ಪಡುಬಿದ್ರಿ :ಜೂ :30 ಸಂಗೀತವು ಜೀವನದ ಅವಿಭಾಜ್ಯ ಅಂಗವಾಗಿದೆ. ಅದು ಮಾನಸಿಕ ವಿಶ್ರಾಂತಿ , ಸೃಜನಶೀಲತೆ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ..
ಇದು ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ. ವಿವಿಧ ಸಮಾಜಿಕ ಕಾರ್ಯಕ್ರಮ ಮತ್ತು ಸಮಾರಂಭದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ಸಂಗೀತವು ಒಂದು ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ
..ಗ್ರಾಮೀಣ ಪ್ರದೇಶದ ಸಂಗೀತ ಪ್ರತಿಭೆಗಳಿಗೆ ಉತ್ತಮ ವೇದಿಕೆ ಯನ್ನು ಕಲ್ಪಿಸುವ ಕಾರ್ಯವನ್ನು ಹಿನ್ನೆಲೆ ಗಾಯಕಿ ಸುಶ್ಮಿತಾ ಎರ್ಮಾಳ್ ಹಮ್ಮಿಕೊಂಡಿರುವುದು ಶ್ಲಾಘನೀಯ.
ಈ ಮೂಲಕ ಬಹಳಷ್ಟು ಪ್ರತಿಭೆಗಳು ಹೂರಹೂಮ್ಮಲಿ ” ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಮೀನುಗಾರರ ಸಮಿತಿ ಜಿಲ್ಲಾಧ್ಯಕ್ಷ ವಿಶ್ವಾಸ್ ವಿ.ಅಮೀನ್ ಹೇಳಿದರು..
ಅವರು ಪಡುಬಿದ್ರಿ ಓಂಕಾರ್ ಕಲಾ ಸಂಗಮದಲ್ಲಿ ನಡೆದ ಸುಶ್ಮಿ ಮೆಲೋಡಿಯಸ್ ಎರ್ಮಾಳ್ ಸಂಸ್ಥೆಯ ವತಿಯಿಂದ ಹಿನ್ನೆಲೆ ಗಾಯಕಿ ಕು! ಸುಶ್ಮಿತಾ ಕೆೇಶವ್ ಎರ್ಮಾಳ್ ಸಾರಥ್ಯದಲ್ಲಿ ಜುಲೃೆ 27 ರಂದು ಪಡುಬಿದ್ರಿ ಸುಜಾತ ಆಡಿಟೋರಿಯಂ ನಲ್ಲಿ ನಡೆಯುವ *”ಗಾನ ಕೋಗಿಲೆ-2025 “* ದ.ಕ ಮತ್ತು ಉಡುಪಿ ಜಿಲ್ಲಾ ಮಟ್ಟದ ಕೊರೋಕೆ ಗಾಯನ ಸ್ಪರ್ಧೆಯ *”ಪೋಸ್ಟರ್ “* ಬಿಡುಗಡೆಗೊಳಿಸಿ ಮಾತನಾಡಿದರು.
ಕಾರ್ಯಕ್ರಮ ಸಂಯೋಜಕಿ ಕು! ಸುಶ್ಮಿತಾ ಕೇಶವ್ ಎರ್ಮಾಳ್ ಅಧ್ಯಕ್ಷತೆ ವಹಿಸಿದ್ದರು
ಈ ಸಂದರ್ಭದಲ್ಲಿ ಪಡುಬಿದ್ರಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷೆ ಯಶೋಧ ಪಡುಬಿದ್ರಿ,
ರೋಟರಿ ಪೂರ್ವ ಅಧ್ಯಕ್ಷೆ ಗೀತಾ ಅರುಣ್ , ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್, ಕ.ರ.ವೇ. ಉಡುಪಿ ಜಿಲ್ಲಾ ಮಹಿಳಾ ಸಮಿತಿ ಉಪಾಧ್ಯಕ್ಷೆ ಕಿರಣ್ ಪ್ರತಾಪ್ ಸಾಲ್ಯಾನ್ , ಉಪಸ್ಥಿತರಿದ್ದರು.
ಸುಶ್ಮಿತಾ ಎರ್ಮಾಳ್ ಸ್ವಾಗತಿಸಿ, ಸಂತೋಷ್ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು…