ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ  ದಿನಸಿ ಖರೀದಿಗೆ ಅಂಗಡಿಗೆ ಬರುತ್ತಿದ್ದ ಯುವತಿ ಮೇಲೆ ಲೈಂಗಿಕ ಕಿರುಕುಳ ಐದು ಮಂದಿ ಆರೋಪಿಗಳ ಬಂಧನ

41

“ದಿನಸಿ ತರಲು ಹೋದ ಯುವತಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಪುಂಡರ ಗ್ಯಾಂಗ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದು, 5 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಂತೆಯೇ ಪುಂಡರ ಪೈಶಾಚಿಕತೆಯ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ.


ಬೆಂಗಳೂರಿನ ಆನೇಕಲ್ ತಾಲೂಕಿನ ಮೈಲಸಂದ್ರ ಬಳಿಯ ರೇಣುಕಾ ಯಲ್ಲಮ್ಮ ಬಡಾವಣೆಯಲ್ಲಿ ನಡೆದಿದ್ದ ಯುವತಿ ಮೇಲಿನ ಲೈಂಗಿಕ ಕಿರುಕುಳ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬನ್ನೇರುಘಟ್ಟ ಪೊಲೀಸರು ಒಟ್ಟು ಐದು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತರನ್ನು ಜಾನ್ ರಿಚರ್ಡ್, ಪುನೀತ್, ಅನುಷ್ ಮದನ್, ಅರುಣ್ ಎಂದು ಗುರುತಿಸಲಾಗಿದೆ.

ಅಂತೆಯೇ ಈ ಗಲಾಟೆ ಪ್ರಕರಣದಲ್ಲಿ ಯುವತಿ ನೆರವಿಗೆ ಬಂದಿದ್ದ ವ್ಯಕ್ತಿಯ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

ಪೊಲೀಸರು ಆರೋಪಿಗಳಲ್ಲಿ ಒಬ್ಬರು ನೀಡಿರುವ ದೂರನ್ನು ಆಧರಿಸಿ ಯುವತಿಯನ್ನು ರಕ್ಷಿಸಿದ ಸ್ಕೂಟರ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಮಾಧ್ಯಮದಲ್ಲಿ ಉಲ್ಲೇಖಿಸಿದ್ದಾರೆ

ಬೆಂಗಳೂರಿನ ಆನೇಕಲ್ ತಾಲೂಕಿನ ರೇಣುಕಾ ಯಲ್ಲಮ್ಮ ಬಡಾವಣೆ ನಿವಾಸಿಯಾಗಿರುವ ಯುವತಿ ಜೂನ್ 22ರಂದು ಅಂದರೆ ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ದಿನಸಿ ತರಲು ಅಂಗಡಿಗೆ ಹೊರಟಿದ್ದಳು. ಈ ವೇಳೆ ಐದಾರು ಜನರು ಯುವಕರು ನಡುರಸ್ತೆಯಲ್ಲಿ ಯುವತಿಯನ್ನು ಅಡ್ಡ ಹಾಕಿದ್ದಾರೆ.

ಬಳಿಕ, ಓರ್ವ ಯುವಕ ಯುವತಿಯ ಮೈಕೈ ಮುಟ್ಟಿ ಎಳೆದಾಡಿದ್ದಾರೆ. ಇದಕ್ಕೆ ಯುವತಿ ಪ್ರತಿರೋಧ ತೋರಿದ್ದಾಳೆ. ಆಗ, ಓರ್ವ ಯುವಕ ಯುವತಿ ಮೇಲೆ ಹಲ್ಲೆ ಮಾಡಿದ್ದಾನೆ.

ಯುವತಿ ನೆರವಿಗೆ ಬಂಧ ಸ್ಥಳೀಯರ ಮೇಲೂ ಹಲ್ಲೆ ಈ ವೇಳೆ ಸ್ಥಳೀಯರು ಯುವತಿಯ ನೆರವಿಗೆ ಧಾವಿಸಿದ್ದಾರೆ. ನೆರವಿಗೆ ಧಾವಿಸಿದ ಸ್ಥಳೀಯರ ಮೇಲೂ ಯುವಕರು ಹಲ್ಲೆ ಮಾಡಿದ್ದಾರೆ.

