿನ್ ಪ್ರಭಾತ್ ಬುಧವಾರ ತಿಳಿಸಿದ್ದಾರೆ

ಭಯೋತ್ಪಾದಕರನ್ನು ಸದೆಬಡಿಯಲು ಭದ್ರತಾ ಪಡೆಗಳು ತಮ್ಮ ಕಾರ್ಯಾಚರಣೆಯನ್ನು ಮುಂದುವರೆಸುತ್ತಿದ್ದು, ಜನರ ಬೆಂಬಲವಿಲ್ಲದೆ ಪೊಲೀಸರು ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಅಖ್ನೂರ್ ಪೊಲೀಸ್ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ DGP, ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳು ನಿರಂತರವಾಗಿ ನಡೆಯುತ್ತಿವೆ. ಇತ್ತೀಚೆಗೆ, ದುಡು-ಬಸಂತಗಢ ಅರಣ್ಯದಲ್ಲಿ ದೊಡ್ಡ ಯಶಸ್ಸನ್ನು ಪಡೆದಿದ್ದೇವೆ

. ಅಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸಕ್ರಿಯರಾಗಿದ್ದ ಜೈಶ್- ಎ-ಮೊಹಮ್ಮದ್ ಸಂಘಟನೆಯ ಟಾಪ್ ಕಮಾಂಡರ್ ನನ್ನು ಹತ್ಯೆ ಮಾಡಲಾಗಿದೆ .ಕಾರ್ಯಾಚರಣೆಗಳು ಮುಂದುವರೆದಿದ್ದು, ಎಲ್ಲಾ ಭಯೋತ್ಪಾದಕರನ್ನು ಒಬ್ಬೊಬ್ಬರಾಗಿ ನಿರ್ಮೂಲನೆ ಮಾಡಲಾಗುವುದು ಎಂದು ತಿಳಿಸಿದರು.

ಜೂನ್ 26 ರಂದು  ನನ್ನು ಗುಂಡಿನ ಚಕಮಕಿಯಲ್ಲಿ ಹೊಡೆದುರುಳಿಸಲಾಗಿದೆ. ಆದರೆ ಆತನ ಮೂವರು ಸಹಚರರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು ಎಂದು ಡಿಜಿಪಿ ತಿಳಿಸಿದರು

. ಆದರೆ, ಜಮ್ಮುವಿನ ಅರಣ್ಯ ಪ್ರದೇಶಗಳಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕರ ನಿಖರ ಸಂಖ್ಯೆಯನ್ನು ನೀಡಲು ನಿರಾಕರಿಸಿದ ನಿರಾಕರಿಸಿದರು. ಅದನ್ನು ಸಾರ್ವಜನಿಕವಾಗಿ ಹೇಳಲು ಸಾಧ್ಯವಿಲ್ಲ ಎಂದರು

Leave a comment

Leave a Reply

Your email address will not be published. Required fields are marked *

Related Articles

ವಿಭಜನೆಯತ್ತ ತೃಣಮೂಲ ಕಾಂಗ್ರೆಸ್  ಬಂಡಾಯ ಸಂಸದರ ಸಂಖ್ಯೆ 20ರ ಮ್ಯಾಜಿಕ್

“ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಬಹುಕಾಲದಿಂದ ನಡೆಯುತ್ತಿದ್ದ ಅಂತರ್ಯುದ್ಧ ಈಗ ನಿಜವಾಗಿದೆ. ತೃಣಮೂಲ ಕಾಂಗ್ರೆಸ್  ಸ್ಥಾಪಕಿ ಮಮತಾ...

ಮಣಿಪುರದಲ್ಲಿ ಮತ್ತೆ ಮರುಕಳಿಸಿದ ಹಿಂಸಾಚಾರ ಕುಕಿ ಸಮುದಾಯದ ಇಬ್ಬರು ಸದಸ್ಯರನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು

ಮಣಿಪುರದಲ್ಲಿ ಕುಕಿ ಸಮುದಾಯದ ಇಬ್ಬರು ಸದಸ್ಯರನ್ನು ಗುರುವಾರ ಬೆಳಿಗ್ಗೆ 4:55ಕ್ಕೆ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ....

5ನೇ ತಲೆಮಾರಿನ ದೇಶಿಯ ಯುದ್ಧ ವಿಮಾನಗಳನ್ನು ಜಂಟಿಯಾಗಿ ನಿರ್ಮಿಸಲು ಭಾರತಕ್ಕೆ ಆಫರ್ ನೀಡಿದ,:: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್

ನವದೆಹಲಿ: 5ನೇ ತಲೆಮಾರಿನ ಯುದ್ಧ ವಿಮಾನಗಳನ್ನು ದೇಶೀಯವಾಗಿ ನಿರ್ಮಿಸಲು ಮುಂದಾಗಿರುವ ಭಾರತಕ್ಕೆ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್...

ಕಾಂಗ್ರೆಸ್ ಸರ್ಕಾರದ ವೈಫಲ್ಯಗಳೇ 2028ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಗೆಲುವಿನತ್ತ ಕೊಂಡೊಯ್ಯುತ್ತವೆ ಎಂಬ ಭ್ರಮೆಯಿಂದ ಹೊರಬರಬೇಕು : ನಿತಿನ್ ನಬಿನ್

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ನಿನ್ನೆ ಭಾನುವಾರ ಕರ್ನಾಟಕದ ನಾಯಕರು ಮತ್ತು ಕಾರ್ಯಕರ್ತರಿಗೆ,...