ಬ್ರಹ್ಮಾವರ ತಾಲೂಕಿನ ಕುಂಜಾಲು ಸಮೀಪ ದನದ ರುಂಡ ಕಡಿದು ರಸ್ತೆಯಲ್ಲಿ ಬಿಸಾಡಿ ಸಮಾಜದ ಶಾಂತಿ ಕದಡಿ ಕೋಮು ಪ್ರಚೋದನೆ ನೀಡಲು ಪ್ರಯತ್ನ ಮಾಡುತ್ತಿರುವವರನ್ನು ಶೀಘ್ರ ಬಂಧನ ಮಾಡಿ ಕಠಿಣ ಶಿಕ್ಷೆ ವಿಧಿಸಬೇಕು. ಪೋಲಿಸ್ ಇಲಾಖೆಗೆ ನವೀನ್ ಸಾಲಿಯಾನ್ ಮನವಿ ಮಾಡಿದ್ದಾರೆ
ನಿನ್ನೆ ರಾತ್ರಿ ಈ ದುಷ್ಕೃತ್ಯ ಎಸಗಿದ್ದು ಆರೋಪಿಗಳು ಯಾರೇ ಆಗಿದ್ದರು ಪೊಲೀಸ್ ಇಲಾಖೆ ಆ ಪರಿಸರದಲ್ಲಿರುವ ಸಿಸಿ ಟಿವಿ ಪರಿಶೀಲನೆ ಅಥವಾ ಇನ್ಯಾರೋ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ಪತ್ತೆ ಹಚ್ಚಿ ಕೂಡಲೇ ಬಂಧಿಸಿ
ವಿಚಾರಣೆ ನಡೆಸಿ ಇದರ ಹಿಂದೆ ಇರುವ ದುಷ್ಕೃತ್ಯ ಹಾಗೂ ದುಷ್ಕರ್ಮಿಗಳನ್ನು ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕುಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಗಮನಕ್ಕೂ ಕೂಡ ತಂದು ನವೀನ್ ಸಾಲ್ಯಾನ್ ಆಗ್ರಹಿಸಿದ್ದಾರೆ.