ಯುವತಿಯನ್ನು ಬಚಾವ್ ಮಾಡಿ ಸ್ಥಳೀಯರು ಮನೆ ಬಳಿ ಕರೆದುಕೊಂಡು ಬಂದರೂ ಬಿಡದ ಯುವಕರು, ಆಕೆಯ ಮನೆ ಬಳಿ ಬಂದು ಗಲಾಟೆ ಮಾಡಿದ್ದಾರೆ.


ಪುಂಡರ ಹಾವಳಿಯ ಮತ್ತೊಂದು ವಿಡಿಯೋ ವೈರಲ್ ಇನ್ನು ಯುವತಿ ಮೇಲೆ ಪುಂಡರು ನಡೆಸಿದ ದೌರ್ಜನ್ಯದ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ. ಮನೆಯ ಕಾಪೌಂಡ್ ಒಳಗೆ ಬರಲು ಪುಂಡರು ಯತ್ನಿಸಿದ ವಿಡಿಯೋವನ್ನು ಸ್ಥಳೀಯರು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ.

ಯುವತಿ ಮೇಲೆ ಪುಂಡರು ಹಲ್ಲೆ ಮಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬನ್ನೇರುಘಟ್ಟ ‌ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a comment

Leave a Reply

Your email address will not be published. Required fields are marked *

Related Articles

ಪ್ರೀತಿ ನಾಟಕವಾಡಿ ಯುವತಿಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಿ ಕೈಕೊಟ್ಟು ಪರಾರಿಯಾದ ಮುಸ್ಲಿಂ ಯುವಕ

“ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನ ಬಿಟಿಎಂ ಲೇಔಟ್ ನಿವಾಸಿ,...

ತಾಯಿಯ ಖಾಸಗಿ ಫೋಟೋ ತೆಗೆದು ಪ್ರಿಯಕರನಿಗೆ ಕಳುಹಿಸಿದ ಮಗಳು ಪ್ರಕರಣ ದಾಖಲು

“ಬೆಂಗಳೂರು: ತಾಯಿಯ ಒಪ್ಪಿಗೆ ಇಲ್ಲದೆ ಆಕೆಯ ಖಾಸಗಿ ಪೋಟೋಗಳನ್ನು ತನ್ನ ಲವರ್ ಗೆ ಕಳುಹಿಸಿದ 23...

10ನೇ ತರಗತಿ ಬಾಲಕಿ ಗರ್ಭಿಣಿ,ಪೋಕ್ಸೊ ಪ್ರಕರಣದಾಖಲು ಆರೋಪಿ ಬಂಧನ ಶಾಲೆಯ ಪ್ರಾಂಶುಪಾಲ ಹಾಗೂ ವಾರ್ಡನ್ ಅಮಾನತು

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ವಸತಿ ಶಾಲೆಯಲ್ಲಿ ಓದುತ್ತಿರುವ 10 ನೇ ತರಗತಿಯ ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದುಬಂದಿದೆ....

ಅನ್ಯಕೋಮಿನ  ಗಂಡ ಹೆಂಡತಿ ಜಗಳ ನಿಲ್ಲಿಸಲು ಹೋದ ನೆರೆಮನೆಯ ಹಿಂದೂ ಯುವಕನ ಮೇಲೆ ನೈತಿಕ ಪೊಲೀಸ್ ಗಿರಿ

ಮುಸ್ಲಿಂ ಯುವತಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದಿಂದ ಹಿಂದೂ ಯುವಕನೊಬ್ಬನ ಮೇಲೆ ಬರ್ಬರ ರೀತಿಯಲ್ಲಿ ಹಲ್ಲೆ...