5ನೇ ತಲೆಮಾರಿನ ದೇಶಿಯ ಯುದ್ಧ ವಿಮಾನಗಳನ್ನು ಜಂಟಿಯಾಗಿ ನಿರ್ಮಿಸಲು ಭಾರತಕ್ಕೆ ಆಫರ್ ನೀಡಿದ,:: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್

14

ನವದೆಹಲಿ: 5ನೇ ತಲೆಮಾರಿನ ಯುದ್ಧ ವಿಮಾನಗಳನ್ನು ದೇಶೀಯವಾಗಿ ನಿರ್ಮಿಸಲು ಮುಂದಾಗಿರುವ ಭಾರತಕ್ಕೆ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಐದನೇ ತಲೆಮಾರಿನ ಸ್ಟೆಲ್ತ್ ಫೈಟರ್ ಸುಖೋಯ್ ಸು-57 ನೀಡುವುದಾಗಿ ಆಫರ್ ನೀಡಿದ್ದಾರೆ.
ಭಾರತದಲ್ಲಿ ಈ ಯುದ್ಧ ವಿಮಾನವನ್ನು ಜಂಟಿಯಾಗಿ ಉತ್ಪಾದನೆ ಮಾಡುವ ಪುಟಿನ್ ಪ್ರಸ್ತಾಪ ಉಭಯ ದೇಶಗಳ ನಡುವಿನ ದೀರ್ಘಕಾಲದ ಕಾರ್ಯತಂತ್ರದ ಪಾಲುದಾರಿಕೆಯನ್ನು ಒತ್ತಿಹೇಳುತ್ತದೆ. ಸುಖೋಯ್ Su-57 5ನೇ ತಲೆಮಾರಿನ ಸ್ಟೆಲ್ತ್‌ ಯುದ್ಧವಿಮಾನಕ್ಕೆ(ಫೈಟರ್ ಜೆಟ್ ) ಸಂಬಂಧಿಸಿದಂತೆ ಭರ್ಜರಿ ಆಫರ್‌ವೊಂದನ್ನ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ, ಭಾರತವು ಸುಧಾರಿತ ಮಲ್ಟಿರೋಲ್ ಯುದ್ಧ ವಿಮಾನ ಯೋಜನೆಯನ್ನು ಪ್ರಾರಂಭಿಸಿದೆ. ಇದು ದೇಶೀಯವಾಗಿ ನಿರ್ಮಿಸುವ ಐದನೇ ತಲೆಮಾರಿನ ಯುದ್ಧ ವಿಮಾನವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿರುವ ಮಹತ್ವಾಕಾಂಕ್ಷೆಯ ಸ್ವದೇಶಿ ಯೋಜನೆಯಾಗಿದೆ.
ಗುರುವಾರ ರಾತ್ರಿ ಪ್ರಮುಖ ಜಾಗತಿಕ ಸುದ್ದಿ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ನಡೆದ ಸಂವಾದದಲ್ಲಿ ಪುಟಿನ್, ಭಾರತ-ರಷ್ಯಾ ರಕ್ಷಣೆ ಮತ್ತು ಮಿಲಿಟರಿ ಸಂಬಂಧಗಳ ವಿವಿಧ ಅಂಶಗಳನ್ನು ಪರಿಶೀಲಿಸಿದರು ಮತ್ತು ಮಾಸ್ಕೋ ಇನ್ನೂ Su-57 ವಿಮಾನ ಉತ್ಪಾದನಾ ಯೋಜನೆಯಲ್ಲಿ ನವದೆಹಲಿಯನ್ನು ತೊಡಗಿಸಿಕೊಳ್ಳಲು ಉತ್ಸುಕವಾಗಿದೆ ಎಂದು ಹೇಳಿದರು.
ಇದರೊಂದಿಗೆ ಭಾರತದೊಂದಿಗೆ ಜಂಟಿಯಾಗಿ ಸುಖೋಯ್‌ Su-57 ಅನ್ನು ಅಭಿವೃದ್ಧಿಪಡಿಸಲು ರಷ್ಯಾ ಸಿದ್ಧವಾಗಿದೆ. ನಿರ್ಣಾಯಕ ತಂತ್ರಜ್ಞಾನಗಳನ್ನು ಹಂಚಿಕೊಳ್ಳಲು ಸಿದ್ಧ ಎಂದು ಪುಟಿನ್ ಹೇಳಿದ್ದಾರೆ. ಇದರಲ್ಲಿ ನಮಗೆ ಯಾವುದೇ ಸಮಸ್ಯೆಗಳಿಲ್ಲ ಎಂದು ಪುಟಿನ್ ಹೇಳಿದ್ದಾರೆ.
ಇದು ಭಾರತದೊಂದಿಗೆ ಇರುವ ರಕ್ಷಣಾ ಸಂಬಂಧಗಳನ್ನ ಇನ್ನಷ್ಟು ಬಲಪಡಿಸಲು ರಷ್ಯಾದ ಇಚ್ಛೆಯನ್ನು ಸೂಚಿಸುತ್ತದೆ. ಸದ್ಯ ಭಾರತದ 5ನೇ ತಲೆಮಾರಿನ ಸುಧಾರಿತ ಮಧ್ಯಮ ಶ್ರೇಣಿಯ ಯುದ್ಧ ವಿಮಾನಗಳನ್ನು (ಎಎಂಸಿಎ) ತಯಾರಿಸುವ ಯೋಜನೆ ಅಭಿವೃದ್ಧಿ ಹಂತದಲ್ಲಿದೆ.
ಫೈಟರ್‌ ಜೆಟ್‌ಗಳನ್ನ ದೇಶೀಯವಾಗಿ ನಿರ್ಮಿಸುವ 15 ಸಾವಿರ ಕೋಟಿ ರೂ. ಮೊತ್ತದ ಯೋಜನೆ ಇದಾಗಿದೆ. ಈ ಯೋಜನೆಯನ್ವಯ 2030 ರ ದಶಕದ ಮಧ್ಯಭಾಗದಲ್ಲಿ ಸೇವೆಗೆ ಪ್ರಸ್ತುತಪಡಿಸುವ ಸಾಧ್ಯತೆಗಳಿವೆ.

