ಕಾರ್ಕಳ: ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಉದ್ಯಮಿ ಭರತ್ ಶೆಟ್ಟಿ ಪಮ್ಮೊಟ್ಟು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಭರತ್ ಶೆಟ್ಟಿ ಅವರು ಮುಂಬೈಯಲ್ಲಿ ಪ್ರತಿಷ್ಠಿತ ಉದ್ಯಮಿಯಾಗಿದ್ದು ಅಜೆಕಾರು ಮತ್ತು ಪರಿಸರದಲ್ಲಿ ಸಾಮಾಜಿಕ ಕಳಕಳಿ ಬದ್ಧತೆ ಹೊಂದಿದ್ದವರಾಗಿದ್ದು ಸಾರ್ವಜನಿಕ ವಲಯದಲ್ಲಿ ಕೊಡುಗೈದಾನಿಯಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದವರಾಗಿದ್ದು
ಇವರ ಅವಿರೋಧ ಆಯ್ಕೆ ಪರಿಸರದ ಜನರಿಗೆ ಸಂತಸ ತಂದಿದೆ ಇವರ ಅಧ್ಯಕ್ಷತೆಯಲ್ಲಿ ದೇವಸ್ಥಾನದಲ್ಲಿ ಹಲವಾರು ಸೇವಾ ಕೈಂಕರ್ಯ ಗಳು ಗ್ರಾಮ ಸುಭಿಕ್ಷವಾಗಲಿ ಎನ್ನುವುದು ಸಾರ್ವಜನಿಕರ ಆಶಯ
ಉಪಾಧ್ಯಕ್ಷರಾಗಿ ಯಶೋಧಾ ಶೆಟ್ಟಿ ಬೊಂಡುಕುಮೇರಿ, ಕಾರ್ಯದರ್ಶಿಯಾಗಿ ಪ್ರಕಾಶ ಶೆಟ್ಟಿ ಮಜಲುಮನೆ, ಕೋಶಾಧಿಕಾರಿಯಾಗಿ ಪ್ರಿತೇಶ್ ಶೆಟ್ಟಿ ಕುಂಠಿನಿ,
ಸದಸ್ಯರಾಗಿ ಗಣೇಶ್ ನಾಯ್ಕ ಕಾಡುಹೊಳೆ, ವಿಶ್ವನಾಥ ಪೂಜಾರಿ, ವೀಣಾ ಮಡಿವಾಳ ಹಾಗೂ ಅರ್ಚಕರಾಗಿ ಕೃಷ್ಣಮೂರ್ತಿ ಭಟ್ ಆಯ್ಕೆಯಾಗಿದ್ದಾರೆ.
8 ಜನ ವ್ಯವಸ್ಥಾಪನ ಸಮಿತಿಯ ಸದಸ್ಯರಲ್ಲಿ ಇಬ್ಬರು ಗೈರಾಗಿದ್ದರು. ಗ್ರಾಮ ಆಡಳಿತಾಧಿಕಾರಿ ಹಾಗೂ ದೇವಸ್ಥಾನದ ಆಡಳಿತಾಧಿಕಾರಿ ಪ್ರಮೋದ್ ಸುವರ್ಣ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಗ್ರಾಮ ಸಹಾಯಕ ಉದಯ ನಾಯ್ಕ ಸಹಕರಿಸಿದರು.