ಲಂಚಕ್ಕೆ ಬೇಡಿಕೆ ಪ್ರಕರಣ ಐದು ಮಂದಿ ಪೊಲೀಸರನ್ನು ಆಮಾನತುಗೊಳಿಸಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ

81

” ಮೇಲಾಧಿಕಾರಿಗಳು ಎಷ್ಟು ಕಟ್ಟುನಿಟ್ಟಿನ ಹಾಗೂ ದಕ್ಷ  ಅಧಿಕಾರಿಗಳಾಗಿದ್ದರೂ ಭ್ರಷ್ಟ ಅಧಿಕಾರಿಗಳು ಭ್ರಷ್ಟಾಚಾರ ಮಾಡುತ್ತಲೇ ಇರುತ್ತಾರೆ ಎನ್ನುವುದಕ್ಕೆ ಮಂಗಳೂರಿನ ಈ ಘಟನೆಯ ಸಾಕ್ಷಿ

ಮಂಗಳೂರಿನ ಕದ್ರಿ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ  ವಾಹನ ಪರವಾನಗಿ ಮರಳಿ ನೀಡಲು 50 ಸಾವಿರ ರೂ.ಲಂಚದ ಬೇಡಿಕೆಯಿರಿಸಿದ ಪ್ರಕರಣಕ್ಕೆ ಸಂಬಂಧಿಸಿ 5 ಮಂದಿ ಪೊಲೀಸರನ್ನು ಅಮಾನತುಗೊಳಿಸಿ ಮಂಗಳೂರು ನಗರ ಪೊಲೀಸ್ ಕಮಿಷನ‌ರ್ ಸುಧೀರ್ ಕುಮಾರ್ ರೆಡ್ಡಿ ಆದೇಶಿಸಿದ್ದಾರೆ.

ಲಂಚದ ಬೇಡಿಕೆಯಿರಿಸಿದ ಪ್ರಕರಣದಲ್ಲಿ ತಸ್ಲಿಂ ಹಾಗೂ ಸಹಕರಿಸಿದ ವಿನೋದ್ ನೇರ ಆರೋಪಿಗಳಾಗಿದ್ದು, ಅವರನ್ನು ಅಮಾನತು ಮಾಡಲಾಗಿದೆ.

ತಸ್ಲಿಂ ಮತ್ತು ವಿನೋದ್ ಅವರ ಲಂಚ ಬೇಡಿಕೆ ಬಗ್ಗೆ ಮಾಹಿತಿ ಗೊತ್ತಿದ್ದರೂ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೆ ಮೌನವಹಿಸಿದ್ದ ಇತರ ಮೂವರನ್ನೂ ಕೂಡಾ ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಪ್ರಕರಣದ ಹಿನ್ನೆಲೆ ನಂತೂರು ಸರ್ಕಲ್‌ನಲ್ಲಿ ಸಂಭವಿಸಿದ ಅಪಘಾತದ ಬಗ್ಗೆ ಕದ್ರಿ ಟ್ರಾಫಿಕ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕದ್ರಿ ಟ್ರಾಫಿಕ್ ಪೊಲೀಸ್‌ ಠಾಣೆಯ ಹೆಡ್‌ಕಾನ್ಸ್‌ಟೇಬಲ್ ತಸ್ಲಿಂ, ಕಾರು, ಕಾರಿನ ದಾಖಲಾತಿಗಳನ್ನು ಪೊಲೀಸ್‌  ಠಾಣೆಗೆ ತಂದು ಕೊಡುವಂತೆ ಸೂಚಿಸಿದ್ದು, ಅದರಂತೆ ಕಾರಿನ ಮಾಲಕರು ಎಲ್ಲವನ್ನೂ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು.

ಬಳಿಕ ತನ್ನ ಕಾರನ್ನು ಪೊಲೀಸ್‌ ಠಾಣೆಯಿಂದ ಬಿಡಿಸಿಕೊಳ್ಳಲು ಹೋದಾಗ ಹೆಡ್ ಕಾನ್ಸ್‌ಟೇಬಲ್‌ ತಸ್ಲಿಂ 50,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ಈ ಸಂಬಂಧ ಕಾರಿನ ಮಾಲಕರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಬಗ್ಗೆ ಕದ್ರಿ ಠಾಣೆಯ ಇಬ್ಬರು ಹೆಡ್‌ಕಾನ್ಸ್‌ಟೇಬಲ್‌ಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಇಂದು ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ತಸ್ಲಿಂನನ್ನು ಬಂಧಿಸಿದ್ದಾರೆ.

Leave a comment

Leave a Reply

Your email address will not be published. Required fields are marked *

Related Articles

ಕಾರ್ಕಳ ಟೈಗರ್ಸ್ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ರಕ್ತದೊತ್ತಡ–ಮಧುಮೇಹ ತಪಾಸಣೆ ಶಿಬಿರ

ಕಾರ್ಕಳ ಟೈಗರ್ಸ್ ಹಾಗೂ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಬ್ರಹತ್...

ಶ್ರೀ ಧೂಮಾವತಿ ಯುವಕ ಮಂಡಲ ನಿಟ್ಟೂರು ಆಶ್ರಯದಲ್ಲಿ ಉಚಿತ ನೇತ್ರ ಹಾಗೂ ಆರೋಗ್ಯ ತಪಾಸಣಾ ಶಿಬಿರ

ಶ್ರೀ ಧೂಮಾವತಿ ಯುವಕ ಮಂಡಲ(ರಿ), ವಿಷ್ಣುಮೂರ್ತಿ ನಗರ ನಿಟ್ಟೂರು, ಶ್ರೀಹರಿ ನೇತ್ರಾಲಯ, ಕಾರ್ತಿಕ್ ಎಸ್ಟೇಟ್ ಅಂಬಲಪಾಡಿ...

ರಾಜ್ಯ ಕಂಬಳ ಅಸೋಸಿಯೇಷನ್ ವತಿಯಿಂದ ಯುವಜನ ಕ್ರೀಡಾ ಸಬಲೀಕರಣ ಇಲಾಖೆ ಪ್ರಧಾನ ಕಾರ್ಯದರ್ಶಿ ಭೇಟಿ

ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಅವರ ನೇತೃತ್ವದಲ್ಲಿ, ರಾಜ್ಯ ಯುವಜನ...

ಬೈಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಶಿಶಿರ್ ಶೆಟ್ಟಿ ಆಯ್ಕೆ

“ಬೈಲೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿ ಬೈಲೂರು ಇಲ್ಲಿಯ ಹಳೆ ವಿದ್ಯಾರ್ಥಿ ಸಂಘವು ಪುನರ್...