Leave a comment

Leave a Reply

Your email address will not be published. Required fields are marked *

Related Articles

ಬ್ರಿಕ್ಸ್ ಶೃಂಗಸಭೆ: ಭಾರಿ ಭದ್ರತೆ, ಐಷಾರಾಮಿ ಡೂಮ್ಸ್ ಡೇ ವಿಮಾನದಲ್ಲಿ ನವದೆಹಲಿಗೆ ಆಗಮಿಸಿದ ಪುಟಿನ್

ನವದೆಹಲಿ: ಬ್ರಿಕ್ಸ್ ಶೃಂಗಸಭೆಗೆ ರಾಷ್ಟ್ರ ರಾಜಧಾನಿ ಸಜ್ಜಾಗಿದೆ. ನಾಳೆಯಿಂದ ಭಾರತ ಮಂಟಪದಲ್ಲಿ ಎರಡು ದಿನ ಭಾರತದ...

ವಿಮಾನದಲ್ಲಿ ಬಾಂಬ್ ಬೆದರಿಕೆ ತುರ್ತುಭೂ ಸ್ಪರ್ಶ ಮಾಡಿದ ಇಂಡಿಗೋ ವಿಮಾನ

“ಅಹಮದಾಬಾದ್: ಲಕ್ನೋದಿಂದ ಸೌದಿ ಅರೇಬಿಯಾದ ದಮ್ಮಾಮ್‌ಗೆ  ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ...

370ನೇ ವಿಧಿಯನ್ನು ರದ್ದುಗೊಳಿಸಿದ ನಂತರಬದಲಾದ ಜಮ್ಮು ಮತ್ತು ಕಾಶ್ಮೀರ ವಂದೇ ಮಾತರಂ’ ಸಂಪೂರ್ಣ ರಾಷ್ಟ್ರಗೀತೆ ಗಾಯನ,

ಶ್ರೀನಗರ: 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಬದಲಾಗಿದೆ. ಮುಸ್ಲಿಂ ಬಹುಸಂಖ್ಯಾತ...

ಡ್ರಗ್ಸ್ ಸೇವನೆ ದೃಢಪಟ್ಟ ಹಿನ್ನೆಲೆ ಫುಕೆಟ್- ದೆಹಲಿ ಏರ್ ಇಂಡಿಯಾ ವಿಮಾನದ ಮುಖ್ಯ ಪೈಲಟ್ ವಜಾ

ನವದೆಹಲಿ: ಕಳೆದ ತಿಂಗಳು ಫುಕೆಟ್ ನಿಂದ ದೆಹಲಿಗೆ ಆಗಮಿಸುತ್ತಿದ್ದಾಗ ಏಕಾಏಕಿ ಎತ್ತರವನ್ನು ಕಳೆದುಕೊಂಡು ಪ್ರಯಾಣಿಕರಿಗೆ ಜೀವಭೀತಿ...